ಮೀನುಗಾರಿಕೆಯನ್ನೇ ನಂಬಿಕೊಂಡು ಅನೇಕರು ಜೀವನ ಸಾಗಿಸುತ್ತಿದ್ದಾರೆ. ಮೀನು ಹಿಡಿಯಲು ಸಮುದ್ರಕ್ಕೆ ಹೋದಾಗ ಬೃಹತ್ ಗಾತ್ರದ ಮೀನುಗಳು, ಸೇರಿದಂತೆ ಕೆಲವೊಂದು ವಿಚಿತ್ರ ಜಲಚರಗಳೂ ಸಹ ಬಲೆಗೆ ಸಿಗುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದಲ್ಲಿ ಮೀನು ಹಿಡಿಯಲು ಹೋದ ಮೀನುಗಾರರಿಗೆ ಬರೊಬ್ಬರಿ 1500 ಕೆಜಿ (Gaint Shark) ತೂಕದ ಎರಡು ತಿಮಿಂಗಲಗಳು ಸಿಕ್ಕಿದೆ. ಈ ತಿಮಿಂಗಲಗಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು (Gaint Shark) 1,500 ಕೆಜಿ ತೂಕದ ಎರಡು ತಿಮಿಂಗಿಲ ಶಾರ್ಕ್ ಮೀನುಗಾರರ ಬಲೆಗೆ ಸಿಕ್ಕಿದೆ. (Gaint Shark) ಈ ಬೃಹತ್ ಗಾತ್ರದ ಮೀನನ್ನು ದಡಕ್ಕೆ ತರಲು ಕ್ರೇನ್ ಬಳಸಬೇಕಾಗಿದೆ. ಕ್ರೇನ್ ಮೂಲಕ ಈ ತಿಮಿಂಗಲಗಳನ್ನು ಹೊರತೆಗೆದ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿದೆ.
to watch this Video click here: https://x.com/fpjindia/status/1817786067161931907
ಇನ್ನೂ ಈ ತಿಮಿಂಗಲ ಅಥವಾ ಶಾರ್ಕ್‌ಗಳನ್ನು ಸ್ಥಳೀಯವಾಗಿ ಚುಕ್ಕಾ, ಸೊರ ಚೇಪ ಎಂದು ಕರೆಯುತ್ತಾರೆ. ಕೆಲವೊಂದು ವರದಿಗಳ ಪ್ರಕಾರ ವಿಶ್ವನಾಥಪಲ್ಲಿ ಗ್ರಾಮದ ವೀರಬಾಬು ಎಂಬ ಮೀನುಗಾರನ ಬಲೆಗೆ ಈ ತಿಮಿಂಗಲ ಸಿಕ್ಕಿಬಿದ್ದಿದೆ. ಮೀನುಗಾರರು ಜೆಸಿಬಿ ಲೋಡರ್ ಸಹಾಯದಿಂದ ಈ ತಿಮಿಂಗಲವನ್ನು ಹೊರತೆಗೆದಿದ್ದಾರೆ. ಜು.26 ರಂದು ಎರಡು ದೊಡ್ಡ ಮೀನು ಅವರ ಬಲೆಗೆ ಬಿದ್ದಿದ್ದು, ಅವನ್ನು ವೀರಬಾಬು ರವರ ತಂತ ಹಿಡಿದಿದೆ. ಈ ಪೈಕಿ ಒಂದು ತಿಮಿಂಗಲ ಸತ್ತಿತ್ತಂತೆ. ಮತ್ತೊಂದು ಜೀವಂತವಾಗಿದ್ದು, ಅದನ್ನು ಸುರಕ್ಷಿತವಾಗಿ ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ಹೇಳಲಾಗಿದೆ.