Tuesday, July 1, 2025
HomeNationalViral Video: ಕ್ಷುಲ್ಲಕ ಕಾರಣಕ್ಕಾಗಿ ರಸ್ತೆಯಲ್ಲಿಯೇ ದೊಣ್ಣೆಗಳಿಂದ ಹೊಡೆದಾಡಿಕೊಂಡ ಮಹಿಳೆಯರು….!

Viral Video: ಕ್ಷುಲ್ಲಕ ಕಾರಣಕ್ಕಾಗಿ ರಸ್ತೆಯಲ್ಲಿಯೇ ದೊಣ್ಣೆಗಳಿಂದ ಹೊಡೆದಾಡಿಕೊಂಡ ಮಹಿಳೆಯರು….!

ನೋಡ ನೋಡುತ್ತಿದ್ದಂತೆ ಕೆಲವೊಮ್ಮೆ ಜೋರು ಗಲಾಟೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕಾಗಿ ತುಂಬಾನೆ ಗಲಾಟೆಯಾಗುತ್ತದೆ. ಈ ಗಲಾಟೆಗಳಿಗೆ ಸಂಬಂಧಿಸಿದ ಸುದ್ದಿಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ದೋಘಾಟ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯರು ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ (Viral Video) ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Ugly Fight of 2 women groups

ಇತ್ತೀಚಿಗೆ ಹಲವು ಗಲಾಟೆಗಳು ಕ್ಷುಲ್ಲಕ ಕಾರಣಗಳಿಂದ ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ದೋಘಾಟ್ ನಲ್ಲಿ ನಡೆದಿದೆ. ಸದ್ಯ ಕೆಲವೊಂದು ಸುದ್ದಿ ಮೂಲಗಳ ಪ್ರಕಾರ ಹಾಡು ಹಾಕುವ ವಿಚಾರಕ್ಕೆ ಎರಡು ಮಹಿಳೆಯರ ಗುಂಪಿನ ನಡುವೆ ಜಗಳವಾಗಿದೆ. ಬಳಿಕ ಈ ಜಗಳ ವಿಕೋಪಕ್ಕೆ ತಿರುಗಿದೆ. ನಂತರ ಮಹಿಳೆಯರು ದೊಣ್ಣೆಗಳನ್ನು ಹಿಡಿದು ಪರಸ್ಪರ ಹೊಡೆದಾಡಲು ಶುರು ಮಾಡಿದ್ದಾರೆ. ಜನನಿಬಿಡ ರಸ್ತೆಯಲ್ಲಿ 8-10 ಮಹಿಳೆಯರು ಜಗಳ ಮಾಡಿಕೊಂಡಿದ್ದಾರೆ. ಈ ಜಗಳವನ್ನು ಬಿಡಿಸಲು ಹೋದಂತಹವರಿಗೆ ಸರಿಯಾಗಿಯೇ ಗೂಸ ಬಿದ್ದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. @ janabkhan08 ಎಂಬ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯರು ಯಾವ ರೀತಿ ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಳ್ಳುತ್ತಾರೆ ಎಂಬುದನ್ನು ಕಾಣಬಹುದಾಗಿದೆ. ಈ ಗಲಾಟೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಕೆಲವು ಮಹಿಳೆಯರೂ ಸಹ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಇನ್ನೂ ವೈರಲ್ ಆಗುತ್ತಿರುವ ವಿಡಿಯೋವನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದ್ದು, ಗಾಯಗೊಂಡಂತಹವರ ಹೇಳಿಕೆಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular