ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಪೋನ್ ಇದ್ದೇ ಇರುತ್ತದೆ ಎಂದು ಹೇಳಬಹುದು. ಯಾವುದೇ ಒಂದು ಸ್ಮಾರ್ಟ್ ಪೋನ್ ಒಂದು ವರ್ಷವಾಗುತ್ತಿದ್ದಂತೆ ಸ್ಲೋ ಆಗುತ್ತದೆ, ಜೊತೆಗೆ ಪೋನ್ ಹೆಚ್ಚು ಬಳಸಿದರೂ ಸ್ಲೋ ಆಗುತ್ತೆ ಎಂದು ಹೇಳಬಹುದಾಗಿದೆ. ನಿಮ್ಮ ಹಳೆಯ ಪೋನ್ ತುಂಬಾ ಸ್ಲೋ ಆಗಿ ಕೆಲಸ ಮಾಡುತ್ತಿದ್ದರೇ, ನೀವು ಈ ಟ್ರಿಕ್ಸ್ ಬಳಸಿ ನಿಮ್ಮ ಸ್ಮಾರ್ಟ್ ಪೋನ್ ಅನ್ನು ಹೊಸ ಪೋನ್ ಮಾದರಿಯಲ್ಲಿ (Phone Tricks) ಸ್ಪೀಡ್ ಆಗಿ ಬಳಸಬಹುದಾಗಿದೆ. ಈ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಯಾವುದೇ ಒಂದು ಸ್ಮಾರ್ಟ್ ಪೋನ್ ಖರೀದಿಸಿದ ವರ್ಷಗಳು ಕಳೆಯುತ್ತಿದ್ದಂತೆ ಅದು ಸ್ಲೋ ಆಗುತ್ತದೆ. ಇದರಿಂದ ಅನೇಕರು ಬೇಸತ್ತು ಹೊಸ ಪೋನ್ ಗಳನ್ನು ಖರೀದಿಸುತ್ತಾರೆ. ಆದರೆ ನಿಮ್ಮ ಹಳೇಯ ಪೋನ್ ಅನ್ನು ಸಹ ಸ್ಪೀಡ್ ಆಗಿ ಕೆಲಸ ಮಾಡಲು ಕೆಲವೊಂದು ಟಿಪ್ಸ್ ಫಾಲೋ ಮಾಡಬಹುದಾಗಿದೆ. ನಿಮ್ಮ ಹಳೇಯ ಪೋನ್ ಸ್ಪೀಡ್ ಆಗಿ ಕೆಲಸ ಮಾಡಲು ಈ ಕೆಳಗೆ ತಿಳಿಸಿದ ಟಿಪ್ಸ್ ಫಾಲೋ ಮಾಡಬಹುದಾಗಿದೆ.
ವ್ಯರ್ಥವಾಗಿರುವ ಆಪ್ ಗಳನ್ನು ಅನ್ ಇನ್ಸ್ಟಾಲ್ ಮಾಡಿ: ಸ್ಮಾರ್ಟ್ ಪೋನ್ ನಲ್ಲಿ ಅನೇಕ ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಂಡಿರುತ್ತಾರೆ. ಕೆಲವೊಂದು ಆಪ್ ಗಳು ಮೊದಲೇ ಇನ್ಸ್ಟಾಲ್ ಆಗಿರುತ್ತದೆ. ಆದರೆ ನಾವು ಕೆಲವೊಂದು ಆಪ್ ಗಳನ್ನು ಮಾತ್ರ ಬಳಸುತ್ತೇವೆ. ಹೀಗೆ ಉಪಯೋಗಿಸದೇ ಇರುವಂತಹ ಆಪ್ ಗಳನ್ನು ಪೋನ್ ನಿಂದ ಅನ್ ಇನ್ಸ್ಟಾಲ್ ಮಾಡಬೇಕು. ಆಗ ನಿಮ್ಮ ಪೋನ್ ವೇಗ ವೃದ್ದಿಯಾಗುತ್ತದೆ.

ನಿಮ್ಮ ಪೋನ್ ಅಪ್ಡೇಟ್ ಮಾಡುತ್ತೀರಿ: ಇನ್ನೂ ಪ್ರತಿಯೊಂದು ಸ್ಮಾರ್ಟ್ ಪೋನ್ ಗಳಿಗೂ ಆಗಾಗ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿರುತ್ತದೆ. ಆ ಅಪ್ಡೇಟ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಈ ಅಪ್ಡೇಟ್ ಮಾಡುವುದರಿಂದ ಪೋನ್ ವೇಗವಾಗಿ ಕೆಲಸ ಮಾಡಲು ಅಡ್ಡಿಯಾಗಿರುವಂತಹ ಕೆಲವೊಂದು ಬಗ್ ಗಳನ್ನು ಪರಿಷ್ಕರಿಸುತ್ತದೆ. ಮೊಬೈಲ್ ಸಿಸ್ಟಂ ಹಾಗೂ ಭದ್ರತೆಗೆ ಸಂಬಂಧಿಸಿದ ಅಪ್ಡೇಟ್ ಸಹ ಆಗುತ್ತದೆ.
ಪ್ರತಿನಿತ್ಯ ಮೊಬೈಲ್ ರಿಸ್ಟಾರ್ಟ್ ಮಾಡಿ: ಇನ್ನೂ ಪ್ರತಿನಿತ್ಯ ನಿಮ್ಮ ಪೋನ್ ರಿಸ್ಟಾರ್ಟ್ ಮಾಡುವುದರಿಂದಲೂ ಮೊಬೈಲ್ ಸ್ಪೀಡ್ ಹೆಚ್ಚಾಗುತ್ತದೆ. ಮೊಬೈಲ್ ರೀಸ್ಟಾರ್ಟ್ ಮಾಡುವುದರಿಂದ ಮೊಬೈಲ್ RAM ಫ್ರೀ ಆಗುತ್ತದೆ. ಆಪ್ ಗಳನ್ನು ರಿಸೆಟ್ ಮಾಡುತ್ತವೆ. ಅದರಲ್ಲೂ RAM ಕಡಿಮೆಯಿರುವ ಪೋನ್ ಗಳಲ್ಲಿ ಈ ಪದ್ದತಿ ಫಾಲೋ ಮಾಡುವುದು ಮತಷ್ಟು ಉಪಯುಕ್ತ ಎಂದು ಹೇಳಲಾಗಿದೆ.
ಮೊಬೈಲ್ ಚಾರ್ಜಿಂಗ್: ನಿಮ್ಮ ಮೊಬೈಲ್ ಗೆ ಚಾರ್ಜ್ ಹಾಕುವ ಕೇಬಲ್ ಹಾಳಾಗಿದ್ದರೇ ಅಥವಾ ಕೆಟ್ಟಿದ್ದರೇ, ಹೊಸದಾದ ಒರಿಜಿನಲ್ ಕೇಬಲ್ ಅನ್ನು ಖರೀದಿಸಿ. ಮೊಬೈಲ್ ಬ್ಯಾಟರಿ ಸದಾ 100% ಗೆ ಚಾರ್ಜ್ ಮಾಡಬೇಡಿ ಅಥವಾ ನಿಮ್ಮ ಪೋನ್ 15% ಗಿಂತ ಕಡಿಮೆ ಚಾರ್ಜ್ ಇದ್ದರೇ ಬಳಸಬೇಡಿ. ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ಕೇವಲ 80% ರಷ್ಟರ ವೆರೆಗೆ ಮಾತ್ರ ಚಾರ್ಜ್ ಮಾಡಿ ಎಂದು ಕೆಲವು ಟೆಕ್ ತಂತ್ರಜ್ಞರು ಸೂಚಿಸುತ್ತಾರೆ ಎನ್ನಲಾಗಿದೆ.

ಫ್ಯಾಕ್ಟರಿ ರೀಸೆಟ್: ಇನ್ನೂ ಈ ಮೇಲಿನ ಎಲ್ಲಾ ಟ್ರಿಕ್ ಗಳು ಪ್ರಯೋಗ ಮಾಡಿದರೂ ನಿಮ್ಮ ಪೋನ್ ನಲ್ಲಿ ಯಾವುದೇ ಬದಲಾವಣೆ ಕಾಣಿಸದೇ ಇದ್ದರೇ, ಕೊನೆಯದಾಗಿ ಮೊಬೈಲ್ ಫ್ಯಾಕ್ಟರಿ ರೀಸೆಟ್ ಮಾಡಿ. ಇದು ನಿಮ್ಮ ಪೋನ್ ಹೊಸದಾಗಿ ಕಾಣಿಸುವಂತೆ ಮಾಡುತ್ತದೆ. ನಿಮ್ಮ ಪೋನ್ ನಲ್ಲಿರುವ ಸಂಪೂರ್ಣ ಡೆಟಾ ಸಹ ಹೋಗಿ ಹೊಸ ಪೋನ್ ಮಾದರಿಯಾಗುತ್ತದೆ. ರೀಸೆಟ್ ಮಾಡುವುದಕ್ಕೂ ಮುನ್ನಾ ಮೊಬೈಲ್ ನಲ್ಲಿರುವ ಪೊಟೋಗಳು, ವಿಡಿಯೋಗಳು ಹಾಗೂ ನಿಮಗೆ ಬೇಕಾದ ಮಾಹಿತಿಯನ್ನು ಬ್ಯಾಕಪ್ ಮಾಡಿಕೊಂಡರೇ ಒಲಿತು.