ಸದ್ಯ ದೇಶದಲ್ಲಿ ವಕ್ಫ್ ಬೋರ್ಡ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಕ್ಫ್ ಜಾಗದಲ್ಲಿ (Waqf Land) ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಸಂಸತ್ ಭವನ, ಅದರ ಸುತ್ತಮುತ್ತಲಿನ ಪ್ರದೇಶಗಳು, ವಸಂತ ವಿಹಾರದಿಂದ ವಿಮಾನ ನಿಲ್ದಾಣದವರೆಗೆ ವಕ್ಫ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಮಾದ್ಯಮಗಳ ಜೊತೆ ಮಾತನಾಡುವಾಗ ಹೇಳಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅಸಂಬದ್ಧ ಹೇಳಿಕೆಯೊಂದನ್ನು ನೀಡಿದ್ದಾರೆ. 15 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಅಜ್ಮಲ್ ಅವರು ಸುದ್ದಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ನಾನು 15 ವರ್ಷಗಳ ಕಾಲ ಸಂಸತ್ತಿನಲ್ಲಿದ್ದೆ, ಮತ್ತು ವಕ್ಫ್ ಭೂಮಿಯಲ್ಲಿ ಸಂಸತ್ತು ನಿರ್ಮಿಸಲಾಗಿದೆ ಎಂಬ ವದಂತಿಗಳಿವೆ. ಅದಕ್ಕಾಗಿಯೇ ನಾನು ಈ ಬಗ್ಗೆ ತನಿಖೆಗೆ ಕೇಳುತ್ತಿದ್ದೇನೆ ಮತ್ತು ಅದು ನಿಜವಾಗಿದ್ದರೆ ದೊಡ್ಡ ತಪ್ಪು. ಅನುಮತಿ ಇಲ್ಲದೆ ವಕ್ಫ್ ಭೂಮಿಯನ್ನು ಬಳಸುವುದು ಸರಿಯಲ್ಲ. ವಕ್ಫ್ ಬೋರ್ಡ್ ಸಮಸ್ಯೆ ಇತ್ಯರ್ಥವಾದ ಕೂಡಲೇ ತಮ್ಮ ಸಚಿವಾಲಯದ ಜಾಗವನ್ನು ಕಳೆದುಕೊಳ್ಳುತ್ತಾರೆ. ಇದು ನಮ್ಮ ಪೂರ್ವಜರ ಆಸ್ತಿ. ಭೂಮಿ ವಕ್ಫ್‌ಗೆ ಸೇರಿದ್ದು. ಒಂದು ವೇಳೆ ಸಾಕ್ಷ್ಯಾಧಾರಗಳಿದ್ದರೆ, ಅದನ್ನು ಬಳಸುವವರು ವಕ್ಫ್‌ಗೆ ಬಾಡಿಗೆ ಪಾವತಿಸಬೇಕು ಎಂದಿದ್ದಾರೆ.ಎಂದು ಹೇಳಿಕೆ ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ವಕ್ಫ್ ಮಸೂದೆಯನ್ನು ಪ್ರಶ್ನಿಸಲು ಜಮಿಯತ್ ಉಲೇಮಾ-ಎ-ಹಿಂದ್ ಅಸ್ಸಾಂನಲ್ಲಿ ವಕ್ಫ್ ಬೋರ್ಡ್ ಜಮೀನುಗಳ ಸಮೀಕ್ಷೆಯನ್ನು ನಡೆಸಲಿದೆ. ವಕ್ಫ್ ಮಸೂದೆಯ ಮೇಲಿನ ಕಾನೂನು ಹೋರಾಟ ಮುಂದುವರಿಯುತ್ತದೆ. ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳು ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯನ್ನು ಬಹಿಷ್ಕರಿಸಿವೆ. 5 ಕೋಟಿ ಜನರು ಜೆಪಿಸಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ, ಮಸೂದೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ಅಜ್ಮಲ್ ಹೇಳಿದರು.