Viral News – ಇಂದಿನ ಆರ್ಟಿಫಿಷಿಯಲ್ ತಂತ್ರಜ್ಞಾನ (AI) ಕಾಲದಲ್ಲೂ ಇನ್ನೂ ಅನೇಕ ಕಡೆ ಮೂಡನಂಭಿಕೆಗಳು ಚಾಲ್ತಿಯಲ್ಲಿವೆ ಎಂದೇ ಹೇಳಬಹುದಾಗಿದೆ. ಅದರಲ್ಲೂ ನಿಧಿ, ಐಶ್ವರ್ಯ ಕೆಲವೊಂದು ಪ್ರಯೋಜನಗಳು ಸಿಗುತ್ತದೆ ಎಂಬ ಕೆಟ್ಟ ಉದ್ದೇಶದಿಂದ ವಾಮಾಚಾರ, ಬಾಣಮತಿಯಂತಹ ಕೃತ್ಯಗಳನ್ನೆಸಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಮಗನ ಮಾನಸಿಕ ಆರೋಗ್ಯ ಗುಣಮುಖವಾಗುತ್ತದೆ (Viral News) ಎಂದು ಭಾವಿಸಿದ ದಂಪತಿ ಯೂಟ್ಯೂಬ್ ನಲ್ಲಿ ಮಂತ್ರಗಳನ್ನು ಕಲಿತು 12 ವರ್ಷದ ಬಾಲಕಿಯನ್ನು ಬಲಿ ಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಈ ಘಟನೆ ನಡೆದಿದೆ. ಮದುವೆಯೊಂದರ ಸಮಾರಂಭಕ್ಕೆ ಬಂದಿದ್ದ ಅಣ್ಣನ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ನ.26 ರ ರಾತ್ರಿ ಈ ಘಟನೆ ಡಿಯೋರಿಯಾದ ಭಟ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮುಗ್ದ ಬಾಲಕಿಯನ್ನು ಮಾಟ ಮಂತ್ರ, ಮೂಡನಂಬಿಕೆಯ ಪ್ರಭಾವದಿಂದ ಕೊಲೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಿದಾಗ ಕೆಲವೊಂದು ಆಘಾತಕಾರಿ ಸಂಗತಿಗಳು ಹೊರಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಮತಷ್ಟು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೃತ ಬಾಲಕಿಯನ್ನು ಭಟ್ನಿಯ ಭರ್ಹೆ ಚೌರಾಹ ನಿವಾಸಿ ಅವಧೇಶ್ ಯಾದವ್ ರವರ ಮಗಳು ಎಂದು ಗುರ್ತಿಸಲಾಗಿದೆ. ಅವಧೇಶ್ ಯಾದವ್ ತಮ್ಮ ಸಂಬಂಧಿಕರ ಮದುವೆಗಾಗಿ ಡಿಯೋರಿಯಾಗೆ ಬಂದಿದ್ದರು ಎನ್ನಲಾಗಿದೆ. ಉತ್ತರಾಖಂಡದಿಂದ ಬಂದಿದ್ದಂತಹ ಆರೋಪಿ ಶೇಷನಾಥ್ ಯಾದವ್ ಹಾಗೂ ಆತನ ಪತ್ನಿ ಸಬಿತಾ ಸಹ ಇದೇ ಮದುವೆಗೆ ಬಂದಿದ್ದರಂತೆ. ಶೇಷನಾಥ ಹಾಘೂ ಸವಿತಾ ದಂಪತಿಯ 22 ವರ್ಷ ವಯಸ್ಸಿನ ಮಗ ಮಾನಸಿಕ ಅಸ್ವಸ್ಥನಾಗಿದ್ದ. ಈ ದಂಪತಿಯ ಕನಸಿನಲ್ಲಿ ದೇವಿ ಬಂದಿದ್ದು, ಕನ್ಯೆಯಾಗಿರುವ ಹುಡುಗಿಯನ್ನು ಬಲಿಕೊಟ್ಟರೇ ಮಗ ಗುಣಮುಖನಾಗುತ್ತಾನೆ ಎಂದು ಹೇಳಿದ್ದರಂತೆ. ಬಳಿಕ ಆರೋಪಿಗಳು ಯೂಟ್ಯೂಬ್ ನಲ್ಲಿ ಬಲಿಕೊಡುವಂತಹ ಮಂತ್ರ ಕಲಿತಿದ್ದಾರೆ. ಮದುವೆಗಾಗಿ ಬಂದ ದಂಪತಿ 12 ವರ್ಷದ ಮುಗ್ದ ಬಾಲಕಿಯನ್ನು ಬಲಿ ಕೊಡಲು ಪ್ಲಾನ್ ಮಾಡಿದ್ದಾರೆ.
ಮದುವೆ ಎಂದ ಕೂಡಲೇ ಸಂಭ್ರಮ ಮನೆ ಮಾಡಿರುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಈ ಸಮಯವನ್ನು ಬಳಸಿಕೊಂಡ ಆರೋಪಿಗಳು ಬಾಲಕಿಗೆ ಆಮಿಷ ಒಡ್ಡಿ ಆಕೆಯನ್ನು ಬಲಿ ಕೊಟ್ಟಿದ್ದಾರೆ. ಬಳಿಕ ಬಾಲಕಿಯ ಶವವನ್ನು ಶಾಲಿನಲ್ಲಿ ಸುತ್ತಿ ಮನೆಯಿಂದ ಕೊಂಚ ದೂರ ಎಸೆದಿದ್ದಾರೆ. ಕೊಲೆಯಾದ ಮರುದಿನ ಬಾಲಕಿಯ ಶವ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಸಲೀ ಸತ್ಯಾಂಶ ಹೊರಬಂದಿದೆ ಎನ್ನಲಾಗಿದೆ.