Viral Video – ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಆ ಮಹಿಳೆ ಆಟೋ ಚಾಲಕನಿಗೆ ಕ್ಷಮೆ ಕೇಳಿರುವ ವಿಡಿಯೋ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಹರಿದಾಡುತ್ತಿದ್ದು, ಮತ್ತೆ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Viral Video – ಘಟನೆ ಏನು? ವಿಡಿಯೋ ವೈರಲ್ ಆಗಿದ್ದು ಹೇಗೆ?
ಕೆಲವು ದಿನಗಳ ಹಿಂದೆ, ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿತ್ತು. ಒಬ್ಬ ಮಹಿಳೆ ತನ್ನ ಸ್ಕೂಟಿಗೆ ಆಟೋ ಟಚ್ ಆಗುತ್ತದೆ ಎಂದು ಆಟೋ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಮಾತು ತಾರಕಕ್ಕೇರಿ, ಕೋಪಗೊಂಡ ಮಹಿಳೆ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಇಡೀ ಘಟನೆಯನ್ನು ಆಟೋ ಚಾಲಕ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿದ್ದಂತೆ, ಕ್ಷಣಾರ್ಧದಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಬಿಹಾರ ಮೂಲದ ಫಂಕೂರಿ ಮಿಶ್ರಾ ಎಂಬುವರು ಈ ಘಟನೆಯಲ್ಲಿ ಆರೋಪಿತ ಮಹಿಳೆಯಾಗಿದ್ದರು.
Viral Video – ಕ್ಷಮೆ ಯಾಚಿಸಿದ ಮಹಿಳೆ: “ಕನ್ನಡಿಗರಿಗೆ ಕ್ಷಮೆ ಕೇಳುತ್ತೇವೆ”
ಈ ಘಟನೆ ನಡೆದು ಹಲವು ದಿನಗಳ ನಂತರ, ಇದೀಗ ಮಹಿಳೆ ಆಟೋ ಚಾಲಕನಿಗೆ ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಮಹಿಳೆ ಮತ್ತು ಅವರ ಪತಿ ಇಬ್ಬರೂ ಆಟೋ ಚಾಲಕನ ಬಳಿ ಕ್ಷಮೆ ಯಾಚಿಸುತ್ತಿರುವುದು ಕಂಡುಬರುತ್ತದೆ. ಮಹಿಳೆ ಚಾಲಕನ ಕಾಲಿಗೆ ಬಿದ್ದು ತಮ್ಮನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ.
Read this also : ಬೆಂಗಳೂರಲ್ಲಿ ಹೆಚ್ಚುತ್ತಿದೆ ಪರಭಾಷಿಕರ ಪುಂಡಾಟ: ಆಟೋ ಚಾಲಕನಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಯುವತಿ!
ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
ವಿಚಾರಣೆ ವೇಳೆ ಮಹಿಳೆ, “ಆಸ್ಪತ್ರೆಗೆ ತೆರಳಿ ವಾಪಸ್ ಬರುತ್ತಿದ್ದಾಗ ನನ್ನ ದ್ವಿಚಕ್ರ ವಾಹನಕ್ಕೆ ಆಟೋ ತಗುಲಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಚಾಲಕ ಸರಿಯಾಗಿ ವರ್ತಿಸಲಿಲ್ಲ. ಹೀಗಾಗಿ ಕೋಪದಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದೇನೆ” ಎಂದು ತಿಳಿಸಿದ್ದಾರೆ. ಕ್ಷಮೆಯಾಚಿಸುವ ವಿಡಿಯೋದಲ್ಲಿ, ಮಹಿಳೆ ಮತ್ತು ಅವರ ಪತಿ “ಎಲ್ಲಾ ಕನ್ನಡಿಗರಿಗೂ ಕ್ಷಮೆ ಕೇಳುತ್ತೇವೆ. ಇನ್ನೊಂದು ಸಲ ಈ ರೀತಿ ಮಾಡಲ್ಲ” ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೆಯಾಗುತ್ತಿದ್ದು, ಜನರ ಪ್ರತಿಕ್ರಿಯೆಗಳನ್ನು ಆಹ್ವಾನಿಸುತ್ತಿದೆ.