Viral – ಚೀನಾದ ಹುನಾನ್ ಪ್ರಾಂತ್ಯದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ದೇಹದೊಳಗೆ ಬರೋಬ್ಬರಿ ಒಂದು ಅಡಿ ಉದ್ದದ ಜೀವಂತ ಮೀನಿನಂತಹ ಜೀವಿ ಪತ್ತೆಯಾಗಿದೆ. ಈ ಘಟನೆ ವೈದ್ಯರನ್ನೇ ಅಚ್ಚರಿಗೊಳಿಸಿದೆ.
Viral – ಘಟನೆ ವಿವರ:
ಹುನಾನ್ ಪ್ರಾಂತ್ಯದ 33 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಹುನಾನ್ ವೈದ್ಯಕೀಯ ವಿಶ್ವವಿದ್ಯಾಲಯದ ಫಸ್ಟ್ ಅಫಿಲಿಯೇಟೆಡ್ ಆಸ್ಪತ್ರೆಗೆ ದಾಖಲಾಗಿದ್ದರು. ನೋವಿನಿಂದ ಬಳಲುತ್ತಿದ್ದ ಅವರ ಮುಖ ಬಾಡಿತ್ತು ಮತ್ತು ಬೆವರುತ್ತಿದ್ದರು. ತಕ್ಷಣವೇ ವೈದ್ಯರು ಸಿಟಿ ಸ್ಕ್ಯಾನ್ ನಡೆಸಿದರು.
Viral – ಸಿಟಿ ಸ್ಕ್ಯಾನ್‌ನಲ್ಲಿ ಬಯಲಾದ ಅಚ್ಚರಿ:
ಸಿಟಿ ಸ್ಕ್ಯಾನ್ ವರದಿಯನ್ನು ನೋಡಿದ ವೈದ್ಯರಿಗೆ ಆಘಾತ ಕಾದಿತ್ತು. ಸ್ಕ್ಯಾನ್‌ನಲ್ಲಿ ಆ ವ್ಯಕ್ತಿಯ ಹೊಟ್ಟೆಯೊಳಗೆ ಜೀವಂತ ಜೀವಿ ಇರುವುದು ಪತ್ತೆಯಾಗಿದೆ. ಆ ಜೀವಿ ಕರುಳನ್ನು ಕೊರೆದು ಒಳನುಸುಳಿದ್ದು, ಆ ಭಾಗ ಗಟ್ಟಿಯಾಗಿ ಊದಿಕೊಂಡಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತಕ್ಷಣವೇ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದರು.
Read this also : ಬೀದಿ ನಾಯಿಗಳ ಭಯಾನಕ ದಾಳಿ, ಪವಾಡಸದೃಶವಾಗಿ ಪಾರಾದ ಕಾಲೇಜು ವಿದ್ಯಾರ್ಥಿನಿ..!
Viral – ಯಶಸ್ವಿ ಶಸ್ತ್ರಚಿಕಿತ್ಸೆ:
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ, ಈಲ್ ಜಾತಿಯ ಮೀನಿನಂತಹ ಜೀವಿ ಕರುಳಿನ ಸಿಗ್ಮಾಯಿಡ್ ಕೊಲೊನ್ ಭಾಗವನ್ನು ಹಾಳುಮಾಡಿರುವುದು ಕಂಡುಬಂದಿದೆ. ವೈದ್ಯರು ವಿಶೇಷ ಕ್ಲಾಂಪ್ ಬಳಸಿ ಎಚ್ಚರಿಕೆಯಿಂದ ಆ ಜೀವಿಯನ್ನು ಹೊರತೆಗೆದರು. ನಂತರ, ಹಾನಿಗೊಳಗಾದ ಕರುಳಿನ ಭಾಗವನ್ನು ಹೊಲಿದು, ಸೋಂಕು ಹರಡದಂತೆ ದೇಹವನ್ನು ಸ್ವಚ್ಛಗೊಳಿಸಲಾಯಿತು.
ಸಂಬಂಧಪಟ್ಟ ಪೋಸ್ಟ್ ಇಲ್ಲಿದೆ ನೋಡಿ : Click Here
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕೆಲ ದಿನಗಳ ಚಿಕಿತ್ಸೆಯ ನಂತರ ಆ ವ್ಯಕ್ತಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ, ಆ ಈಲ್ ಮೀನು ಆತನ ದೇಹಕ್ಕೆ ಹೇಗೆ ಪ್ರವೇಶಿಸಿತು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಈ ರೀತಿಯ ವಿಚಿತ್ರ ಪ್ರಕರಣಗಳು ಅಪರೂಪವಾಗಿದ್ದು, ವೈದ್ಯಕೀಯ ಲೋಕದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ.