Gurugram Nurse Kajal : ನಂಬಿ ಬಂದವಳಿಗೆ ನಾಲ್ಕೇ ತಿಂಗಳಿಗೆ ಮೃತ್ಯುವಾದ ಪತಿ: ವರದಕ್ಷಿಣೆಗಾಗಿ ನರ್ಸ್‌ನನ್ನು ಕೊಂದ ರೇಡಿಯಾಲಜಿಸ್ಟ್!

ಪ್ರೀತಿ ಎಂಬ ಎರಡಕ್ಷರದ ಮೇಲೆ ನಂಬಿಕೆಯಿಟ್ಟು, ಮನೆಯವರನ್ನು ಎದುರು ಹಾಕಿಕೊಂಡು ಹೊಸ ಬಾಳಿನ ಕನಸು ಕಂಡಿದ್ದ ಆಕೆಗೆ, ಮದುವೆಯಾದ ನಾಲ್ಕೇ ತಿಂಗಳಿಗೆ ಪತಿಯೇ ಕಾಲನಾಗಿದ್ದಾನೆ. ವರದಕ್ಷಿಣೆ ಎಂಬ ರಾಕ್ಷಸನಿಗೆ ಮತ್ತೊಂದು ಬಲಿ ಬಿದ್ದಿದ್ದು, ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಚುಚ್ಚುಮದ್ದು ನೀಡಿ ಬಲಿ ಪಡೆದಿರುವ ಘೋರ ಘಟನೆ (Gurugram Nurse Kajal) ಗುರುಗ್ರಾಮದಲ್ಲಿ ನಡೆದಿದೆ.

Gurugram Nurse Kajal dowry murder case husband arrested poison injection crime

Gurugram Nurse Kajal – ಸ್ನೇಹ ಪ್ರೀತಿಯಾಗಿ ಬದಲಾಗಿತ್ತು… ಆದರೆ?

ಕೊಲೆಯಾದ ದುರ್ದೈವಿ ಕಾಜಲ್ ವೃತ್ತಿಯಲ್ಲಿ ನರ್ಸ್ ಆಗಿದ್ದರು. ಆರೋಪಿ ಅರುಣ್ ಶರ್ಮಾ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಗುರುಗ್ರಾಮದ ನರ್ಸಿಂಗ್ ಹೋಂ ಒಂದರಲ್ಲಿ ಸಹೋದ್ಯೋಗಿಗಳಾಗಿದ್ದ ಇವರಿಬ್ಬರ ನಡುವೆ ಸ್ನೇಹ ಅಂಕುರವಾಗಿತ್ತು. ದಿನ ಕಳೆದಂತೆ ಅದು ಪ್ರೀತಿಯಾಗಿ ಮಾರ್ಪಟ್ಟು, ಪರಸ್ಪರ ಒಂದಾಗಲು ನಿರ್ಧರಿಸಿದ್ದರು. ಕಳೆದ ನವೆಂಬರ್‌ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಆದರೆ, ಆ ಸಂಭ್ರಮ ನಾಲ್ಕು ತಿಂಗಳಿಗೂ ಮೀರಿ ಉಳಿಯಲಿಲ್ಲ.

ಆರಂಭವಾಯ್ತು ವರದಕ್ಷಿಣೆ ಎಂಬ ನರಕ

ಮದುವೆಯಾದ ಮೊದಲ ಕೆಲವು ದಿನಗಳು ಸುಂದರವಾಗಿದ್ದರೂ, ನಂತರ ಅರುಣ್ ತನ್ನ ಅಸಲಿ ರೂಪ ತೋರಿಸಲು ಆರಂಭಿಸಿದ್ದ. ಕ್ಷುಲ್ಲಕ ಕಾರಣಗಳಿಗೂ ಕಾಜಲ್ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ. ಇದರ ಹಿಂದೆ ಇದ್ದಿದ್ದು ವರದಕ್ಷಿಣೆಯ ದಾಹ. ಹೆಚ್ಚುವರಿ ಹಣ ಮತ್ತು ವರದಕ್ಷಿಣೆಗಾಗಿ ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ (Gurugram Nurse Kajal)  ನೀಡಲು ಶುರು ಮಾಡಿದ್ದ ಎಂದು ಕಾಜಲ್ ಸಹೋದರ ನೋವಿನಿಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ. Read this also : 75ರ ಹರೆಯದಲ್ಲೂ ತಂದೆಯ ಕಾಮದಾಟಕ್ಕೆ ಬೇಸತ್ತ ಮಗ: ಸೊಸೆಯನ್ನೂ ಬಿಡದ ಅಪ್ಪನನ್ನೇ ಸುಪಾರಿ ಕೊಟ್ಟು ಮುಗಿಸಿದ ಮಗ..!

ಹೋಳಿ ಹಬ್ಬದ ಸಂಭ್ರಮದ ನಡುವೆ ನಡೆದ ದುರಂತ

ಮಾರ್ಚ್ 4 ರಂದು ಹೋಳಿ ಹಬ್ಬದ ಸಂಭ್ರಮಕ್ಕಾಗಿ ದಂಪತಿ ಕಾಜಲ್ ಅವರ ತವರು ಮನೆಯಾದ ಗರ್ಹಿ ಹರ್ಸಾರು ಎಂಬಲ್ಲಿಗೆ ಬಂದಿದ್ದರು. ಅಲ್ಲಿಯೂ ಅರುಣ್ ತನ್ನ ವರಸೆಯನ್ನು ಮುಂದುವರಿಸಿದ್ದ. ಮಾರ್ಚ್ 17 ರಂದು ಕಾಜಲ್ ಮೇಲೆ ದೈಹಿಕ ಹಲ್ಲೆ ಮಾಡಿದ್ದ ಆರೋಪಿ, ಮರುದಿನ ಬೆಳಗ್ಗೆ ಆಕೆಯನ್ನು ಕೆಳಗೆ ಕರೆದುಕೊಂಡು ಹೋಗಿ ಮತ್ತೆ ಜಗಳವಾಡಿದ್ದ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲೇ (Gurugram Nurse Kajal)  ಕಾಜಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಯ ಮೂಗಿನಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಸಹ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

Gurugram Nurse Kajal dowry murder case husband arrested poison injection crime

ಪತ್ತೆಯಾದ ‘ಸಿರಿಂಜ್’: ಬಯಲಾದ ಕ್ರೂರ ಕೃತ್ಯ

ಕಾಜಲ್ (Gurugram Nurse Kajal)  ಸಾವಿನ ಬಗ್ಗೆ ಕುಟುಂಬದವರಿಗೆ ಮೊದಲೇ ಅನುಮಾನವಿತ್ತು. ಮನೆಯ ಶೌಚಾಲಯವನ್ನು ಪರಿಶೀಲಿಸಿದಾಗ ಅಲ್ಲಿ ಬಳಸಿ ಎಸೆದಿದ್ದ ಸಿರಿಂಜ್ ಪತ್ತೆಯಾಗಿತ್ತು. ಅರುಣ್ ವೈದ್ಯಕೀಯ ಕ್ಷೇತ್ರದವನಾಗಿದ್ದರಿಂದ, ಆಕೆಗೆ ವಿಷಪೂರಿತ ಚುಚ್ಚುಮದ್ದು ನೀಡಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ದೂರು ನೀಡಿದ್ದರು. ಪೊಲೀಸರ ಬಿಗುವಿನ ವಿಚಾರಣೆ ಎದುರಿಸಿದ ಅರುಣ್, ತಾನೇ ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top