Monday, January 19, 2026
HomeNationalTiger : ಮನೆಯೊಳಗೆ ನುಗ್ಗಿ ಮಂಚದ ಮೇಲೆ ರಾಜ ಗಾಂಭೀರ್ಯದಿಂದ ಕುಳಿತ ಹುಲಿರಾಯ! ಅಸಲಿಗೆ ಅಲ್ಲಿ...

Tiger : ಮನೆಯೊಳಗೆ ನುಗ್ಗಿ ಮಂಚದ ಮೇಲೆ ರಾಜ ಗಾಂಭೀರ್ಯದಿಂದ ಕುಳಿತ ಹುಲಿರಾಯ! ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ?

ಸಾಮಾನ್ಯವಾಗಿ ಅತಿಥಿಗಳು ಮನೆಗೆ ಬಂದರೆ ನಾವು ಮಂಚದ ಮೇಲೆ ಕುಳಿತುಕೊಳ್ಳಲು ಹೇಳುತ್ತೇವೆ. ಆದರೆ, ಇಲ್ಲೊಬ್ಬ “ಭಯಾನಕ ಅತಿಥಿ” ಯಾರಿಗೂ ಹೇಳದೆ ಕೇಳದೆ ನೇರವಾಗಿ ಮನೆಯೊಳಗೆ ನುಗ್ಗಿ, ಆರಾಮವಾಗಿ ಮಂಚದ ಮೇಲೆ ಕುಳಿತುಬಿಟ್ಟಿದ್ದಾನೆ! ಅಷ್ಟಕ್ಕೂ ಆ ಅತಿಥಿ ಮತ್ಯಾರೂ ಅಲ್ಲ, ಸಾಕ್ಷಾತ್ (Tiger) ಹುಲಿರಾಯ! ಮಧ್ಯಪ್ರದೇಶದಲ್ಲಿ ನಡೆದ ಈ ಅಚ್ಚರಿಯ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

A tiger entered a house in Madhya Pradesh, injured a villager, and calmly rested on a cot for hours near Bandhavgarh Tiger Reserve

Tiger – ಮೊದಲು ಪಂಚ್.. ಆಮೇಲೆ ರೆಸ್ಟ್!

ಹುಲಿ ಎಂದರೆ ಸಾಕು, ಮನುಷ್ಯರಷ್ಟೇ ಅಲ್ಲ ಪ್ರಾಣಿಪಕ್ಷಿಗಳಿಗೂ ನಡುಕ ಶುರುವಾಗುತ್ತದೆ. ಅದರ ಗರ್ಜನೆ ಕೇಳಿದರೆ ಸಾಕು ಎದೆ ಬಡಿತ ಜೋರಾಗುತ್ತದೆ. ಆದರೆ ಮಧ್ಯಪ್ರದೇಶದ ಬಾಂಧವಗಢ ಟೈಗರ್ ರಿಸರ್ವ್ ಬಳಿಯ ಹಳ್ಳಿಯೊಂದರಲ್ಲಿ ಹುಲಿಯೊಂದು ಮಾಡಿದ ಹಲ್‌ಚಲ್‌ ಅಷ್ಟಿಷ್ಟಲ್ಲ.

ಈ ಹುಲಿ ಮೊದಲು ಗೋಪಾಲ್ ಕೋಲ್ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿ ಒಂದು ‘ಪಂಚ್’ ನೀಡಿದೆ. ಆ ಪೆಟ್ಟಿನಿಂದ ಗೋಪಾಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಲ್ಲಿಂದ ಯಾರಿಗೂ ಸಿಗದೆ ಜಾರಿಕೊಂಡ ಹುಲಿರಾಯ (Tiger), ನೇರವಾಗಿ ಹತ್ತಿರದಲ್ಲೇ ಇದ್ದ ದುರ್ಗಾಪ್ರಸಾದ್ ದ್ವಿವೇದಿ ಎಂಬುವವರ ಮನೆಯೊಳಗೆ ನುಗ್ಗಿದೆ.

ಮಂಚದ ಮೇಲೆ ಹುಲಿ ದರ್ಬಾರ್!

ಮನೆಯೊಳಗೆ ನುಗ್ಗಿದ ಹುಲಿ ಸುಮ್ಮನೆ ಕೂರಲಿಲ್ಲ, ಅಲ್ಲಿನ ಮಂಚವನ್ನೇ ತನ್ನ ಸಿಂಹಾಸನವನ್ನಾಗಿ ಮಾಡಿಕೊಂಡಿತು. ಏನೂ ತಿಳಿಯದವನಂತೆ ರಾಜ ಗಾಂಭೀರ್ಯದಿಂದ ಮಂಚದ ಮೇಲೆ ಕುಳಿತು ವಿಶ್ರಾಂತಿ ಪಡೆಯಲು ಶುರು ಮಾಡಿತು. ಇದನ್ನು ಕಂಡ ಮನೆಯವರು ಮತ್ತು ಗ್ರಾಮಸ್ಥರು ಭಯದಿಂದ ಬೆಚ್ಚಿಬಿದ್ದಿದ್ದಾರೆ. ಎಲ್ಲಿ ಹುಲಿ (Tiger) ದಾಳಿ ಮಾಡುತ್ತದೋ ಎಂದು ಹೆದರಿ ಎಲ್ಲರೂ ಮನೆಯ ಮೇಲ್ಛಾವಣಿ ಏರಿ ಕುಳಿತಿದ್ದರು. Read this also : 2026ರಲ್ಲಿ ಜಗತ್ತಿಗೆ ಗಂಡಾಂತರ? ನಡುಕ ಹುಟ್ಟಿಸುತ್ತಿವೆ ನೋಸ್ಟ್ರಾಡಮಸ್ ನುಡಿದ ಈ ಭಯಾನಕ ಭವಿಷ್ಯವಾಣಿಗಳು!

8 ಗಂಟೆಗಳ ಕಾಲ ನಡೆದ ಹೈ ಡ್ರಾಮಾ

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸುಮಾರು 8 ಗಂಟೆಗಳ ಕಾಲ ಹರಸಾಹಸ ಪಟ್ಟು, ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಹುಲಿಯನ್ನು ಸೆರೆಹಿಡಿದ ನಂತರವಷ್ಟೇ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ದಾಳಿಗೊಳಗಾದ ಗೋಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

A tiger entered a house in Madhya Pradesh, injured a villager, and calmly rested on a cot for hours near Bandhavgarh Tiger Reserve

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here | Click Here

ಗ್ರಾಮಸ್ಥರ ಆತಂಕ

ಬಾಂಧವಗಢ ಟೈಗರ್ (Tiger) ರಿಸರ್ವ್ ಅರಣ್ಯಕ್ಕೆ ಈ ಗ್ರಾಮ ಸಮೀಪ ಇರುವುದರಿಂದ ಆಗಾಗ ವನ್ಯಮೃಗಗಳು ನಾಡಿಗೆ ಬರುತ್ತಲೇ ಇರುತ್ತವೆ. “ನಮ್ಮ ಪ್ರಾಣಕ್ಕೆ ಇಲ್ಲಿ ಗ್ಯಾರಂಟಿಯೇ ಇಲ್ಲದಂತಾಗಿದೆ, ಸರ್ಕಾರ ಶಾಶ್ವತ ಪರಿಹಾರ ನೀಡಬೇಕು” ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular