Viral News- ಇತ್ತೀಚಿಗೆ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆರು ಮಂದಿ ಮಕ್ಕಳನ್ನು ಬಿಟ್ಟು ಭಿಕ್ಷುಕನೊಬ್ಬನ ಜೊತೆ ಓಡಿ ಹೋದಂತಹ ಘಟನೆಯೊಂದು ನಡೆದಿದೆ. ಈ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇಲ್ಲೊಂದು ಬಿಗ್ ಟ್ವಿಸ್ಟ್ ಸಹ ಇದೆ.

ಸಾಮಾನ್ಯವಾಗಿ ಹಣದ ಆಸೆ ಸೇರಿದಂತೆ ಕೆಲವೊಂದು ದುಬಾರಿ ಆಸೆಗಳಿಗಾಗಿ ಗಂಡ ಅಥವಾ ಹೆಂಡತಿಯನ್ನು ಬಿಟ್ಟು ಬೇರೊಬ್ಬರೊಂದಿಗೆ ಓಡಿ ಹೋದಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 36 ವಯಸ್ಸಿನ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾಳೆ. ಈ ಬಗ್ಗೆ ಆಕೆಯ ಪತಿ ರಾಜು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 87ರ ಅಡಿಯಲ್ಲಿ ಅಪಹರಣ ಸಂಬಂಧಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಹಾಗೂ ಭಿಕ್ಷುಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಮಹಿಳೆಯ ಪತಿ ರಾಜು (45) ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ತನ್ನ ಪತ್ನಿ ರಾಜೇಶ್ವರಿ ಹಾಗೂ ಆರು ಮಕ್ಕಳು ಹರ್ದೋಯ್ ನ ಹರ್ಪಾಲ್ ಪುರ ಎಂಬಲ್ಲಿ ವಾಸ ಮಾಡುತ್ತಿದ್ದೇವು. ನಮ್ಮ ಊರಿಗೆ ಆಗಾಗ ಸುಮಾರು 45 ವರ್ಷ ನನ್ಹೆ ಪಂಡಿತ್ ಎಂಬ ಭಿಕ್ಷುಕ ಭಿಕ್ಷೆ ಬೇಡಲು ಬರುತ್ತಿದ್ದ. ಹೀಗೆ ಬಂದಾಗ ಕೆಲವೊಮ್ಮೆ ನನ್ನ ಪತ್ನಿಯೊಂದಿಗೂ ಮಾತನಾಡುತ್ತಿದ್ದ. ಬಳಿಕ ಅವರಿಬ್ಬರೂ ಪೋನ್ ನಲ್ಲಿಯೂ ಸಂಭಾಷಣೆ ನಡೆಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಜ.3 ರ ಮಧ್ಯಾಹ್ನ 2 ಗಂಟೆಯ ಸುಮಾರಿನಲ್ಲಿ ನನ್ನ ಪತ್ನಿ ರಾಜೇಶ್ವರಿ, ನನ್ನ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿ ಬರುತ್ತೇನೆ ಎಂದು ಹೋದಳು. ಸುಮಾರು ಹೊತ್ತು ಕಾದು ನೋಡಿದೆವು. ನನ್ನ ಪತಿ ವಾಪಸ್ ಬರಲೇ ಇಲ್ಲ. ಬಳಿಕ ಆಕೆ ಓಡಿ ಹೋಗಿದ್ದಾಳೆ ಎಂದು ಗೊತ್ತಾಯ್ತು. ನಾನು ಎಮ್ಮೆ ಮಾರಿ ಕೂಡಿಟ್ಟ ಹಣವನ್ನು ಎತ್ತಿಕೊಂಡು ಭಿಕ್ಷುಕನೊಂದಿಗೆ ತನ್ನ ಹೆಂಡತಿ ಓಡಿ ಹೋಗಿರಬಹುದು ಎಂಬ ಶಂಕೆಯನ್ನು ರಾಜು ವ್ಯಕ್ತಪಡಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್87 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದರು.
ಈ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದ್ದಂತೆ ಮಹಿಳೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಎಲ್ಲಾ ವಿಚಾರಗಳನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಮನೆಯಲ್ಲಿರುವಾಗ ತನ್ನ ಗಂಡ ಏನಾದರೂ ಒಂದು ವಿಚಾರಕ್ಕೆ ಗಲಾಟೆ ಮಾಡುತ್ತಿದ್ದ, ನನ್ನನ್ನು ತುಂಬಾನೆ ಹೊಡೆಯುತ್ತಿದ್ದ, ಇಷ್ಟಬದ್ದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಸಂಸಾರ ಸಾಕಾಗಿ ನನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ಅಷ್ಟರಲ್ಲಿ ಇಷ್ಟೆಲ್ಲಾ ರಾದ್ದಾಂತ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಗಂಡ ನೀಡಿದ ದೂರು ಎಲ್ಲಾ ಸುಳ್ಳು, ಆತನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.