ಸಿಪಿಐಎಂ ಪಕ್ಷದ ಹಿರಿಯ ನಾಯಕ ಸೀತಾರಾಂ ಯೆಚೂರಿ (Sitharam Yechury) ರವರ ನಿಧನ ಭಾರತದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ಕಮ್ಯೂನಿಸ್ಟ್ ಚಳುವಳಿಯ ಅಪ್ರತಿಮ ನಾಯಕ ಎಂದು ಸಿಪಿಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೀತಾರಾಂ ಯೆಚೂರಿಯವರಿಗೆ (Sitharam Yechury) ಸಿಪಿಎಂ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪರವಾಗಿ ಧ್ವನಿ ಎತ್ತಿದ, ಕೋಮುವಾದದ ವಿರುದ್ಧ ಎಲ್ಲರನ್ನು ಸಜ್ಜುಗೊಳಿಸಿದ ಪ್ರಮುಖ ನಾಯಕ ಸೀತಾರಾಂ ಯೆಚೂರಿ ಅವರು ಜಗತ್ತಿಗೆ ವಿದಾಯ ಹೇಳಿದ್ದಾರೆ. (Sitharam Yechury) ಅವರು ಬಡವರು, ಕಾರ್ಮಿಕರು ಮತ್ತು ಶೋಷಿತರ ಧ್ವನಿಯಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ, ಅವರ ಮರಣ ಭಾರತದ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ರಾಜಕೀಯ ಸಿದ್ದಾಂತ, ಮಾರ್ಗದರ್ಶನ ಇಂದಿನ ಅನೇಕರಿಗೆ ಮಾದರಿಯಾಗಿದೆ ಎಂದರು.
ಬಳಿಕ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ಸೀತಾರಾಮ್ ಯೆಚೂರಿ (Sitharam Yechury) ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಅವರು ಮಹಾನ್ ನಾಯಕ, ನಿಜವಾದ ಸಮಾಜವಾದಿ ಮತ್ತು ಅಸಾಧಾರಣ ಮಾನವತಾವಾದಿ. ಅವರ ನಿಧನ ನಮ್ಮ ದೇಶದ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ. ಕಾರ್ಮಿಕ ವರ್ಗಕ್ಕೆ ಅವರ ಅಚಲ ಬದ್ಧತೆ ಮತ್ತು ಭಾರತೀಯ ರಾಜಕೀಯಕ್ಕೆ ಅವರು ನೀಡಿದ ಕೊಡುಗೆಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ಜೊತೆಗೆ ತಮ್ಮ ಜೀವನದ ಕೊನೆಯವರೆಗೂ ದುಡಿಯುವ ಜನರ ಪರವಾಗಿ ಶ್ರಮಿಸಿದಂತಹ ಧೀಮಂತ ನಾಯಕ ಎಂದರೇ ತಪ್ಪಾಗಲಾರದು. (Sitharam Yechury) ಅವರ ಅಗಲಿಗೆ ಈ ದೇಶದ ದುಡಿಯುವ ಜನರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ವೇಳೆ ಸಿಪಿಎಂ ಪಕ್ಷದ ಆದಿನಾರಾಯಣಸ್ವಾಮಿ, ಶ್ರೀನಿವಾಸ್, ದೇವರಾಜು, ರಮಣ, ಮುಖಂಡರಾದ ರಾಜು, ಅಮರಾವತಿ, ಗಾಂಧಿ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.