Viral Video – ಪ್ರಾಣಿಗಳಲ್ಲಿ ಸಹ ಬುದ್ಧಿವಂತಿಕೆ ಮತ್ತು ಅರ್ಥೈಸುವ ಸಾಮರ್ಥ್ಯವಿದೆ ಎಂಬುದಕ್ಕೆ ಮೆಹೆರ್ಪುರದಲ್ಲಿ ನಡೆದ ಈ ಮನಮುಟ್ಟುವ ಘಟನೆ ತಾಜಾ ಉದಾಹರಣೆ. ಗಾಯಗೊಂಡ ಮಂಗವೊಂದು ತನ್ನ ನೋವನ್ನು ಅರಿತು, ಸಹಾಯಕ್ಕಾಗಿ ನೇರವಾಗಿ ಮೆಡಿಕಲ್ ಶಾಪ್‌ಗೆ ಹೋದ ಘಟನೆ ಇದೀಗ ಎಲ್ಲರ ಮನಸ್ಸು ಗೆದ್ದಿದೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Viral Video – ವಿಡಿಯೋದಲ್ಲಿ ಏನಿದೆ?
ಘಟನೆಯು ಬಾಂಗ್ಲಾದೇಶದ ಮೆಹೆರ್ಪುರ ಪಟ್ಟಣದ ಅಲ್ಹೆರಾ ಫಾರ್ಮಸಿಯಲ್ಲಿ ನಡೆದಿದೆ. ಅನಿರೀಕ್ಷಿತವಾಗಿ ಮೆಡಿಕಲ್ ಶಾಪ್‌ಗೆ ನುಗ್ಗಿದ ಕೋತಿಯ ವರ್ತನೆ ನೋಡಿದ ಜನರು ದಿಗ್ಭ್ರಮೆಗೊಳಗಾದರೂ, ಅದು ಗಾಯಗೊಂಡಿರುವುದು ಗಮನಿಸಿದ ತಕ್ಷಣವೇ ನೆರವಿಗೆ ಮುಂದಾದರು. ಅಂಗಡಿಯ ವ್ಯಕ್ತಿಗಳು ಮಂಗನಿಗೆ ಸಾಂತ್ವನ ಹೇಳಿ, ಗಾಯದ ಮೇಲೆ ಮುಲಾಮು ಹಚ್ಚಿ, ಎಚ್ಚರಿಕೆಯಿಂದ ಬ್ಯಾಂಡೇಜ್ ಸುತ್ತುವ ಮೂಲಕ ಪ್ರಾಣಿಯ ಪ್ರಾಥಮಿಕ ಚಿಕಿತ್ಸೆಯನ್ನು ಮಾಡಿದರು. ವಿಶೇಷವೆಂದರೆ, ಕೋತಿ ಇದಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.
Viral Video Link Here : Click Here
ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನೋವಿನಿಂದ ಬಳಲುತ್ತಿದ್ದ ಕೋತಿಯೊಂದು ಮೆಡಿಕಲ್ ಶಾಪ್‌ಗೆ ಪ್ರವೇಶಿಸಿ, ಜನರಿಂದ ಸಹಾಯ ಪಡೆಯುತ್ತಿರುವ ದೃಶ್ಯ ಎಲ್ಲರ ಮನಸು ಗೆದ್ದಿದೆ. ವಿಶೇಷವಾಗಿ, ಕೋತಿ ಚಿಕಿತ್ಸೆ ನೀಡುವವರಿಗೆ ಯಾವುದೇ ತೊಂದರೆ ನೀಡದೆ ಶಾಂತವಾಗಿಯೇ ಸಹಕರಿಸಿದ್ದು, ಎಲ್ಲರ ಗಮನ ಸೆಳೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಘಟನೆಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ನೈಜ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಪ್ರಾಣಿಗಳಿಗೂ ನಮ್ಮ ಆರೈಕೆ ಮತ್ತು ಸಹಾನುಭೂತಿಯ ಅಗತ್ಯವಿದೆ ಎಂಬ ಸಂದೇಶವನ್ನು ಇದು ಸ್ಪಷ್ಟಪಡಿಸಿದೆ. ಈ ಘಟನೆ ಜನರ ಮನ ಮುಟ್ಟುವಂತಿದೆ ಮತ್ತು ಜನರು ಇದರಿಂದ ದೊಡ್ಡ ಪಾಠ ಕಲಿಯಬಹುದು.