Viral Video-ಇಂದಿನ ಸ್ಮಾರ್ಟ್‌ಪೋನ್ ಯುಗದಲ್ಲಿ ಸೆಲ್ಫಿ ಹುಚ್ಚು ತುಂಬಾನೆ ಇದೆ ಎನ್ನಲಾಗಿದೆ. ಸೆಲ್ಫಿಗಾಗಿ ಅನೇಕರು ಪ್ರಾಣ ಕಳೆದುಕೊಂಡ ಘಟನೆಗಳೂ ಸಹ ಇದೆ. ಅಪಾಯದ ಸ್ಥಳಗಳಿಗೆ ತೆರಳಿ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳು ವರದಿಯಾದರೂ ಸಹ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅಂತಹ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಘಟನೆ ಈ ಸಾಲಿಗೆ ಸೇರಿಕೊಂಡಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತಕ್ಕೆ ಬಿದಿದ್ದಾಳೆ. ಆದರೆ ಅಲ್ಲಿದ್ದ ಸಿಬ್ಬಂದಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ರಕ್ಷಣಾ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ಭಾರಿ ಸದ್ದು ಮಾಡುತ್ತಿದೆ.
ಪುಣೆಯಲ್ಲಿ ಯುವತಿಯೊಬ್ಬಳು ಅಪಾಯದ ಸ್ಥಳಕ್ಕೆ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು (Viral Video) ಮುಂದಾಗಿದ್ದಾಳೆ. ಅಪಾಯ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೇ ಹೆಚ್ಚು ಲೈಕ್ಸ್, ಕಾಮೆಂಟ್ ಗಳು ಬಂದು ಪಾಪ್ಯುಲರ್ ಆಗಬಹುದು ಎಂಬ ಉದ್ದೇಶದಿಂದ ಈ ಕೆಲಸಕ್ಕೆ ಅನೇಕರು ಮುಂದಾಗುತ್ತಾರೆ. ಆದ್ದರಿಂದ ಅನೇಕ ಪ್ರವಾಸಿ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಿರುತ್ತಾರೆ. ಇದೀಗ ಯುವತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೂರು ಅಡಿ ಆಳದ (Viral Video) ಪ್ರಪಾತಕ್ಕೆ ಬಿದ್ದಿದಾಳೆ. ಕೂಡಲೇ ಅಲ್ಲಿದ್ದ ಸಿಬ್ಬಂದಿ ದೇವರಂತೆ (Viral Video) ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಕಳೆದ ಶನಿವಾರ ನಡೆದಿದೆ ಎನ್ನಲಾಗಿದೆ. ಇನ್ನೂ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಒಂದನ್ನು ಅಲ್ಲಿದ್ದ ಪ್ರವಾಸಿಗರು ಸೆರೆಹಿಡಿದು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ.
ವಿಡಿಯೋ ನೋಡಲು ಈ ಲಿಂಕ್ ಓಪೆನ್ ಮಾಡಿ: https://x.com/shubhamrai80/status/1819941694772515182
ಯುವತಿ ಪ್ರಪಾತಕ್ಕೆ ಬೀಳುತ್ತಿದ್ದಂತೆ ಆಕೆಯ ಸ್ನೇಹಿತರು ಮತ್ತು ಇತರ ಪ್ರವಾಸಿಗರು ಸಹಾಯಕ್ಕಾಗಿ (Viral Video) ಕೂಗಲಾರಂಭಿಸಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರಪಾತಕ್ಕೆ ಇಳಿದು ರಕ್ಷಣಾಕಾರ್ಯ ಆರಂಭಿಸಿದ್ದಾರೆ. ಪೊಲೀಸರು, ಗೃಹರಕ್ಷಕ ದಳ ಮತ್ತು ಸಹ ಪರ್ವತಾರೋಹಿಗಳು ಮಹಿಳೆಯನ್ನು ಸುರಕ್ಷಿತವಾಗಿ ಕಮರಿಯಿಂದ ಹೊರಕ್ಕೆ ಕರೆತಂದರು. ಆಕೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಕಲ್ಲು ಬಂಡೆಗಳ ನಡುವೆ ಬಿದ್ದ ಹಿನ್ನೆಲೆಯಲ್ಲಿ ಗಾಯಗೊಂಡ ಯುವತಿ ನೋವಿನಿಂದ ಜೋರಾಗಿ ಅತ್ತಿದ್ದಾಳೆ. ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ತಿಳಿದುಬಂದಿದ್ದು, ಗಾಯಾಳು ಯುವತಿಯನ್ನು 21 ವರ್ಷ ನಸ್ರೀನ್ ಅಮೀರ್ ಕುರೇಶಿ ಎಂದು ಗುರ್ತಿಸಲಾಗಿದೆ.