Viral News – ಸಮಾಜದಲ್ಲಿ ಮೋಸ, ದ್ರೋಹದ ಕತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಂತಹುದೇ ಘಟನೆಯೊಂದು ಪಶ್ಚಿಮ ಬಂಗಾಳದ ಹವ್ಡಾ ಜಿಲ್ಲೆಯದು. ಇಲ್ಲೋಬ್ಬ ಮಹಿಳೆ ತನ್ನ ಗಂಡನನ್ನು ವಂಚಿಸಿ, ಆತನ ಕಿಡ್ನಿ ಮಾರಾಟ ಮಾಡಿಸಿ, ಲಕ್ಷಾಂತರ ರೂಪಾಯಿ ಗಳಿಸಿದ್ದು, ಆ ಹಣದೊಂದಿಗೆ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಂಕ್ರೈಲ್ ಮೂಲದ ಮಹಿಳೆಗೆ ಮದುವೆಯಾಗಿ ಮಕ್ಕಳು ಇದ್ದರು. ಮದುವೆಯಾಗಿದ್ರೂ ಆಕೆ ರವಿದಾಸ್ ಎಂಬಾತನೊಂದಿಗೆ ಜೊತೆ ಲವ್ವಿ-ಡವ್ವಿ ಇತ್ತು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಈ ಮಹಿಳೆ ಗಂಡನ ಕಿಡ್ನಿ ಮಾರೋ ಪ್ಲಾನ್ ಮಾಡಿದ್ದಾಳೆ. ಅದರಂತೆ ಪತಿಗೆ ತನ್ನ ಕಿಡ್ನಿ ಮಾರಾಟ ಮಾಡುವಂತೆ ಒತ್ತಾಯಿಸಿದ್ದಾಳೆ. ಇನ್ನೂ ಪತ್ನಿಯ ಕಾಟ ತಾಳಲಾರದೆ ಆತ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಇದರಿಂದ ತನ್ನ ಮನೆಯ ಹಣಕಾಸಿನ ಸಮಸ್ಯೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ಭಾವಿಸಿದ್ದಾನೆ. ಆದರೆ, ಪತಿ ಮಾತ್ರ ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ವಿವಾಹ ಮಾಡಬೇಕೆಂದುಕೊಂಡಿದ್ದು ಉದ್ದೇಶಿಸಿದ್ದ ಎನ್ನಲಾಗಿದೆ.

ಪತಿ ಕಿಡ್ನಿ ಮಾರಿ ಅದರಿಂದ ಬಂದಂತಹ 10,00,000 ರೂಪಾಯಿ ಹಣವನ್ನು ನಂಬಿಕೆಯಿಟ್ಟು ಪತ್ನಿಯ ಕೈಗೆ ಕೊಟ್ಟಿದ್ದ. ಆದರೆ, ಆಕೆ ರವಿದಾಸ್ ಜೊತೆ ಅದೇ ಹಣದೊಂದಿಗೆ ಓಡಿ ಹೋಗಿದ್ದಾಳೆ. ನಂತರ ಬ್ಯಾಕರ್ಪುರದಲ್ಲಿ ಹೊಸ ಸಂಸಾರ ಆರಂಭಿಸಿದ್ದಾರೆ. ಬ್ಯಾಕರ್ ಪುರಕ್ಕೆ ಹೋದ ಪತಿ ಪತ್ನಿಯನ್ನ ಬಾ ಎಂದು ಕರೆದಿದ್ದಾನೆ. ನಾನು ಬರಲ್ಲ ಬೇಕಾದ್ರೆ ಡಿವೋರ್ಸ್ ಕೊಡ್ತೀನಿ ಎಂದು ಮಹಿಳೆ ಹೇಳಿದ್ದಾಳೆ. ಇನ್ನೂ ತಾನು ಪತ್ನಿಯ ಮಾತುಗಳನ್ನು ನಂಬಿ ಮೋಸಹೋಗಿದ್ದೇನೆ, ನನಗೆ ಹಾಗೂ ನನ್ನ ಮಕ್ಕಳಿಗೆ ನ್ಯಾಯ ದೊರಕಿಸಿ ಎಂದು ಇದೀಗ ಪತಿ ಪೊಲೀಸರ ಮೊರೆ ಹೋಗಿದ್ದಾನೆ.