ಸಾಮಾನ್ಯವಾಗಿ ಶಿಕ್ಷಕರ ನಡುವೆ ಜಗಳ, ಮನಸ್ಥಾಪ ನಡೆಯುವುದು ತುಂಬಾನೆ ವಿರಳ. ಬಹುತೇಕ ಶಿಕ್ಷಕರು ಪ್ರಬುದ್ಧರಾಗಿದ್ದು, ಮಾತುಕತೆಗಳ ಮೂಲಕವೇ ಮತಸ್ಥಾಪಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ವಿರುದ್ದವಾಗಿ ನಡೆದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವಂತಹ ಗುರುಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ರಜೆಯ ವಿಚಾರಕ್ಕಾಗಿ ಲೇಡಿ ಟೀಚರ್ ಹಾಗೂ ಶಿಕ್ಷಕನ ನಡುವೆ ಜಗಳ ನಡೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ (Viral Video) ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ರಜೆಯ ವಿಚಾರಕ್ಕಾಗಿ ಇಬ್ಬರು ಶಿಕ್ಷಕರ ಮಧ್ಯೆ ಜಗಳ ಏರ್ಪಟ್ಟಿದೆ. ಈ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಇಲ್ಲಿನ ಗೋಪಾಲ್ ಗಂಜ್ ಬರೌಲಿಯಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರು ರಜೆಯ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಗಲಾಟೆ ನೋಡಿದರೇ ಮಹಿಳಾ ಶಿಕ್ಷಕಿಗೆ ರಜೆಯ ಅವಶ್ಯಕತೆ ಎಷ್ಟಿತ್ತು ಎಂದರೇ ತಾನು ಶಿಕ್ಷಕಿ ಎಂಬುದನ್ನು ಮರೆತು ಚೇರ್ ಮೇಲೆ ಕುಳಿತಿದ್ದ ಶಿಕ್ಷಕನ ಕೊರಳ ಪಟ್ಟಿ ಹಿಡಿದು ರಂಪಾಟ ಮಾಡಿದ್ದಾರೆ ಆ ಮಹಿಳಾ ಶಿಕ್ಷಕಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/Bihareducated1/status/1842790547276055031
ಈ ಕುರಿತು ವಿಡಿಯೋ ಒಂದನ್ನು @gharkekalesh ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿ ಹಾಗೂ ಶಿಕ್ಷಕನ ನಡುವೆ ರಜೆಯ ವಿಚಾರಕ್ಕೆ ದೊಡ್ಡ ಗಲಾಟೆ ನಡೆಯುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಮಹಿಳಾ ಶಿಕ್ಷಕಿ ತನ್ನ ತಾಳ್ಮೆ ಕಳೆದುಕೊಂಡು ಶಿಕ್ಷಕ ಕೊರಳ ಪಟ್ಟಿ ಹಿಡಿದು ರಂಪಾಟ ಮಾಡಿದ್ದು, ಅಲ್ಲಿದ್ದ ಇತರೆ ಶಿಕ್ಷಕರು ಇಬ್ಬರ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಿದ್ದಾರೆ. ಕಳೆದ ಅ.6 ರಂದು ಹಂಚಿಕೊಂಡ ಈ ವಿಡಿಯೋ ಬರೊಬ್ಬರಿ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಹಾಗೂ ಕಾಮೆಂಟ್ ಗಳು ಹರಿದುಬರುತ್ತಿವೆ. ಮಕ್ಕಳಿಗೆ ವಿದ್ಯೆ ಕೊಡುವ ಶಿಕ್ಷಕರು ಈ ರೀತಿಯಾಗಿ ಜಗಳವಾಡೋದು ಎಷ್ಟರ ಮಟ್ಟಿಗೆ ಸರಿ. ಇದು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದೇ ಶಿಕ್ಷಕರು ಗಲಾಟೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.