Viral Video – ಮಧ್ಯಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಇಡೀ ಊರಿನ ಜನರ ಪ್ರೀತಿ ಮತ್ತು ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ, ಬರೀ ವಿಡಿಯೋ ಅಲ್ಲ, ಅದು ಒಬ್ಬ ಶಿಕ್ಷಕನ ನಿಸ್ವಾರ್ಥ ಸೇವೆಗೆ ಸಿಕ್ಕಿರುವ ಗೌರವದ ಸಂಕೇತವಾಗಿದೆ.

Viral Video – 43 ವರ್ಷಗಳ ನಿಸ್ವಾರ್ಥ ಸೇವೆ
ಇಂದೋರ್ ವಿಭಾಗದ ಖಾರ್ಗೋನ್ ಜಿಲ್ಲೆಯವರಾದ ಸರ್ಕಾರಿ ಶಾಲಾ ಶಿಕ್ಷಕ ನೂರ್ ಖಾನ್ ಅವರು, ತಮ್ಮ 43 ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ್ದಾರೆ. ಒಂದೇ ಸ್ಥಳದಲ್ಲಿ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವುದು ಸಾಮಾನ್ಯ ವಿಷಯವಲ್ಲ. 1980ರ ದಶಕದ ಕಡು ಬಡತನ ಮತ್ತು ಅನಕ್ಷರತೆಯ ಕಾಲದಲ್ಲಿ ಶಿಕ್ಷಣದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಖಾನ್, ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ತಮ್ಮ ವಿದ್ಯಾರ್ಥಿಗಳಿಗೆ ಶಿಸ್ತು, ನೈತಿಕತೆ ಮತ್ತು ಜೀವನ ಮೌಲ್ಯಗಳನ್ನು ಕಲಿಸಿದರು.
Read this also : ಶಿಕ್ಷಕ ವೃತ್ತಿ ಕೆಲಸವಲ್ಲ, ಅದೊಂದು ಹೊಣೆಗಾರಿಕೆ: ರವೀಂದ್ರ
Viral Video – ಹೃದಯಸ್ಪರ್ಶಿ ವಿದಾಯ ಸಮಾರಂಭ
ನಿವೃತ್ತಿಯ ದಿನ ಖಾನ್ ಅವರಿಗೆ ಇಡೀ ಹಳ್ಳಿಯೇ ಸೇರಿ ವಿಶಿಷ್ಟ ರೀತಿಯಲ್ಲಿ ಗೌರವ ಸಮರ್ಪಣೆ ಮಾಡಿದೆ. ಗ್ರಾಮಸ್ಥರು ಹೂವಿನ ಹಾರ ಹಾಕಿ, ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ಈ ಮೆರವಣಿಗೆಯಲ್ಲಿ ಇಡೀ ಊರೇ ಭಾಗಿಯಾಗಿದ್ದು, ಅವರ ಸೇವೆಯನ್ನು ಶ್ಲಾಘಿಸಿದರು. ಈ ಭಾವನಾತ್ಮಕ ಕ್ಷಣದ ವಿಡಿಯೋ ಈಗ ನೆಟ್ಟಿಗರ ಹೃದಯ ಗೆದ್ದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ಶಿಕ್ಷಣಕ್ಕೆ ಉತ್ತೇಜನ: ಮನೆ ಮನೆಗೆ ಭೇಟಿ
ಆ ಕಾಲದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಆದರೆ ನೂರ್ ಖಾನ್ ಅವರು ಮನೆಯಿಂದ ಮನೆಗೆ ತೆರಳಿ ಪೋಷಕರ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಸೇರಿಸಿದರು. ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಿ, ಅವರ ಕಲಿಕೆಗೆ ಪ್ರೋತ್ಸಾಹ ನೀಡಿದರು. ಅವರ ಈ ಸಮಾಜಮುಖಿ ಕೆಲಸದಿಂದಲೇ ಅನೇಕ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಬೆಳಕು ಮೂಡಿತು.
