Viral Video – ಸೇತುವೆಯ ಮೇಲಿಂದ ಸಮುದ್ರಕ್ಕೆ ಹಾರಲು ಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ಕ್ಯಾಬ್ ಚಾಲಕನೋರ್ವ ಕಾಪಾಡಿದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಟ್ರಾನ್ಸ್ ಹಾರ್ಬರ್ ಲಿಂಕ್ ಸೇತುವೆಯಿಂದ (Atal Setu) ಸಮುದ್ರಕ್ಕೆ ಹಾರಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ಕ್ಯಾಬ್ ಚಾಲಕ ಹಾಗೂ ಸಂಚಾರಿ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
57 ವರ್ಷದ ಮಹಿಳೆಯೊಬ್ಬರು ಅಟಲ್ ಸೇತು ಸಮುದ್ರಕ್ಕೆ ಹಾರಲು ಯತ್ನಿಸುತ್ತಿದ್ದಾಗ ಕ್ಯಾಬ್ ಚಾಲಕ ಹಾಗೂ ಸಂಚಾರಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ (Viral Video) ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ವಿಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬರು ಸೇತುವೆಯಿಂದ ಸಮುದ್ರಕ್ಕೆ ಜಿಗಿಯಲು ಪ್ರಯತ್ನಿಸುತ್ತಿದ್ದಂತೆ ಕ್ಯಾಬ್ ಚಾಲಕ ಆಕೆಯ ಕೂದಲನ್ನು ಹಿಡಿದುಕೊಂಡು ಕಾಪಾಡುವುದನ್ನು ಕಾಣಬಹುದಾಗಿದೆ. (Viral Video) ಈ ಮಹಿಳೆ ಸಮುದ್ರಕ್ಕೆ ಹಾರುವ ಪ್ರಯತ್ನದಲ್ಲಿರುವ ಮಹಿಳೆ ಯಾರ ಮಾತಿಗೂ ಕಿವಿಗೊಡದೆ ಮೇಲಿಂದ ಜಿಗಿದಿದ್ದಾಳೆ. ಸಮಯಕ್ಕೆ ಸರಿಯಾಗಿ ಅಲ್ಲಿಯೇ ಇದ್ದ ಕ್ಯಾಬ್ ಚಾಲಕ ಹಾಗೂ ಟ್ರಾಫಿಕ್ ಪೊಲೀಸ್ ಆಕೆಯನ್ನು ಹಿಡಿದು ರಕ್ಷಣೆ ಮಾಡಿದ್ದಾರೆ (Viral Video) ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ (Viral Video) ಈ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ. ಮುಲುಂಡ್ ಮೂಲದ ಮಹಿಳೆ ಕ್ಯಾಬ್ ಚಾಲಕನಾದ ಸಂಜಯ್ ಯಾದವ್ ನನ್ನು ಸೇತುವೆಯ ಮೇಲೆ ಕ್ಯಾಬ್ ನಿಲ್ಲಿಸುವಂತೆ ಹೇಳಿದ್ದಾಳೆ. ಮಹಿಳೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಳೆ ಕುಳಿತಿದ್ದಳು. ಈ ವೇಳೆ ಸಮುದ್ರಕ್ಕೆ ಏನೋ ವಸ್ತುವನ್ನು ಎಸೆದ ಮಹಿಳೆ ತಾನೂ ಸಹ ಸಮುದ್ರಕ್ಕೆ ಹಾರಲು ಯತ್ನಿಸಿದ್ದಾಳೆ. (Viral Video) ಪೊಲಿಸರನ್ನು ನೋಡಿದ ಮಹಿಳೆ ಸಮುದ್ರಕ್ಕೆ ಹಾರಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಮಹಿಳೆಯ ಕೂದಲು ಹಿಡಿದು ಕ್ಯಾಬ್ ಚಾಲಕ ಆಕೆಯನ್ನು (Viral Video) ರಕ್ಷಣೆ ಮಾಡಿದ್ದಾರೆ.
Video here: https://x.com/CPMumbaiPolice/status/1824540961273417850
ಇನ್ನೂ ಮಹಿಳೆಯನ್ನು ನವಿ ಮುಂಬೈ ಪೊಲೀಸರು ಠಾಣೆಗೆ ಕರೆದುಕೊಂಡು(Viral Video) ಹೋಗಿದ್ದಾರೆ. ಬಳಿಕ ಆಕೆಯ ಕುಟುಂಬಸ್ಥರಿಗೆ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಇನ್ನೂ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಕೆಲವು ಆಚರಣೆಗಳ ಭಾಗವಾಗಿ ದೇವರ ಪೊಟೋಗಳನ್ನು ಸಮುದ್ರಕ್ಕೆ ಎಸೆದಿರುವುದಾಗಿ ಹೇಳಿದ್ದಾಳೆ. ಸದ್ಯ ಮಹಿಳೆಯ ಸಮುದ್ರಕ್ಕೆ (Viral Video) ಹಾರಲು ಯತ್ನಿಸುತ್ತಿದ್ದ ಹಾಗೂ ರಕ್ಷಣೆ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.