ಪ್ರೀತಿಸಿ ಮದುವೆಯಾದ ಮಡದಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು, ಅವಳ ಮುನಿಸು ಕರಗಿಸಿ ಮತ್ತೆ ಮನೆಗೆ ಕರೆತರಬೇಕು ಎಂದು ಆ ಪತಿ ಆಸೆಪಟ್ಟಿದ್ದ. ಹೆಂಡತಿ ಬರುತ್ತಾಳೆಂಬ (Wife Birthday Tragedy) ನಿರೀಕ್ಷೆಯಲ್ಲಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದ. ಆದರೆ, ಆಕೆಯ ಸುಳಿವೇ ಇರಲಿಲ್ಲ. ಕೊನೆಗೆ ಮನನೊಂದ ಆ ಯುವಕ ತೆಗೆದುಕೊಂಡ ದುಡುಕಿನ ನಿರ್ಧಾರ ಇಡೀ ಕುಟುಂಬವನ್ನೇ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಇಲ್ಲೆಂದು ಮಂಡಲದಲ್ಲಿ ಈ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

Wife Birthday Tragedy – ಪ್ರೀತಿಯಿಂದ ಕಟ್ಟಿದ ಸಂಸಾರದಲ್ಲಿ ಬಿರುಕು
ಇಲ್ಲೆಂದು ಮಂಡಲದ ತಿಲಕ್‌ನಗರ ಪಂಚಾಯಿತಿ ವ್ಯಾಪ್ತಿಯ ಕಲ್ತಿರಾಮಯ್ಯ ಗುಂಪು ನಿವಾಸಿ ದಾಟ್ಲ ವಿದ್ಯಾಸಾಗರ್ (26) ಮೃತ ದುರ್ದೈವಿ. ಈತ ಮಣುಗೂರು ಪ್ರದೇಶದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಸುಮಾರು ಮೂರು ವರ್ಷಗಳ ಹಿಂದೆ ಖಮ್ಮಂ ಜಿಲ್ಲೆಯ ಕಾರೆಪಲ್ಲಿ ಮಂಡಲದ ಯುವತಿಯೊಂದಿಗೆ ವಿದ್ಯಾಸಾಗರ್ ಪ್ರೇಮವಿವಾಹವಾಗಿದ್ದ. ಆರಂಭದಲ್ಲಿ ಇಬ್ಬರ ಸಂಸಾರ ಸುಖಕರವಾಗಿಯೇ ಸಾಗಿತ್ತು. ಮಣುಗೂರಿನಲ್ಲಿದ್ದ ಈ ದಂಪತಿ, ಕಳೆದ ಆರು ತಿಂಗಳ ಹಿಂದಷ್ಟೇ ಇಲ್ಲೆಂದು ಪ್ರದೇಶಕ್ಕೆ ಬಂದು ನೆಲೆಸಿದ್ದರು.
ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಶುರುವಾಗಿ, (Wife Birthday Tragedy) ಕಲಹ ತಾರಕಕ್ಕೇರಿತು. ಇದರಿಂದ ಬೇಸತ್ತ ಪತ್ನಿ, ಗಂಡನನ್ನು ಬಿಟ್ಟು ಖಮ್ಮಂನಲ್ಲಿರುವ ತವರು ಮನೆಗೆ ತೆರಳಿದ್ದಳು. ಸದ್ಯ ಆಕೆ ಅಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.

ಹುಟ್ಟುಹಬ್ಬದ ದಿನವೇ ಕೈಕೊಟ್ಟ ನಿರೀಕ್ಷೆ
ಸೋಮವಾರ ಪತ್ನಿಯ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನದಂದಾದರೂ ಹಳೆಯ ಕಹಿ ಘಟನೆಗಳನ್ನು ಮರೆತು ಪತ್ನಿ ಮರಳಿ ಮನೆಗೆ ಬರುತ್ತಾಳೆ, ಎಲ್ಲವನ್ನೂ ಸರಿಮಾಡಿಕೊಂಡು ಒಟ್ಟಿಗೆ ಕೇಕ್ ಕತ್ತರಿಸಬಹುದು ಎಂದು ವಿದ್ಯಾಸಾಗರ್ ಭಾವಿಸಿದ್ದ. ಇದೇ ಆಸೆಯಿಂದ ಆಕೆಗೆ ಕರೆ ಮಾಡಿ ಮಾತನಾಡಿದ್ದ. ಪತ್ನಿ ಬರುತ್ತಾಳೆಂಬ ಭರವಸೆಯೊಂದಿಗೆ ವಿದ್ಯಾಸಾಗರ್ ಇಲ್ಲೆಂದು ಬಸ್ ನಿಲ್ದಾಣಕ್ಕೆ ತೆರಳಿ, ಆಕೆಗಾಗಿ ಕಾದು ಕುಳಿತಿದ್ದ. ಬಸ್ಸುಗಳು ಒಂದರ ಮೇಲೊಂದರಂತೆ ಬಂದು ಹೋಗುತ್ತಿದ್ದರೂ ಆಕೆಯ ಸುಳಿವು ಮಾತ್ರ ಸಿಗಲಿಲ್ಲ. ಎಷ್ಟೇ ಹೊತ್ತು ಕಾದಿದ್ದರೂ ಪತ್ನಿ ಬಾರದೇ ಇದ್ದಾಗ, ಆತನ ನಿರೀಕ್ಷೆ ಸಂಪೂರ್ಣವಾಗಿ ನಿರಾಶೆಯಾಗಿ ಬದಲಾಯಿತು. Read this also : ಬಾಲ್ಕನಿಯಿಂದ ಆಯತಪ್ಪಿ ಬಿದ್ದ ಪುಟ್ಟ ಮಗು: ಕಣ್ಣು ಮುಚ್ಚಿ ತೆರೆಯುವುದರೊಳಗೆ ಜೀವ ಉಳಿಸಿದ ರಿಯಲ್ ಹೀರೋ!

ಮಧ್ಯರಾತ್ರಿ ದುರಂತ ಅಂತ್ಯ
ಬಸ್ ನಿಲ್ದಾಣದಿಂದ ತೀವ್ರ ಮನನೊಂದು ಮನೆಗೆ ಮರಳಿದ ವಿದ್ಯಾಸಾಗರ್, ಸೋಮವಾರ ತಡರಾತ್ರಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮ***ತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು (Wife Birthday Tragedy) ಆತನನ್ನು ಇಲ್ಲೆಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆತ ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮಗನ ಅಕಾಲಿಕ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ನೀಡಿದ ದೂರಿನ ಮೇರೆಗೆ ಇಲ್ಲೆಂದು ಸಿಐ (CI) ಸುರೇಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



