Viral Video – ನಮ್ಮ ದೇಶದಲ್ಲಿ ರೈಲ್ವೆ ಗೇಟ್ ಬಂದಾಗಲೆಲ್ಲಾ ಅದರ ಮುಂದೆ ನೂರಾರು ಜನರು ತಾಳ್ಮೆಯಿಂದ ಕಾಯುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ರೈಲು ಬರಲು ತಡವಾದರೆ, ಅರ್ಧ ಗಂಟೆ, ಒಂದು ಗಂಟೆ ಕೂಡ ಕಾಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ಈ ತಾಳ್ಮೆಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಮಾಡಿರುವ ಕೆಲಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Viral Video – ರೈಲ್ವೇ ಗೇಟ್‌ನಲ್ಲಿ ನಡೆದ ಘಟನೆ
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದ್ದು, ಅದನ್ನು ನೋಡಿದವರು ಅಚ್ಚರಿ ಪಡುತ್ತಿದ್ದಾರೆ. ಘಟನೆ ನಡೆದದ್ದು ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ. ವೀಡಿಯೋದಲ್ಲಿ, ಒಬ್ಬ ವ್ಯಕ್ತಿ ರೈಲ್ವೆ ಗೇಟ್‌ನಲ್ಲಿ ತನ್ನ ಬೈಕ್‌ನಲ್ಲಿ ಕಾಯುತ್ತಿರುತ್ತಾನೆ. ರೈಲು ಬರುತ್ತದೆ ಎಂದು ಅವನು ಮತ್ತು ಇತರ ವಾಹನ ಚಾಲಕರು ಕಾಯುತ್ತಿರುತ್ತಾರೆ. ಆದರೆ ಬಹಳ ಸಮಯ ಕಳೆದರೂ ರೈಲು ಬರುವುದಿಲ್ಲ. ಇದರಿಂದ ಆ ವ್ಯಕ್ತಿಗೆ ಸಹನೆ ಕಳೆದುಹೋಗುತ್ತದೆ. ಆತ ಹೇಗೆಂದರೆ ಹಾಗೆ ರೈಲ್ವೆ ಹಳಿ ದಾಟಲು ನಿರ್ಧರಿಸುತ್ತಾನೆ. ಆದರೆ ಬೈಕ್‌ನೊಂದಿಗೆ ಹಳಿ ದಾಟಲು ಸಾಧ್ಯವಿಲ್ಲ. ಆಗಲೇ ಅವನ ಮನಸ್ಸಿಗೆ ಒಂದು ವಿಚಿತ್ರ ಐಡಿಯಾ ಬರುತ್ತದೆ. Read this also : ಪ್ರವಾಸಿ ತಾಣದಲ್ಲಿ ನೀರಿಗೆ ಮೂತ್ರ ವಿಸರ್ಜನೆ; ನೆಟ್ಟಿಗರಿಂದ ಆಕ್ರೋಶ, ವೈರಲ್ ಆದ ವಿಡಿಯೋ…!
Viral Video – ಬೈಕ್ ಅನ್ನು ಭುಜದ ಮೇಲೆ ಹೊತ್ತುಕೊಂಡು ಹೋದ ವ್ಯಕ್ತಿ
ಆ ವ್ಯಕ್ತಿ ಸೈಜುಗೆ ದಷ್ಟಪುಷ್ಟವಾಗಿ ಕಾಣುತ್ತಾನೆ. ತನ್ನ ಬಲವನ್ನು ಉಪಯೋಗಿಸಿ ಸುಮಾರು 100 ಕೆಜಿಗಿಂತ ಹೆಚ್ಚು ತೂಕದ ಬೈಕ್ ಅನ್ನು ತನ್ನ ಭುಜದ ಮೇಲೆ ಎತ್ತಿಕೊಳ್ಳುತ್ತಾನೆ. ಎಷ್ಟೇ ಭಾರವಾದರೂ, ಆತನ ಮುಖದಲ್ಲಿ ಯಾವುದೇ ಕಷ್ಟ ಕಾಣಲಿಲ್ಲ. ಬೇಗನೇ ಬೈಕನ್ನು ಭುಜದ ಮೇಲೆ ಇಟ್ಟುಕೊಂಡು ರೈಲ್ವೆ ಹಳಿ ದಾಟಿ ಮುಂದೆ ಹೋಗುತ್ತಾನೆ. ಇಡೀ ದೃಶ್ಯವನ್ನು ನೋಡಿ ಅಲ್ಲಿ ನಿಂತಿದ್ದ ಜನರು ಆಶ್ಚರ್ಯಗೊಂಡರು ಮತ್ತು ಕೆಲವರು ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದರು.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ‘ಬಾಹುಬಲಿ’ ಎಂದು ಕರೆದ ಜನರು
ಆತನ ಈ ಸಾಹಸವನ್ನು ನೋಡಿ ಅಲ್ಲಿನ ಜನರು ‘ಬಾಹುಬಲಿ’ ಎಂದು ಕರೆದರು. ಆದರೆ ಈ ವೀಡಿಯೋ ವೈರಲ್ ಆದ ನಂತರ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಆತನ ಧೈರ್ಯ ಮತ್ತು ಶಕ್ತಿಯನ್ನು ಹೊಗಳಿದರೆ, ಇನ್ನು ಕೆಲವರು ಸ್ವಲ್ಪ ಸಮಯ ಕಾಯಬಹುದಿತ್ತು ಎಂದು ಟೀಕಿಸಿದರು. ಈ ರೀತಿ ಬೈಕ್ ಎತ್ತಿ ಹೊರುವುದರಿಂದ ಭುಜಗಳಿಗೆ ಸಮಸ್ಯೆ ಉಂಟಾಗಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.