ಇಂದಿನ ಕಾಲದಲ್ಲಿ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಪಾಪ್ಯುಲರ್ ಆಗಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡಿರುತ್ತೇವೆ. ಸಾರ್ವಜನಿಕ ಪ್ರದೇಶಗಳಲ್ಲಿ ಹುಚ್ಚಾಟ ಪ್ರದರ್ಶನ ಮಾಡುವುದು, ಅಸಭ್ಯಕರ (Viral Video) ವಿಡಿಯೋಗಳನ್ನು ಹಂಚಿಕೊಳ್ಳುವುದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಪ್ರಾಣಕ್ಕೆ ಕುತ್ತು ಬರುವಂತಹ ಸಾಹಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಕನೋರ್ವ ವಿಷಕಾರಿ ಕಾಳಿಂಗ ಸರ್ಪವನ್ನು ಕಿಸ್ ಮಾಡುತ್ತಾ ರೀಲ್ಸ್ (Viral Video) ಮಾಡಿದ್ದಾನೆ. ಬಳಿಕ ಆ ಯುವಕನಿಗೆ ಏನಾಯ್ತು ಎಂಬುದನ್ನು ತಿಳಿಯಲು ಮುಂದೆ ಓದಿ.
ಈ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ 22 ವರ್ಷ ವಯಸ್ಸಿನ ಶಿವಾ ರಾಜುಲು ಎಂಬ ಯುವಕನೇ ಸರ್ಪಕ್ಕೆ ಮುತ್ತಿಟ್ಟ ಯುವಕ. ಶಿವಾ ರಾಜುಲು ಗೆ ಮೊದಲಿನಿಂದಲೂ ಸರ್ಪಗಳ ಜೊತೆಗೆ ಸ್ನೇಹವಿತ್ತು. ಹಾವುಗಳನ್ನು ಹಿಡಿಯುವುದರಲ್ಲಿ ಆತನ ತಂದೆ ಪರಿಣಿತ. (Viral Video) ಅವನ ತಂದೆ ಹಿಡಿದಿದ್ದ ಕಾಳಿಂಗ ಸರ್ಪವನ್ನು ಮಗನಿಗೆ ನೀಡಿ ರೀಲ್ಸ್ ಮಾಡುವಂತೆ ಹೇಳಿದ್ದಾನೆ. ತಂದೆಯ ಹಾವು ಹಿಡಿಯುವಂತಹ ವಿದ್ಯೆಯನ್ನು ಅಲ್ಪ ಸ್ವಲ್ಪ ಕಲಿತಿದ್ದ ಶಿವ ರಾಜುಲು ಗೆ ಹಾವುಗಳನ್ನು ನಿಭಾಯಿಸುವುದು ಸಹ ಗೊತ್ತಿತ್ತು. ಅದರಂತೆ ಸಾವಿನೊಂದಿಗೆ ಸರಸಕ್ಕೆ ಇಳಿದಿದ್ದಾನೆ. ಇಡೀ ಕಾಳಿಂಗ ಸರ್ಪದ ಹಡೆಯನ್ನು ಬಾಯಲ್ಲಿಟ್ಟುಕೊಂಡು (Viral Video) ಸಾಹಸ ಮಾಡಿದ್ದಾನೆ. ಈ ಸಮಯದಲ್ಲಿ ಕಾಳಿಂಗ ಸರ್ಪ ಶಿವನಿಗೆ ಕಚ್ಚಿದೆ. ಹಾವು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಶಿವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಶಿವ ಪ್ರಾಣ ಪಕ್ಷಿ ಹಾರಿಹೋಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : https://x.com/HYDNetizensNews/status/1832286014770999663
ಇನ್ನೂ ಶಿವ ಮರಣ ಹೊಂದಿರುವುದಾಗಿ (Viral Video) ದೃಢೀಕರಿಸಿದ್ದು, ಆತನನ್ನು ಬಾಣಸವಾಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅತಿಯಾದ ಆತ್ಮವಿಶ್ವಾಸ ಹಾಗೂ ಅಲ್ಪ ವಿದ್ಯೆ ಶಿವನನ್ನು (Viral Video) ಸಾವಿನ ಮನೆಗೆ ಕರೆದುಕೊಂಡು ಹೋಗಿದೆ. ಹಾವುಗಳೊಂದಿಗೆ ಆಟವಾಡುವುದು ಸಾವನ್ನು ಆಹ್ವಾನಿಸಿದಂತೆ ಎಂದು ಹಿರಿಯರು ಹೇಳುತ್ತಾರೆ. ಈ ರೀತಿಯ ಘಟನೆಗಳು ಅನೇಕ ಬಾರಿ ನಡೆದಿದೆ. ಆದರೂ ಸಹ ಅನೇಕರು ಹಾವುಗಳೊಂದಿಗೆ ಈ ರೀತಿಯ ಹುಚ್ಚಾಟ ಮಾಡುವುದು ಬಿಟ್ಟಿಲ್ಲ. (Viral Video) ಹಾವುಗಳನ್ನು ಹಿಡಿದು ರಕ್ಷಣೆ ಮಾಡುವುದು ಒಳ್ಳೆಯ ಕೆಲಸ ಎಂದೇ ಹೇಳಬಹುದು ಆದರೆ ಆ ವಿದ್ಯೆಯನ್ನು ಈ ರೀತಿಯಲ್ಲಿ ಬಳಸುವುದು ಸರಿಯಲ್ಲ ಎಂದೇ ಹೇಳಬಹುದು.
ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ (Viral Video) ಆಗಲು ಈ ರೀತಿಯ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ಸಾಹಸಗಳನ್ನು ಮಾಡಿದರೇ ಬೇಗಾ ಫೇಮಸ್ ಆಗಬಹುದು ಎಂಬುದು ಅವರ ಭಾವನೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ (Viral Video) ಫೇಮಸ್ ಆಗಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಇನ್ನಾದರೂ ಈ ರೀತಿಯ ರೀಲ್ಸ್ ಗಳನ್ನು ಮಾಡದೇ ಎಚ್ಚೆತ್ತುಕ್ಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕಿದೆ.