ಸದ್ಯ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಅನೇಕ ಕಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮುಂಗಾರು ಆರ್ಭಟಕ್ಕೆ ಹಲವಾರು ಸಾವು ನೋವುಗಳೂ ಸಹ ಸಂಭವಿಸಿದೆ. ಮಳೆಯ ನೀರಿನಿಂದ ನದಿ, ಹೊಳೆಯ ನೀರು ಕೆಸರು ಬಣ್ಣಕ್ಕೆ ತಿರುಗುತ್ತದೆ. ಆದರೆ ಇಲ್ಲೊಂದು ವಿಸ್ಮಯ ನಡೆದಿದೆ. ಭಾರಿ ಮಳೆಗೆ ನದಿ ಹೊಳೆ ತುಂಬಿ ತೋಟಕ್ಕೆ ನೀರು ಹರಿದಿದೆ. ಆದರೆ ಆ ತೊಟದಲ್ಲಿರುವ ಬಾವಿಯ ನೀರು ಮಾತ್ರ ಕೆಸರಾಗದೇ ಸ್ವಚ್ಚವಾಗಿಯೇ ಉಳಿದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ (Viral Video) ಸದ್ದು ಮಾಡುತ್ತಿದೆ.
ಕರ್ನಾಟಕದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಈ ನಡುವೆ ನದಿಗಳು ತುಂಬಿ ಹರಿಯುತ್ತಿವೆ. ಅನೇಕ ಅಣೆಕಟ್ಟುಗಳು ಗರಿಷ್ಟ ಮಟ್ಟ ತಲುಪುತ್ತಿವೆ. ಕೆಲವೊಂದು ಭಾಗಗಳಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು, ಗುಡ್ಡಕುಸಿತ, ಜಮೀನುಗಳಿಗೆ ಮಳೆಯ ನೀರು ನುಗ್ಗಿರುವಂತಹ ಘಟನೆಗಳ ಜೊತೆಗೆ ಕೆಲವೊಂದು ಮನೆಗಳು ಜಲಾವೃತಗೊಂಡಿದೆ. ಈ ನಡುವೆ ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆಳ್ಳಿಪ್ಪಾಡಿ ಎಂಬಲ್ಲಿನ ಕೂಟೇಲು ಬಳಿ ಅಚ್ಚರಿಯೊಂದು ಕಂಡಿದೆ. ಪ್ರಕೃತಿ ವಿಶೇಷತೆ ಎಂದೇ ಹೇಳಬಹುದಾಗಿದೆ. ಭಾರಿ ಮಳೆಗೆ ನದಿ ಹೊಳೆ ತುಂಬಿ ಹರಿದು ತೋಟ ಮುಳುಗಿದರೂ ತೋಟದಲ್ಲಿರುವ ಬಾವಿಗೆ ಮಾತ್ರ ಆ ಕೆಸರು ನೀರು ಸೋಕದೆ, ನೀರು ಸ್ವಚ್ಚವಾಗಿ ತಿಳಿಯಾಗಿಯೇ ಇದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
to watch video click this link : https://www.instagram.com/p/C9pn0uFP6nv/
ಇನ್ನೂ ಈ ವಿಸ್ಮಯದ ವಿಡಿಯೋವನ್ನು ಮನ್ಮಥ ಶೆಟ್ಟಿ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ. nammabillaver ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಇನ್ನೂ ವೈರಲ್ (Viral Video) ಆಗುತ್ತಿರುವ ವಿಡಿಯೋದಲ್ಲಿ ಭಾರಿ ಮಳೆಯಿಂದಾಗಿ ನದಿ ಹೊಳೆ ತುಂಬಿ ಹರಿದು ಅಡಿಕೆ ತೋಟಕ್ಕೆ ನುಗ್ಗಿ ತೋಟ ಮುಳುಗಿದೆ. ಅಲ್ಲಿದ್ದ ಬಾವಿಗೆ ಮಾತ್ರ ಹೊಳೆಯ ನೀರಿನ ಕೆಸರು ತಾಕದೆ, ನೀರು ತಿಳಿಯಾಗಿ ಸ್ವಚ್ಚಂದವಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಸಾವಿರಗಟ್ಟಲೇ ವ್ಯೂವ್ಸ್ ಕಂಡಿದ್ದು, ಪ್ರಕೃತಿಯ ವಿಸ್ಮಯ ಕಂಡು ಅನೇಕರು ಆಶ್ಚರ್ಯಗೊಂಡಿದ್ದಾರೆ.