ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಅಂದರೆ ಏನಾದರೂ ಒಂದು ಡಿಫರೆಂಟ್ ಆಗಿರೋ ಕೆಲಸ ಮಾಡಲೇಬೇಕು. ಕೆಲವರು ಸುಮ್ಮನೆ ರೀಲ್ಸ್ ಮಾಡಿ ಫೇಮಸ್ ಆದ್ರೆ, ಇನ್ನು ಕೆಲವರು ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡ್ತಾರೆ. ಆದರೆ ಇಲ್ಲೊಬ್ಬರು ತಾತ ಮಾಡಿರೋ ಕೆಲಸ ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ ಇವರು ತಮ್ಮ ಬೋಳು ತಲೆಯನ್ನೇ ಒಂದು ಪುಟ್ಟ ಅಕ್ವೇರಿಯಂ ಆಗಿ ಬದಲಾಯಿಸಿಕೊಂಡಿದ್ದಾರೆ! ಹೌದು, ಕೇಳಲು ವಿಚಿತ್ರ ಅನಿಸಿದರೂ ಇದು ಸತ್ಯ. ಈ ವೈರಲ್ ವಿಡಿಯೋದಲ್ಲಿ ಏನಿದೆ ಅನ್ನೋದನ್ನ ನೀವೇ ನೋಡಿ.

Viral Video – ಬೋಳು ತಲೆಯ ಮೇಲೆ ಈಜಾಡುತ್ತಿವೆ ಮೀನುಗಳು!
ವೈರಲ್ ಆಗಿರುವ ಈ ವಿಡಿಯೋದಲ್ಲಿ ಒಬ್ಬ ವೃದ್ಧರು ತಮ್ಮ ಬೋಳು ತಲೆಯ ಸುತ್ತ ಪ್ಲಾಸ್ಟಿಕ್ ಕವರ್ ಅಂಟಿಸಿಕೊಂಡಿದ್ದಾರೆ. ಅದು ನೋಡಲು ಒಂದು ಸಣ್ಣ ನೀರಿನ ತೊಟ್ಟಿಯಂತೆ ಕಾಣಿಸುತ್ತದೆ. ನಂತರ ಮಹಿಳೆಯೊಬ್ಬರು ಆ ಪ್ಲಾಸ್ಟಿಕ್ ಕವರ್ ಒಳಗೆ ನೀರು ತುಂಬಿಸಿ, ಅದರಲ್ಲಿ ಜೀವಂತ ಮೀನುಗಳನ್ನು ಬಿಡುತ್ತಾರೆ.
ಅಚ್ಚರಿಯ ವಿಷಯ ಅಂದ್ರೆ, ಆ ಮೀನುಗಳಿಗೆ ತಾತನ ತಲೆಯ ಮೇಲೆ ಆಹಾರವನ್ನೂ ಹಾಕಲಾಗುತ್ತದೆ. ಮೀನುಗಳು ಆರಾಮವಾಗಿ ತಾತನ ತಲೆಯ ಮೇಲೆ ಈಜಾಡುತ್ತಿದ್ದರೆ, ಇತ್ತ ತಾತ ಮಾತ್ರ ಯಾವುದೂ ಗೊತ್ತಿಲ್ಲದವರಂತೆ ಶಾಂತವಾಗಿ ಕುಳಿತಿದ್ದಾರೆ. ನೋಡನೋಡುತ್ತಲೇ ಇಡೀ ಬೋಳು ತಲೆ ಒಂದು ಚಂದದ ಅಕ್ವೇರಿಯಂ ತರಹ ಕಂಗೊಳಿಸುತ್ತದೆ. Read this also : ಹಸಿದ ಶ್ವಾನಕ್ಕೆ ತನ್ನ ಸ್ಕೂಲ್ ಟಿಫಿನ್ ನೀಡಿದ ಪುಟ್ಟ ಬಾಲಕಿ: ಈ ಪುಟಾಣಿಯ ‘ದೊಡ್ಡ ಮನಸ್ಸಿಗೆ’ ನೆಟ್ಟಿಗರು ಫಿದಾ!
Viral Video – 20 ಸಾವಿರಕ್ಕೂ ಹೆಚ್ಚು ವೀಕ್ಷಣೆ!
ಈ ಫನ್ನಿ ವಿಡಿಯೋವನ್ನು ಡಾ. ಹೇಮಂತ್ ಮೌರ್ಯ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಜನರು ಪ್ರಸಿದ್ಧಿಯಾಗಲು ಇಂತಹ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ. ಕೇವಲ 23 ಸೆಕೆಂಡುಗಳ ಈ ವಿಡಿಯೋ ಈಗಾಗಲೇ 20,000ಕ್ಕೂ ಹೆಚ್ಚು ವ್ಯೂಸ್ ಪಡೆದುಕೊಂಡಿದ್ದು, ಲೈಕ್ಸ್ ಮತ್ತು ರೀಟ್ವೀಟ್‌ಗಳ ಸುರಿಮಳೆಯೇ ಆಗುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ನೆಟ್ಟಿಗರ ಕಾಲೆಳೆಯುವ ಕಾಮೆಂಟ್‌ಗಳು
ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಒಬ್ಬರು, “ಈಗ ಮೀನು ಸಾಕಿದ್ದಾರೆ, ಮುಂದಿನ ದಿನಗಳಲ್ಲಿ ಏಡಿ ಅಥವಾ ರೊಯ್ಯೆಗಳನ್ನೂ ಸಾಕಿದ್ರೂ ಅಚ್ಚರಿ ಇಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಜನರಿಗೆ ಇಂತಹ ಕ್ರೇಜಿ ಐಡಿಯಾಗಳು ಎಲ್ಲಿಂದ ಬರ್ತವೋ ದೇವರಿಗೇ ಗೊತ್ತು” ಅಂತ ತಲೆ ಚಚ್ಚಿಕೊಂಡಿದ್ದಾರೆ. ಮಗದೊಬ್ಬರು, “ಇದು ಮೊಬೈಲ್ ಅಕ್ವೇರಿಯಂನ ಹೊಸ ಅವತಾರ!” ಎಂದು ತಮಾಷೆ ಮಾಡಿದ್ದಾರೆ.
ಒಟ್ಟಿನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಈ ತಾತ ಮಾಡಿರೋ ‘ಬೋಳು ತಲೆ ಅಕ್ವೇರಿಯಂ’ ಐಡಿಯಾ ಮಾತ್ರ ಸಖತ್ ವರ್ಕ್ ಆಗಿದೆ!
