Tuesday, June 24, 2025
HomeStateCrime News: ಬಾಯ್ ಫ್ರೆಂಡ್ ಜೊತೆ ಸೇರಿಕೊಂಡು ತಾಯಿಯನ್ನು ಕೊಲೆ ಮಾಡಿದ ಮಗಳು….!

Crime News: ಬಾಯ್ ಫ್ರೆಂಡ್ ಜೊತೆ ಸೇರಿಕೊಂಡು ತಾಯಿಯನ್ನು ಕೊಲೆ ಮಾಡಿದ ಮಗಳು….!

ತಾಯಿಯನ್ನು ದೇವರ ಸ್ವರೂಪ ಎಂದೇ ಕರೆಯಲಾಗುತ್ತದೆ. ಆದರೆ ಆಗಾಗ ಕೆಲವೊಂದು ಘಟನೆಗಳು ಅದಕ್ಕೆ ತದ್ವಿರುದ್ದ ಎಂದು ಹೇಳಬಹುದು. ಇದೀಗ ಹೆತ್ತ ತಾಯಿಯನ್ನೇ ಮಗಳೊಬ್ಬಳು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯ ಉಸಿರುಗಟ್ಟಿಸಿ ಕೊಲೆ (Crime News) ಮಾಡಿಬಿಟ್ಟಿದ್ದಾಳೆ. ಈ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹೊಂಗಸಂದ್ರದಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ (Crime News) ಕೊಲೆ ಮಾಡಿರೋ ಭಯಾನಕ ಘಟನೆ ನಗರದ ಹೊಂಗಸಂದ್ರದಲ್ಲಿ ಬೆಳಕಿಗೆ ಬಂದಿದೆ. 46 ವರ್ಷದ ಜಯಲಕ್ಷ್ಮಿ ಮೃತ ದುರ್ದೈವಿ. ಈಕೆಯ ಸಾವಿಗೆ ಕಾರಣವಾಗಿರೋದು 20 ವರ್ಷ ಕಷ್ಟಪಟ್ಟು ಸಾಕಿದ ಮುದ್ದಿನ ಮಗಳು ಪವಿತ್ರಾ ಎಂದು ತಿಳಿದುಬಂದಿದೆ. (Crime News) ಮೃತ ಜಯಲಕ್ಷ್ಮಿ ಅವರು 12 ವರ್ಷದ ಹಿಂದೆ ಸುರೇಶ್ ಎಂಬಾತನೊಂದಿಗೆ ಮಗಳ ಮದುವೆ ಮಾಡಿದ್ದರು. ಸುರೇಶ್ ದಿನಸಿ ಅಂಗಡಿ ನಡೆಸುತ್ತಿದ್ದ. ಜೋಡಿಯ ಸಂಸಾರ ಚೆನ್ನಾಗಿಯೇ ಇದ್ದರೂ, ಪವಿತ್ರಾ, ಲವಲೀಶ್ ಅನ್ನೋ ಪ್ರಿಯಕರನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. (Crime News) ಈ ಅಕ್ರಮ ಸಂಬಂಧವೇ ತಾಯಿಯ ಕೊಲೆಗೆ ಕಾರಣವಾಗಿದೆ.

Daughter murderd her mother 0

ಇನ್ನೂ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪವಿತ್ರಾ ತನ್ನ ಪ್ರಿಯಕರ ಲವಲೀಶ್ ಜೊತೆಗೆ ಮಲಗಿದ್ದಳು. (Crime News) ಇದನ್ನು ಜಯಲಕ್ಷ್ಮೀ ನೋಡಿದ್ದಾಳೆ. ಬಳಿಕ ಈ ಕುರಿತು ಜಯಲಕ್ಷ್ಮೀ ಕೇಳಿದ್ದಾಳೆ. ಆಗ ಇಬ್ಬರ ಜೊತೆ ಮನೆಯಲ್ಲಿ ಗಲಾಟೆ ನಡೆದಿದೆ. ಗಲಾಟೆ ಉತ್ತುಂಗಕ್ಕೇರಿದ್ದು, ಪ್ರಿಯಕರ್‍ ಹಾಗೂ ಮಗಳು (Crime News) ಇಬ್ಬರೂ ಸೇರಿ ಪಕ್ಕದಲ್ಲಿದ್ದ ಟವಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.  ತಾಯಿಯನ್ನು ಕೊಲೆ ಮಾಡಿದ ಬಳಿಕ ಹೈಡ್ರಾಮಾ ಮಾಡಿದ್ದಾರೆ. (Crime News) ತಾಯಿಯನ್ನು ಕೊಲೆ ಮಾಡಿ, ಆಕೆ ಬಾತ್ ರೂಂನಲ್ಲಿ ಜಾರಿ ಬಿದ್ದು ತಾಯಿ ಸತ್ತಿದ್ದಾಳೆ ಎಂದು ಡ್ರಾಮಾ ಮಾಡಿದ್ದಾಳೆ.

ಇನ್ನೂ ಈ ಘಟನೆ ಕಳೆದ ಸೆಪ್ಟೆಂಬರ್ 11ರಂದು ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಪವಿತ್ರಾ ಹಾಗೂ ಲವಲೀಶ್ ಇಬ್ಬರು ರೂಂನೊಳಗೆ ಸೇರಿಕೊಂಡಿದ್ದರು. (Crime News)  ಆಗ ಮನೆಗೆ ಬಂದ ಜಯಲಕ್ಷ್ಮಿ ಇಬ್ಬರ ಜೊತೆ ಜಗಳ ಮಾಡಿದ್ದಾರೆ. ಕೊನೆಗೆ ಇಬ್ಬರೂ ಸೇರಿ ಪವಿತ್ರಾ ತಾಯಿಯ ಪ್ರಾಣ ತೆಗೆದಿದ್ದಾರೆ. ಬಾತ್ ರೂಂನಲ್ಲಿ ಬಿದ್ದು ಸತ್ತಿದ್ದಾಳೆ ಎಂದು ಡ್ರಾಮಾ (Crime News) ಮಾಡಿದ್ದಾಳೆ. ಆದರೆ ಜಯಲಕ್ಷ್ಮಿಯವರ ಮೃತದೇಹ ನೋಡಿದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಕೊಲೆ ನಡೆದಿದೆ ಎಂದು ತಿಳಿದಿದ್ದು, ಕೂಡಲೇ ಪವಿತ್ರಾ ಹಾಗೂ ಆಕೆಯ ಬಾಯ್ ಪ್ರೆಂಡ್ ನವನೀಶ್ ನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular