Monday, June 30, 2025
HomeSpecialViral Video: ಪುಟಾಣಿಯ ಮುಗ್ದ ಪ್ರೀತಿ, ಗಣಪನ ವಿಸರ್ಜನೆಯಂದು ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗು,...

Viral Video: ಪುಟಾಣಿಯ ಮುಗ್ದ ಪ್ರೀತಿ, ಗಣಪನ ವಿಸರ್ಜನೆಯಂದು ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗು, ವೈರಲ್ ಆದ ವಿಡಿಯೋ…!

ಭಾರತದಲ್ಲಿ ಗಣೇಶನ ಹಬ್ಬಕ್ಕಾಗಿ ಅನೇಕರು ಕಾಯುತ್ತಿರುತ್ತಾರೆ. ಗಣೇಶ ಹಬ್ಬ ದಿನಾಂಕ ಹತ್ತಿರ ಬರುತ್ತಿದ್ದಂತೆ, ಯುವಕ ಸಂಘಗಳು ಗಣೇಶ ಉತ್ಸವ ಆಚರಿಸಲು ಶುರು ಮಾಡುತ್ತಾರೆ. ಅದರಲ್ಲೂ ಪುಟಾಣಿ ಮಕ್ಕಳಿಗೆ ಗಣೇಶ ಹಬ್ಬ ತುಂಬಾ ಅಚ್ಚು ಮೆಚ್ಚು ಎಂದು ಹೇಳಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಬಳಿಕ ಗಣೇಶ ವಿಸರ್ಜನೆಯವರೆಗೂ ಸಂಭ್ರಮ ಸಡಗರಿಂದ ಹಬ್ಬವನ್ನು ಆಚರಿಸುತ್ತಾರೆ. ಅದೇ ರೀತಿ ಗಣೇಶ ವಿಸರ್ಜನೆಯ ಸಮಯದಲ್ಲಿ ನೋವು ಕಾಡುವುದು ಸಹ ಸಹಜ ಎಂದು ಹೇಳಬಹುದು. ಇದೀಗ ಪುಟ್ಟ ಬಾಲಕಿಯೊಬ್ಬಳು ಗಣೇಶ ವಿಗ್ರಹದ ವಿಸರ್ಜನೆ ವೇಳೆ (Viral Video) ಗಣೇಶನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ, ಪುಟಾಣಿಯ ಮುಗ್ದ ಅಳು ಹಾಗೂ ಪ್ರೀತಿಗೆ ನೆಟ್ಟಿಗರ ಮನ ಕರಗಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

baby cried on Ganesha festival

ಭಾರತದಲ್ಲಿ ಗಣೇಶ ಉತ್ಸವ ಅಂದರೇ ಕೇವಲ ಹಬ್ಬವಲ್ಲ, ಅದೊಂದು ಭಾವುಕತೆ ಎಂದೇ ಹೇಳಬಹುದಾಗಿದೆ. ಈ ಹಬ್ಬ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡುತ್ತದೆ. ಜೊತೆಗೆ ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದೆ. ಇನ್ನೂ ಭಾರತದಲ್ಲಿ ಗಣೇಶೋತ್ಸವದ ಸಂಭ್ರಮ ಮುಗಿದಿಲ್ಲ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಸಾರ್ವಜನಿಕ ಗಣಪತಿ ಸ್ಥಾಪನೆ, ಪೂಜೆ, ಆರಾಧನೆ ನಡೆಯುತ್ತಲೇ ಇದೆ. ಕೆಲವೊಮ್ಮೆ ಗಣೇಶನ ವಿಸರ್ಜನೆ ಸಹ ಅದ್ದೂರಿಯಾಗಿ ಮಾಡಲಾಗುತ್ತದೆ. ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ, ಹಲಗೆ ಶಬ್ದ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಸಂಭ್ರಮದಿಂದ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಗುತ್ತದೆ. ಈ ವೇಳೆ ಸಂಭ್ರಮದ ಜೊತೆಗೆ ನೋವು ಸಹ ಇರುತ್ತದೆ. ಗಣೇಶ ವಿಗ್ರಹ ಕೂರಿಸಿದಾಗ ಇರುವಂತಹ ಸಂಭ್ರಮ, ಗಣೇಶನ ವಿಸರ್ಜನೆಯ ಸಮಯದಲ್ಲಿ ಇರೊಲ್ಲ ಎಂದು ಹೇಳಬಹುದು.

baby cried on Ganesha festival 2

ಇದೀಗ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಭಾರಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಗಣೇಶ ವಿಸರ್ಜನೆ ಮಾಡುವ ಸಮಯದಲ್ಲಿ  ಪುಟ್ಟ ಮಗು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಪುಟ್ಟ ಮಕ್ಕಳ ಹೃದಯ ಯಾವುದೇ ಕಲ್ಮಶ, ಮೋಸ, ನಾಟಕ, ವಂಚನೆ  ತಿಳಿಯದ ಮನಸ್ಸು. ಗಣೇಶ ಅಂದ್ರೆ ಮಕ್ಕಳಿಗೆ ತುಂಬಾನೆ ಪ್ರೀತಿ ಎಂದೇ ಹೇಳಬಹುದಾಗಿದೆ. ಈ ಪುಟ್ಟ ಬಾಲಕಿ ಗಣೇಶನ ವಿಸರ್ಜನೆಯಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಗಣಪತಿಯನ್ನು ಈ ಬಾಲಕಿ ತುಂಬಾನೆ ಹಚ್ಚಿಕೊಂಡಿದ್ದಾಳೆ. ಗಣೇಶ ವಿಸರ್ಜನೆ ಮಾಡದಂತೆ ಆಕೆ ಅತ್ತಿದ್ದು, ಬಾಲಕಿಯ ಮುಗ್ದ ಪ್ರೀತಿಗೆ ಒಳ್ಳೆಯ ಉದಾಹರಣೆ ಎಂದು ಹೇಳಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/biharigurl/status/1836342011731009833

ಈ ಸಂಬಂಧ ವಿಡಿಯೋ ಒಂದನ್ನು Vineeta Singh ಹೆಸರಿನ ಎಕ್ಸ್ ಖಾತೆ (ಟ್ವಿಟರ್‍) ಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು ಅತ್ಯಂತ ಕಠಿಣ ವಿದಾಯ, ಶೀಘ್ರವೇ ಇವಳ ಅಮ್ಮನ ಜೊತೆಗೆ ಗಣಪತಿ ಬರ್ತಾನೆ ಎಂದು ಟೈಟಲ್ ಹಾಕಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ಗಣೇಶ ವಿಗ್ರಹದ ಮುಂದೆ ಸೀರೆಯುಟ್ಟು, ತಲೆಗೆ ದೊಡ್ಡ ಕುಂಕುಮ ಇಟ್ಟುಕೊಂಡು, ಪುಟಾಣಿ ಕೈ ಬೀಸುತ್ತಾ ಅಳುತ್ತಿದ್ದಾಳೆ. ಗಣೇಶನನ್ನು ನೀರಿನಲ್ಲಿ ಬಿಡಬೇಡಿ ಎಂದು ವಿನಂತಿ ಮಾಡಿದಂತಿದೆ. ಬಾಲಕಿ ಅಳು ಕಂಡು ಆ ಗಣೇಶ ಬರುತ್ತಾನೇನೋ ಎಂಬಂತೆ ಭಾಸವಾಗುತ್ತಿತ್ತು. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular