ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ಜಿಯೋ, ಏರ್‌ಟೆಲ್ ರೀಚಾರ್ಜ್ ಪ್ಲಾನ್ (Recharge Plans) ಎಷ್ಟು ದುಬಾರಿಯಾಗಲಿದೆ ಗೊತ್ತಾ?

Recharge Plans may become more expensive as Jio, Airtel and Vi consider tariff hikes

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಈಗ ಟೆಲಿಕಾಂ ಕಂಪನಿಗಳು ಮತ್ತೊಂದು ಶಾಕ್ (Recharge Plans) ನೀಡಲು ಸಜ್ಜಾಗಿವೆ. ಹೌದು, ನೀವು ಜಿಯೋ (Jio), ಏರ್‌ಟೆಲ್ (Airtel) ಅಥವಾ ವಿಐ (Vi) ಗ್ರಾಹಕರಾಗಿದ್ದರೆ, ಮುಂಬರುವ ದಿನಗಳಲ್ಲಿ ನಿಮ್ಮ ಮೊಬೈಲ್ ರೀಚಾರ್ಜ್‌ಗಾಗಿ ನಿಮ್ಮ ಜೇಬಿನಿಂದ ಹೆಚ್ಚು ಹಣ ಖರ್ಚಾಗುವುದು ಬಹುತೇಕ ಖಚಿತವಾಗಿದೆ. ಹಾಗಾದರೆ, ಮೊಬೈಲ್ ಪ್ಲಾನ್‌ಗಳು ಎಷ್ಟು ದುಬಾರಿಯಾಗಲಿವೆ? ಯಾವಾಗ ದರ ಏರಿಕೆಯಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Recharge Plans – ಮುಂದಿನ 3-4 ತಿಂಗಳಲ್ಲಿ ಜಿಯೋ, ಏರ್‌ಟೆಲ್, Vi ರೀಚಾರ್ಜ್ ಪ್ಲಾನ್ ದರ ಏರಿಕೆ?

‘ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್’ (Centrum Institutional Research) ಬಿಡುಗಡೆ ಮಾಡಿರುವ ಹೊಸ ವರದಿಯೊಂದು ಮೊಬೈಲ್ ಬಳಕೆದಾರರ ನಿದ್ದೆಗೆಡಿಸಿದೆ. ಈ ವರದಿಯ ಪ್ರಕಾರ, ಮುಂದಿನ ಕೇವಲ 3-4 ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ರೀಚಾರ್ಜ್ ದರಗಳನ್ನು ಶೇ. 12 ರಿಂದ 15ರಷ್ಟು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ.

Recharge Plans may become more expensive as Jio, Airtel and Vi consider tariff hikes

ದರ ಏರಿಕೆಗೆ ಅಸಲಿ ಕಾರಣವೇನು?

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಈಗ ಉಳಿದಿರುವುದು ಕೇವಲ 3 ಪ್ರಮುಖ ಖಾಸಗಿ ಕಂಪನಿಗಳು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ಕಂಪನಿ (3+1 ಲೆಕ್ಕಾಚಾರ). ಮಾರುಕಟ್ಟೆಯಲ್ಲಿ ಪೈಪೋಟಿ ಕಡಿಮೆಯಾಗಿರುವುದರಿಂದ, ಕಂಪನಿಗಳಿಗೆ ಸುಲಭವಾಗಿ ಟ್ಯಾರಿಫ್ ದರ ಹೆಚ್ಚಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗಷ್ಟೇ ಸಂಸದ ರಾಘವ್ ಚಡ್ಡಾ ಅವರು ಟ್ರಾಯ್ (TRAI) ತಂದಿರುವ 30 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ನಿಯಮವನ್ನು ಸ್ವಾಗತಿಸಿದ್ದರು. ಬಳಕೆದಾರರಿಗೆ ಅನುಕೂಲವಾಗುವ ಇಂತಹ ಕೆಲವು ನಿಯಮಗಳ ಜಾರಿಯ ಬೆನ್ನಲ್ಲೇ, ಕಂಪನಿಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ಬೆಲೆ ಏರಿಕೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿವೆ.

ಗ್ರಾಹಕರ ಕಿಸೆಗೆ ಕತ್ತರಿ, ಟೆಲಿಕಾಂ ಕಂಪನಿಗಳಿಗೆ ಭರ್ಜರಿ ಲಾಭ!

ಗ್ರಾಹಕರು ನಿಧಾನವಾಗಿ 2G ಯಿಂದ ವೇಗದ 4G ಮತ್ತು 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಆಗುತ್ತಿದ್ದಾರೆ. ಜೊತೆಗೆ ಪೋಸ್ಟ್‌ಪೇಯ್ಡ್ ಸಂಪರ್ಕ ಪಡೆಯುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದರಿಂದ ಟೆಲಿಕಾಂ ಕಂಪನಿಗಳ ‘ಪ್ರತಿ ಗ್ರಾಹಕನಿಂದ ಬರುವ ಸರಾಸರಿ ಆದಾಯ’ (ARPU) ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. Read this also : ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮ: ಯಾವ ಬದಲಾವಣೆಗೆ ಯಾವ ದಾಖಲೆ ಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್!

ಕಂಪನಿಗಳ ARPU (ಸರಾಸರಿ ಆದಾಯ) ಲೆಕ್ಕಾಚಾರ ಹೇಗಿರಲಿದೆ?

2026-27ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಕಂಪನಿಗಳ ಸರಾಸರಿ ಆದಾಯ ಶೇ.0.8 ರಿಂದ 2.0ರಷ್ಟು ಹೆಚ್ಚಾಗುವ ಅಂದಾಜಿದೆ:

  • ಏರ್‌ಟೆಲ್ (Airtel): ಶೇ.2ರಷ್ಟು ಏರಿಕೆಯೊಂದಿಗೆ ತಿಂಗಳಿಗೆ ₹269 ತಲುಪುವ ನಿರೀಕ್ಷೆ. ಇದು ಇಡೀ ಟೆಲಿಕಾಂ ಉದ್ಯಮದಲ್ಲೇ ಅತಿ ಹೆಚ್ಚು!
  • ಜಿಯೋ (Reliance Jio): ಶೇ.1ರಷ್ಟು ಹೆಚ್ಚಳದೊಂದಿಗೆ ತಿಂಗಳಿಗೆ ₹218 ತಲುಪಬಹುದು.
  • ವೊಡಾಫೋನ್ ಐಡಿಯಾ (Vi): ಶೇ.0.8ರಷ್ಟು ಏರಿಕೆಯಾಗಿ ₹178 ಕ್ಕೆ ತಲುಪುವ ಅಂದಾಜಿದೆ.

Recharge Plans may become more expensive as Jio, Airtel and Vi consider tariff hikes

ಯಾವ ನೆಟ್‌ವರ್ಕ್ ಕಡೆಗೆ ಗ್ರಾಹಕರ ಒಲವು ಹೆಚ್ಚಿದೆ?

ಬೆಲೆ ಏರಿಕೆಯ ಚರ್ಚೆಯ ನಡುವೆಯೂ, ಗ್ರಾಹಕರು ಹೊಸ ಸಿಮ್ ಖರೀದಿಸುವುದನ್ನು ನಿಲ್ಲಿಸಿಲ್ಲ. ಸೆಂಟ್ರಮ್ ವರದಿಯ ಪ್ರಕಾರ, ವೊಡಾಫೋನ್ ಐಡಿಯಾಗೆ ಹೋಲಿಸಿದರೆ ಏರ್‌ಟೆಲ್ ಮತ್ತು ಜಿಯೋ ಅತಿ ಹೆಚ್ಚು ಹೊಸ ಗ್ರಾಹಕರನ್ನು ಸೆಳೆಯುತ್ತಿವೆ.

  • ಜಿಯೋ: ಮುಂಬರುವ ತ್ರೈಮಾಸಿಕದಲ್ಲಿ ಬರೋಬ್ಬರಿ 80 ಲಕ್ಷ ಹೊಸ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದ್ದು, ಒಟ್ಟು ಬಳಕೆದಾರರ ಸಂಖ್ಯೆ1 ಕೋಟಿ ಮುಟ್ಟಲಿದೆ.
  • ಏರ್‌ಟೆಲ್: ಸುಮಾರು 30 ಲಕ್ಷ ಹೊಸ ಗ್ರಾಹಕರ ಸೇರ್ಪಡೆಯೊಂದಿಗೆ, ಒಟ್ಟು 38 ಕೋಟಿ ಬಳಕೆದಾರರನ್ನು ಹೊಂದಲಿದೆ.
  • ವಿಐ (Vi): ಕೇವಲ 10 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವ ಮೂಲಕ4 ಕೋಟಿ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.

ಇದು ಕೇವಲ ಅಂದಾಜು, ಸದ್ಯಕ್ಕಿಲ್ಲ ಅಧಿಕೃತ ಘೋಷಣೆ: ಆತಂಕ ಬೇಡ!

ಮೊಬೈಲ್ ಬಳಕೆದಾರರು ಈಗಲೇ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ, ಇದು ಬ್ರೋಕರೇಜ್ ಸಂಸ್ಥೆಯೊಂದು ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಮಾಡಿರುವ ಅಂದಾಜು ಮಾತ್ರ. ಜಿಯೋ, ಏರ್‌ಟೆಲ್ ಅಥವಾ Vi ಕಂಪನಿಗಳು ದರ ಏರಿಕೆಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ನಿಮ್ಮ ಪ್ರಸ್ತುತ ₹299 ಅಥವಾ ₹349 ಪ್ಲಾನ್‌ಗಳು ನಾಳೆಯೇ ದುಬಾರಿಯಾಗುವುದಿಲ್ಲ. ಪ್ಲಾನ್‌ಗಳ ವ್ಯಾಲಿಡಿಟಿ, ಡೇಟಾ ಮಿತಿ ಮತ್ತು ದರಗಳ ಬಗ್ಗೆ ಕಂಪನಿಗಳು ಅಧಿಕೃತವಾಗಿ ತಿಳಿಸುವವರೆಗೆ ಕಾಯುವುದು ಉತ್ತಮ.

Leave a Comment

Your email address will not be published. Required fields are marked *

Scroll to Top