Valmiki Jayanthi – ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಆಸ್ತಿಯನ್ನು ನೀಡಬೇಕೆ ಹೊರತು ಇತರೆ ಆಸ್ತಿಯನ್ನು ನೀಡಬಾರದು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸದರೇ ಆ ಶಿಕ್ಷಣವೇ ಅವರನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ (Valmiki Jayanthi) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಾಲ್ಮೀಕಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ವಿಶ್ವಕ್ಕೆ ರಾಜ್ಯ ಎಂದರೇ ಹೇಗಿರಬೇಕು (Valmiki Jayanthi) ಎಂಬುದನ್ನು ರಾಮಾಯಣ ಕಾವ್ಯದ ಮೂಲಕ ತಿಳಿಸಿಕೊಟ್ಟ ಮಹನೀಯ ಮಹರ್ಷಿ ವಾಲ್ಮೀಕಿ. ಇಡೀ ವಿಶ್ವವೇ ರಾಮಾಯಣ ಮಹಾಕಾವ್ಯವನ್ನು ಒಪ್ಪುತ್ತದೆ. ನೇರವಾದ ನುಡಿಗಳನ್ನು ಆಡುತ್ತಿದ್ದ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ವಾಲ್ಮೀಕಿ ಸಮುದಾಯದ ಅನೇಕರು ದೇಶದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಸುಮಾರು ದಿನಗಳ ಕಾಲ ವಾಲ್ಮೀಕಿ ಸ್ವಾಮೀಜಿ ಪ್ರಸನ್ನಾನಂದ ಪುರಿಗಳು (Valmiki Jayanthi) ಹೋರಾಟ ನಡೆಸಿ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಶೇ.7 ರಷ್ಟು ಏರಿಕೆ ಮಾಡಿಸಿದ್ದಾರೆ. ಅವರ ಶ್ರಮದಿಂದ ಎಲ್ಲರಿಗೂ ಅನುಕೂಲವಾಗಿದೆ. ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣವನ್ನು ಕೊಡಿಸುವ ಕೆಲಸ ಮಾಡಬೇಕು.
ಇನ್ನೂ ಗುಡಿಬಂಡೆ (Valmiki Jayanthi) ತಾಲೂಕಿಗೆ ಬಸ್ ಡಿಪೋ, ಎ.ಪಿ.ಎಂ.ಸಿ ಮಾರುಕಟ್ಟೆ, ಪ್ರವಾಸೋದ್ಯಮ ಅಭಿವೃದ್ದಿ ಸೇರಿದಂತೆ ಹಲವು ಕೆಲಸಗಳು ಮಾಡಬೇಕಿದೆ. ತಾಲೂಕಿನಲ್ಲಿ ಬಹುತೇಕ 80% ರಷ್ಟು ರಸ್ತೆಗಳು ಪೂರ್ಣಗೊಂಡಿವೆ. ಉಳಿದ ಎಲ್ಲಾ ರಸ್ತೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುತ್ತದೆ. ಜೊತೆಗೆ ಕೆಲವೊಂದು ಕಾರಣಗಳಿಂದ (Valmiki Jayanthi) ಗುಡಿಬಂಡೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರದಲ್ಲೇ ವಾಲ್ಮೀಕಿ ಭವನ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷ ಗಂಗಾಧರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ವಾಲ್ಮೀಕಿ (Valmiki Jayanthi) ಭವನ ನಿರ್ಮಾಣ ಮಾಡಿಕೊಡುವಂತೆ ಮನವಿಗಳನ್ನು ನೀಡುತ್ತಲೇ ಬರುತ್ತಿದ್ದೇವೆ. ಈಗಾಗಲೇ ಶಾಸಕರು ಮುತುವರ್ಜಿ ವಹಿಸಿ ಭವನ ನಿರ್ಮಾಣಕ್ಕೆ ಜಾಗ ಸಹ ಮಂಜೂರು ಮಾಡಿಸಿದ್ದಾರೆ. ಭವನ ನಿರ್ಮಾಣಕ್ಕೆ ಅನುದಾನದ ಸಮಸ್ಯೆಯಾಗಿದೆ. ಶಾಸಕರು ಶೀಘ್ರವಾಗಿ ಅನುದಾನವನ್ನು ಒದಗಿಸಿಕೊಟ್ಟು ಭವನ ನಿರ್ಮಾಣಕ್ಕೆ(Valmiki Jayanthi) ಸಹಕರಿಸಬೇಕು. ಜೊತೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಸೇರಿದಂತೆ ಪರಿಶಿಷ್ಟರ ಜಮೀನುಗಳಿಗೆ ಹೋಗುವ ರಸ್ತೆ ಸಮಸ್ಯೆಗಳನ್ನು ಹಾಗೂ ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಣ ತಜ್ಞ ಎನ್.ನಾರಾಯಣಸ್ವಾಮಿ, ನೇರವಾದ ನುಡಿಗಳನ್ನು (Valmiki Jayanthi) ಆಡುತ್ತಿದ್ದ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ವಾಲ್ಮೀಕಿ ಮಹಾನ್ ಜ್ಞಾನಿ. ಇಡೀ ವಿಶ್ವಕ್ಕೆ ಶ್ರೀರಾಮ ಸೀತೆಯ ಬಗ್ಗೆ ಸಾರಿದವರು. ರಾಮಾಯಣದಲ್ಲಿ ಮನುಷ್ಯ ಹೇಗೆ ಬದುಕಬೇಕು, ಗುರುಹಿರಿಯರನ್ನು ಹೇಗೆ ಗೌರವಿಸಬೇಕು, ಸ್ತ್ರೀಯರಿಗೆ, ತಂದೆ-ತಾಯಿ ಹಾಗೂ ಸಹೋದರರೊಂದಿಗೆ ಬದುಕಬೇಕು (Valmiki Jayanthi) ಎಂಬುದನ್ನು ತಿಳಿಸಿಕೊಡುವ ಮೂಲಕ ಜೀವನದ ಕಲೆಯನ್ನು ರೂಪಿಸಿದೆ. ಇದನ್ನು ಅರಿತು ತಮ್ಮ ಮಕ್ಕಳಿಗೆ ಪೋಷಕರು ತಿಳಿಸುವ ಕೆಲಸವನ್ನು ಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ (Valmiki Jayanthi) ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಕೆಲ ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗಾಯತ್ರಿ ಪ್ರಸಾದ ಭವನದವರೆಗೂ (Valmiki Jayanthi) ವಾಲ್ಮೀಕಿ ಭಾವಚಿತ್ರಗಳುಳ್ಳ ಬೆಳ್ಳಿ ರಥಗಳನ್ನು ಮೆರವಣಿಗೆ ಮಾಡಲಾಯಿತು.
ಈ ಸಮಯದಲ್ಲಿ (Valmiki Jayanthi) ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ.ಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಬಿಇಒ ಕೃಷ್ಣಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನರೇಂದ್ರ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಗೌರವಾಧ್ಯಕ್ಷ ಸ.ನ.ನಾಗೇಂದ್ರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಾಲ್ಮೀಕಿ ಸಂಘದ ಮುಖಂಡರುಗಳು, ಗ್ರಾಪಂ ಅಧ್ಯಕ್ಷರುಗಳು, ಸದಸ್ಯರುಗಳು ಸೇರಿದಂತೆ ಹಲವರು ಇದ್ದರು.