ನಮ್ಮ ಸುತ್ತಮುತ್ತಲಿನಲ್ಲಿ ಸಿಗುವಂತಹ ಕೆಲವೊಂದು ಸಸಿಗಳಲ್ಲಿ ಅದ್ಬುತವಾದ ಔಷಧಿ ಗುಣಗಳಿರುತ್ತವೆ. ನಮ್ಮ ಪೂರ್ವಜರು ಔಷಧಿ ಮೂಲಿಕೆಗಳಿಂದ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಈಗಲೂ ಸಹ ಅನೇಕರಿಗೆ ನಮ್ಮ ಸುತ್ತಮುತ್ತಲಿರುವ ಸಸಿಗಳಲ್ಲಿರುವ ಔಷಧ ಗುಣಗಳ ಬಗ್ಗೆ ತಿಳಿದಿರುವುದಿಲ್ಲ. ಮುಖದ ಮೇಲಿನ ಮೊಡವೆಗಳನ್ನು ಈ ಎಲೆಗಳನ್ನು ಬಳಸಿ ಹೋಗಲಾಡಿಸಬಹುದು. ಈ ಕುರಿತು ಸಂಗ್ರಹಿಸಿದ ಮಾಹಿತಿ ಹಂಚಿಕೊಳ್ಳಲಾಗಿದೆ.
ಪ್ರಾಯದ ಯುವಕ-ಯುವತಿಯರಿಗೆ ಮೊಡವೆ ಎಂಬುದು ದೊಡ್ಡ ಸಮಸ್ಯೆ ಎಂದು ಹೇಳಬಹುದು. ಮೊಡವೆಗಳಿಂದ ಪಾರಾಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅನೇಕ ಕ್ರೀಮ್ ಗಳನ್ನು ಹಚ್ಚಿ ಮುಖವನ್ನು ಮತಷ್ಟು ಹಾಳು ಮಾಡಿಕೊಂಡಿರುವ ಘಟನೆಗಳೂ ಸಹ ನಡೆದಿದೆ. ಇದೀಗ ಮೊಡವೆಗಳನ್ನು ಪೇರಳೆ ಹಣ್ಣಿನ ಎಲೆಯಿಂದ ಹೋಗಲಾಡಿಸಬಹುದಂತೆ. ಪೇರಳೆ ಹಣ್ಣಿನಲ್ಲಿ ತುಂಬಾನೆ ಔಷಧೀಯ ಗುಣಗಳಿವೆ. ಪೇರಳೆ ಹಣ್ಣು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಸಹ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಜ್ಷರು ಹೇಳುತ್ತಾರೆ. ಪೇರಳೆ ಹಣ್ಣಿನ ಎಲೆಗಳಲ್ಲಿರುವ ಉಪಯೋಗಗಳು ಏನು ಎಂಬ ವಿಚಾರಕ್ಕೆ ಬಂದರೇ,
ಪೇರಳೆ ಎಲೆಗಳಿಂದ ಹುಡುಗಿಯರ ಸೌಂದರ್ಯ ಹೆಚ್ಚಲು ಸಹಕಾರಿಯಾಗಿದೆ ಎನ್ನಲಾಗುತ್ತಿದೆ. ಮಾಲಿನ್ಯದ ಕಾರಣದಿಂದ ಮುಖದ ಮೇಲಿನ ಕಲೆಗಳು ಹಾಗೂ ಮೊಡವೆಗಳು ಸಂಪೂರ್ಣವಾಗಿ ಹೋಗುತ್ತವೆ ಹಾಗೂ ಮುಖದ ಸೌಂದರ್ಯ ಹೆಚ್ಚಾಗುತ್ತದೆಯಂತೆ. ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ದತಿ ಹಾಗೂ ಮಾಲಿನ್ಯದ ಕಾರಣದಿಂದ ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆಗಳು, ಗೆರೆಗಳು ಕಂಡು ಬರುತ್ತಿರುತ್ತದೆ. ಪೇರಳೆ ಎಲೆಗಳು ಇವುಗಳನ್ನು ನಿವಾರಣೆ ಮಾಡುತ್ತದೆ ಎನ್ನಲಾಗಿದೆ. ಈ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮುಖದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಮೊಡವೆಗಳನ್ನು ಹೋಗಲಾಡಿಸುತ್ತವೆ.
ಇನ್ನೂ ಪೇರಳೆ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆಯಬೇಕು. ನಂತರ ಉಳಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸರಿಯಾಗಿ ಮಸಾಜ್ ಮಾಡಬೇಕು. ಇದರಿಂದ ಮುಖ ಕಪ್ಪಾಗುವುದು ಕಡಿಮೆಯಾಗುತ್ತದೆ. ಮತ್ತೊಂದು ಉಪಯೋಗವೆಂದರೇ ಕೆಲವು ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಮುಖವನ್ನು ತೊಳೆಯಬೇಕು. ಹೀಗೆ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿದರೇ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ.
ವಿಶೇಷ ಸೂಚನೆ: ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದ್ದು, ಈ ವಿಧಾನಗಳನ್ನು ಅನುಸರಿಸುವದಕ್ಕೂ ಮುನ್ನಾ ವೈದ್ಯರ ಸಲಹೆ ಪಡೆಯುವುದು ಸೂಕ್ತ.