ಬಾಗೇಪಲ್ಲಿ: ವಾಲ್ಮೀಕಿ ನಿಗಮದಲ್ಲಿ 180 ಕೋಟಿ ರೂ.ಗಳ ಹಗರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಇಡಿ, ಸಿಐಡಿಗೆ ತನಿಖೆಗೆ ವಹಿಸಿದೆ ಸತ್ಯಾ ಸತ್ಯತೆ ಹೊರಬರಲಿ ಕಾನೂನು ಪ್ರಕ್ರಿಯೆ ಮುಗಿದ ಮೇಲೆ ನಮ್ಮ ಸಮುದಾಯಕ್ಕೆ ವಿಶೇಷ ಅನುದಾನ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ವಾಲ್ಮೀಕಿ ಮಹಾ ಸಂಸ್ಥಾನದ ಶ್ರೀ ಶ್ರೀ ಪರಮಪೂಜ್ಯ ಪ್ರಸನ್ನಾನಂದ ಪುರಿ ಸ್ವಾಮಿಜಿ (Valmiki Swamiji) ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಾಗೇಪಲ್ಲಿ ಪಟ್ಟಣದ ಹೊರವಲಯದ ಸೂರ್ಯ ಕನ್ನವೆಕ್ಷನ್ ಹಾಲ್ ನಲ್ಲಿ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ (Valmiki Swamiji) ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 17ನೇ ಪ್ರತಿಭಾ ಪುರಸ್ಕಾರ (Prathiba Puraskara) ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, ಸ್ವಾತಂತ್ಯ್ರ ಬಂದು 75 ವರ್ಷಗಳು ಕಳೆದರೂ ತಳವರ್ಗದವರ, ದಲಿತರ ಶೋಷಿತ, ಪರಿಶಿಷ್ಠರ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಅಲ್ಲದೆ ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಹಿಂದುಳಿದಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಜಾತಿ ವ್ಯವಸ್ಥೆ ಸ್ವಾತಂತ್ಯ್ರ ಪೂರ್ವದಿಂದಲ್ಲೂ ಇದೆ. ವಾಲ್ಮೀಕಿ ಮಹರ್ಷಿಗಳು ಇಡೀ ಜಗತ್ತಿಗೆ ರಾಮಾಯಣವನ್ನು ಪರಿಚಯಿಸಿದರು, ಮಹಾಭಾರತವನ್ನು ಬರೆದವರು ತಳ ಸಮುದಾಯದ ವ್ಯಾಸ ಮಹರ್ಷಿಗಳು, ಡಾ.ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ಬಲಿಷ್ಠವಾದಂತಹ ಸಂವಿಧಾನವನ್ನು ನೀಡಿದವರು ಹಾಗಾಗಿ ಜಾತಿಯ ಕಾರಣಕ್ಕಾಗಿ ಕೀಳರಿಮೆ ಇಟ್ಟುಕೊಳ್ಳುವುದು ಬೇಡ, ದೇಶದಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಸಮಾಜದಿಂದ ತೊಲಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದ ಅವರು ಶೈಕ್ಷಣಿಕವಾಗಿ ಅಭಿವೃದ್ದಿಯಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ದಿ ಹೊಂದಲು ಸಾಧ್ಯ (Valmiki Swamiji) ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿ ಬಹುತೇಕ ರಾಜಕಾರಣಿಗಳಿಗೆ ನಮ್ಮ ಸಮುದಾಯದ ಮತಗಳ ಅಗತ್ಯವಿರುತ್ತೆ ಅಧಿಕಾರಕ್ಕೆ ಬಂದ ನಂತರ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಮರೆತುಹೋಗುತ್ತಾರೆ ಎಂದ ಅವರು (Valmiki Swamiji) ವಾಲ್ಮೀಕಿ ಸಮುದಾಯದವರ ಮಕ್ಕಳ ಶೈಕ್ಷಣಿಕ ಹಾಗೂ ಸರ್ಕಾರಿ ನೌಕರರ ಬಡ್ತಿ ವಿಚಾರದಲ್ಲಿ ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ 1 ವರ್ಷಗಳ ಕಾಲ ಹೋರಾಟ ನಡೆಸಿದ ಫಲವಾಗಿ ಮೀಸಲಾಗಿ ನೀಡುವ ಭರವಸೆ ಸರ್ಕಾರದಿಂದ ಸಿಕ್ಕಿದೆ. ಸಾಮಾಜಿಕ ನ್ಯಾಯ, ನಮ್ಮ ಹಕ್ಕುಗಳಿಗೆ ನ್ಯಾಯ ಸಿಗದಿದ್ದರೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಸಮುದಾಯದ ಅಭಿವೃದ್ದಿ ಶಿಕ್ಷಣವೊಂದೇ ಮುಖ್ಯ ಅಸ್ತ್ರ. ಜೀವನದಲ್ಲಿ ಸಾಧಿಸಬೇಕು ಎಂಬ ಛಲ ಮತ್ತು ಹಠ ಇದ್ದಾಗ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ. ಎಂದ ಅವರು ಪ್ರಸನಾನಂದ ಸ್ವಾಮಿಜಿ ರವರು ಸಮುದಾಯದ ಮಕ್ಕಳ ಶೈಕ್ಞಣಿ ಅಭಿವೃದ್ದಿ ಹಾಗೂ ಸಮುದಾಯದ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಮೀಸಲಾತಿಗಾಗಿ ಸರ್ಕಾರದ ವಿರುದ್ದ ಹೋರಾಟ ನಡೆಸಿ ಶ್ರಮಿಸುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಅಗ್ನಿಶಾಮಿಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರೀಕ್ಷಕ ರವಿ.ಡಿ.ಚೆನ್ನಣ್ಣನವರ್ ಮಾತನಾಡಿ, (Valmiki Swamiji) ನಮ್ಮ ಸಮುದಾಯದ ಗತ ಇತಿಹಾಸ, ಪರಂಪರೆಯನ್ನೇ ಹೇಳಕೊಂಡು ವರ್ತಮಾನವನ್ನು ಅಸಡ್ಯೆ ಮಾಡಿದರೆ ನಮ್ಮ ಭವಿಷ್ಯತ್ತು ಕತ್ತಲೆಗೆ ದೂಡಿದಂತಾಗುತ್ತೆ. ಇತಿಹಾಸ ಸೃಷ್ಠಿಸುವವನು ಇತಿಹಾಸ ಮರೆಯಲಾರ, ನಮ್ಮ ಸಮಸ್ಯೆಗಳಿಗೆ ನ್ಯಾಯಾ ಸಿಗದಿದ್ದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯ. ಉನ್ನತ ಹುದ್ದೆಗಳಲ್ಲಿರುವ ಸಮುದಾಯದವರು ಇದೇ ಸಮುದಾಯಕ್ಕೆ (Valmiki Swamiji) ಸೇರಿದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಹಾಗೂ ಸಮುದಾಯದ ಅಭಿವೃದ್ದಿಗೆ ಕೈಜೋಡಿಸಿದಾಗ ಮಾತ್ರ ಸಮುದಾಯ ಉದ್ದಾರವಾಗಲು ಸಾದ್ಯ. ಆದರೆ ನಾನು ಉದ್ದಾರವಾದರೆ ಸಾಕು ಎಂದು ಕೊಂಡರೆ ಇಡೀ ಸಮುದಾಯಕ್ಕೆ ಅಂತಹವರು ಭಸ್ಮಾಸುರಾಗುತ್ತಾರೆ ವಿನಃ ಕಲ್ಪವೃಕ್ಷವಾಗಲು ಸಾಧ್ಯವಾಗಲ್ಲ ಎಂದು ಸಮುದಾಯದವರಿಗೆ ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ ಸಮುದಾಯದ ಮುಖಂಡರು (Valmiki Swamiji) ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ಮೆರವಣಿಗೆ ನಡೆಸಿದರು. ನಂತರ ವೇಧಿಕೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯು ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.
ಈ ಕಾಯಕ್ರಮದಲ್ಲಿ ನಿವೃತ್ತ ಸತ್ರ ನ್ಯಾಯಾಧೀಶ ಪಾಟಿಲ್ ನಾಗಲಿಂಗನ ಗೌಡ, ಜಿ.ಪಂ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ಜಿ.ಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ತಾ.ಪಂ ಸ್ಥಾಯಿ ಸಮಿತಿ ಸದಸ್ಯ ಮಂಜುನಾಥ್, ಪಶಸಂಗೋಪನ ನಿವೃತ್ತ ನಿರ್ದೇಶಕ ಶಿವರಾಂ, ವಾಲ್ಮೀಕಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ನಂಜುಂಡಪ್ಪ, ಉಪಾಧ್ಯಕ್ಷ ಹೆಚ್.ಎನ್.ನರಸಿಂಹಯ್ಯ, ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಶಿವಪ್ಪ, ಶರಣಪ್ಪ, ಸಹಕಾರ್ಯದರ್ಶಿ ಎನ್.ಸುಧಾಕರ್, ವಾಲ್ಮೀಕಿ ಸಂಘದ ಅಧ್ಯಕ್ಷ ಮರಿಯಪ್ಪ ಮತ್ತಿತರರು ಇದ್ದರು.