Viral Video – ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಭಾರಿ ಸದ್ದು ಮಾಡುತ್ತಿರುತ್ತವೆ. ಈ ಸಾಲಿಗೆ ಇಲ್ಲೊಂದು ವಿಡಿಯೋ ಸೇರಿಕೊಂಡಿದೆ. ಮಹಿಳೆಯೊಬ್ಬರು ಬೈಕ್ ಸವಾರನೊಬ್ಬನ ಬೈಕ್ ಮೇಲೆ ಹಾಕಿಕೊಂಡಿದ್ದ ಹಿಂದೂ ಸ್ಟಿಕ್ಕರ್ ತೆಗೆಯುವಂತೆ ಒತ್ತಡ ಹಾಕಿದ (Viral Video) ವಿಚಿತ್ರ ಘಟನೆ ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ವೈಯುಕ್ತಿಕ ಹಕ್ಕು ಹಾಗೂ ಧಾರ್ಮಿಕ ಅಭಿವ್ಯಕ್ತಿಯ ಬಗ್ಗೆ ಚರ್ಚೆಗಳನ್ನು ಸಹ ಹುಟ್ಟು ಹಾಕಿದೆ ಎನ್ನಲಾಗಿದೆ.
ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಸವಾರನಿಗೆ ಆತನ ಬೈಕ್ ಮೇಲೆ ಅಂಟಿಸಿದ್ದ ಹಿಂದೂ ಸ್ಟಿಕ್ಕರ್ ತೆಗೆಯುವಂತೆ ಕೇಳಿದ ವಿಚಿತ್ರ ಘಟನೆ ನಡೆದಿದೆ. ಮಹಿಳೆ ರಸ್ತೆಯ ಬದಿಯಲ್ಲಿ ತನ್ನ ಕಾರಿಗಾಗಿ ಕಾಯುತ್ತಿರುತ್ತಾಳೆ. ಆಗ ಅಲ್ಲಿಗೆ ಬೈಕ್ ಒಂದು ಬರುತ್ತದೆ. ಬೈಕ್ ಗೆ ಹಿಂದೂ ಸ್ಟಿಕ್ಕರ್ ಅಂಟಿಸಲಾಗಿರುತ್ತದೆ. ಅದನ್ನು ನೋಡಿದ ಮಹಿಳೆ ಬೈಕ್ ಸವಾರನ ಬಳಿಗೆ ಬಂದು, ನೀವು ಹಿಂದೂ ಅಲ್ಲ, ನೀವು ಸಾರ್ವತ್ರಿಕ ವ್ಯಕ್ತಿ ಆ ಸ್ಟಿಕ್ಕರ್ ತೆಗೆಯಿರಿ ಎಂದು ಹೇಳಿದ್ದಾರೆ. ಜೊತೆಗೆ ನೀವು ಹಿಂದೂ ಎಂದು ಏಕೆ ಬರೆದಿರೋದು ಎಂದು ಕೇಳಿದ್ದಾಳೆ. ಅದಕ್ಕೆ ಬೈಕ್ ಸವಾರ ನಾನು ಹಿಂದೂ ಅದಕ್ಕಾಗಿಯೇ ಹಿಂದೂ ಎಂದು ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಆದರೂ ಪಟ್ಟು ಹಿಡಿದ ಮಹಿಳೆ ಆ ಸ್ಟಿಕ್ಕರ್ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ. ಕ್ರಿಶ್ವಿಯನ್, ಸಿಖ್, ಮುಸ್ಲೀಂ ಹಾಗೂ ಹಿಂದೂಗಳು ಎಂಬ ಧಾರ್ಮಿಕ ಹೆಸರುಗಳು ರಾಜಕೀಯ ಸೃಷ್ಟಿಗಳಾಗಿವೆ. ಹಿಂದೂ ಎನ್ನುವುದು ಅಷ್ಟೊಂದು ಮುಖ್ಯವಾಗಿದ್ದರೇ ದೇವರು ನಿಮ್ಮ ಹಣೆಯ ಮೇಲೆ ಓಂ ಎಂದು ಬರೆದು ಕಳುಹಿಸುತ್ತಿರಲಿಲ್ಲವೇ ಎಂದು ಬೈಕ್ ಸವಾರನಿಗೆ ಹೇಳಿದ್ದಾರೆ. ಇವು ಒಂದು ಮಾದರಿಯಲ್ಲಿ ನೀವು ಸಾರ್ವತ್ರಿಕ ಜೀವಿ ಎಂಬ ಗುರುತನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದಾಳೆ. ಈ ವಾಗ್ವಾದ ಹೆಚ್ಚಾಗಬಾರದೆಂದು ಭಾವಿಸಿದ ಬೈಕ್ ಸವಾರ ಸೌಜನ್ಯದಿಂದ ಸ್ಟಿಕ್ಕರ್ ತೆಗೆದುಗಾಕುತ್ತೇನೆ ಎಂದು ಭರವಸೆ ನೀಡಿದ್ದಾನೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.