ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಲೋಹಗಳ ಕಸುಬುಗಳನ್ನು ಮಾಡುವ ಮೂಲಕ ವಿಶ್ವಕರ್ಮ (Vishwakarma Jayanthi) ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಜಿ.ವಿ. ಚಂದ್ರಶೇಖರ್ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ (Vishwakarma Jayanthi) ಮಾತನಾಡಿ ಸರ್ವಧರ್ಮ ಜನಾಂಗದ ಜೊತೆ ಸಾಮರಸ್ಯವನ್ನು ಸಾಧಿಸಿ ಅವರಿಗೆ ಬೇಕಾದಂತಹ ಮೂರ್ತಿಗಳನ್ನು ಕೆತ್ತನೆ ಮಾಡಿಕೊಟ್ಟವರನ್ನು ವಿಶ್ವಕರ್ಮ ಜನಾಂಗ ಎಂದರು. ಕರ್ಮವನ್ನು, ಕ್ರಿಯೆಯನ್ನು ಮಾಡಿದ ಸತ್ಯದೇವನನ್ನು ವಿಶ್ವಕರ್ಮ ಎಂದು ಕರೆಯುತ್ತಾರೆ ಎಂದು ತಿಳಿಸಿದರು. ವಿಶ್ವಕರ್ಮನ ಪರಂಪರೇ ಎಲ್ಲಾ ಯುಗಗಳಲ್ಲೂ ಪ್ರಸ್ತಾಪವಾಗಿದೆ ಕಾರಣ ಎಲ್ಲಾ ಕಾಲಗಳಲ್ಲೂ ಈ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುವಲ್ಲಿ ವಿಶ್ವಕರ್ಮ ಸಮುದಾಯ (Vishwakarma Jayanthi) ತೊಡಗಿಸಿಕೊಂಡಿದ್ದು, ಶಿವ, ವಿಷ್ಣು, ಇಂದ್ರ ಮುಂತಾದ ದೇವರಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟ ವಿಶ್ವಕರ್ಮ ಅವರ ಕೌಶಲ, ತಾಳ್ಮೆ ಇಂದಿನ ಯುವ ಜನರಿಗೆ ಮಾದರಿಯಾಗಬೇಕು. ವಿಶ್ವಕರ್ಮ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಶೈಕ್ಷಣಿಕವಾಗಿ ಮುಂದೆ ತರಬೇಕು. ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮುದಾಯದ ಮುಖಂಡರು ಶ್ರಮಿಸಬೇಕು ಎಂದು ಹೇಳಿದರು.
ನಂತರ ಬಿಇಒ ಕೃಷ್ಣಪ್ಪ ಮಾತನಾಡಿ ಪಂಚ ಲೋಹಗಳನ್ನು ಬಳಸಿ ಬಗೆ ಬಗೆಯ ಸಾಧನ, ಸಲಕರಣೆಗಳು, ಮೂರ್ತಿಗಳನ್ನು ಸಿದ್ಧಪಡಿಸುವ ಕರಕುಶಲತೆ ಹೊಂದಿರುವ ವಿಶ್ವಕರ್ಮ ಸಮುದಾಯದವರ (Vishwakarma Jayanthi) ಕೈಯಲ್ಲಿ ಕಲ್ಲುಗಳು ಕೂಡ ಶಿಲೆಯಾಗಿ ಅರಳುತ್ತವೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡ ವಿಶ್ವಕರ್ಮ ಅವರಿಗೆ ಇಡೀ ವಿಶ್ವವೇ ಋಣಿಯಾಗಿದೆ. ಈ ರೀತಿಯಾಗಿ ವಿಶ್ವವನ್ನು ತಯಾರು ಮಾಡಿದಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಇಂದು ವಿಶ್ವಕರ್ಮ ಜಯಂತಿಯನ್ನಾಗಿ ಆಚರಿಸಲಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ ವಿಶ್ವಕರ್ಮ (Vishwakarma Jayanthi) ಒಂದು ಸಮುದಾಯವಾಗದೆ ವಿಶ್ವಕರ್ಮ ಸಮುದಾಯವರಿಗೆ ಕಲೆ ರಕ್ತಗತ ಬಂದಿದೆ. ಅದನ್ನು ಸಮಾಜ ಸದಾ ಗೌರವಿಸಲಿದೆ. ಸಮುದಾಯ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಬೇಕು. ಸಮಾಜದ ಎಲ್ಲಾ ಸ್ತರಗಳಲ್ಲಿ ವಿಶ್ವಕರ್ಮ ಸಮುದಾಯದವರ ಕೊಡುಗೆ ಮಹತ್ವವಾದುದು. ಈ ನಿಟ್ಟಿನಲ್ಲಿ ವಿಶ್ವಕರ್ಮನನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಸಮಸ್ತ ಸಮಾಜದ ದೇವರಾಗಿ ಸ್ವೀಕರಿಸೋಣ ಎಂದರು.
ಸಮುದಾಯದ ಮುಖಂಡ ಬ್ರಮ್ಮಾಚಾರಿ ಮಾತನಾಡಿ ಅನಾದಿ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು (Vishwakarma Jayanthi) ತಮ್ಮ ಮೂಲವೃತ್ತಿಯಲ್ಲಿ ಕರಕುಶಲತೆಯನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಇಂದಿಗೂ ಸಹ ಸಮಾಜದಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡಿಲ್ಲ. ಇದರಿಂದ ಕೆಲವರು ಆರ್ಥಿಕತೆಯಲ್ಲಿ ಹಿಂದುಳಿದಿದ್ದಾರೆ. ವಿಶ್ವಕರ್ಮ ಸಮುದಾಯದವರು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಆರ್ಥಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ತಿಳಿಸಿದರು.
ಈ (Vishwakarma Jayanthi) ಸಂದರ್ಭದಲ್ಲಿ ಉಪ ತಹಸೀಲ್ದಾರ್ ತುಳಸಿ, ಗುಡಿಬಂಡೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಣೇಶ್, ಪಪಂ ಮುಖ್ಯಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿರೆಡ್ಡಿ, ತಾಲೂಕು ಪಶು ಇಲಾಖೆಯ ಅಧಿಕಾರಿ ಡಾ.ಸುಬ್ರಮಣ್ಯ, ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ, ಕೆಡಿಪಿ ಸದಸ್ಯ ರಿಯಾಜ್ ಪಾಷಾ, ಸಮುದಾಯ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.