ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರವರ ಸ್ವ ಗ್ರಾಮದಲ್ಲಿ ನಡೆದಿದೆ.
ಪೆರೇಸಂದ್ರ ಗ್ರಾಮದ ಗರ್ಭಿಣಿ ಮಹಿಳೆ ಹೆರಿಗೆಗೆ ಎಂದು ಪೆರೇಸಂದ್ರ 24×7 ಸರ್ಕಾರಿ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ 7 ಗಂಟೆಗೆ ದಾಖಲಾಗಿದ್ದಾರೆ. ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ನಾರ್ಮಲ್ ಆಗುತ್ತದೆ ಎಂದು ಮಧ್ಯಾಹ್ನ 12 ರ ವರೆಗೆ ಆಸ್ಪತ್ರೆಯಲ್ಲಿ ಇರಿಸಿಕೊಂಡು ಇದ್ದಾರೆ. ಪರಿಸ್ಥಿತಿ ಚಿಂತನಾ ಜನಕ ವಾದಾಗ ಸಿರಿಯಸ್ ಇದೆ ಬೇಗ ಚಿಕ್ಕಬಳ್ಳಾಪುರ ಕ್ಕೆ ರೆಫರ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪರೀಕ್ಷೆ ಮಾಡಿದ ನಂತರ ಮಗು ಹೊಟ್ಟೆಯಲ್ಲಿ ಸಾವು ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಗುವನ್ನು ಸಿಸರಿನ್ ಮಾಡಿ ಮಗು ಹೊರ ತೆಗೆದು ಮಗುವನ್ನು ಬೇಗ ಮಣ್ಣು ಮಾಡಿಬಿಡಿ ಎಂದು ಪೋಷಕರಿಗೆ ತಿಳಿಸಿದ್ದಾರೆ ಅದರಂತೆ ಅವರು ಹೆಣ್ಣು ಮಗುವನ್ನು ರಾತ್ರಿ ಮಣ್ಣು ಮಾಡಿದ್ದಾರೆ. ಮಾಜಿ ಆರೋಗ್ಯ ಸಚಿವರು, ಹಾಲಿ ಶಾಸಕರು, ಗಟಾನು ಗಟಿ ರಾಜಕೀಯ ನಾಯಕರು ಇರುವ ಪೆರೇಸಂದ್ರ ದಲ್ಲಿ ಸೂಕ್ತ ಆರೋಗ್ಯ ಸೇವೆ ಇಲ್ಲದೆ ಇರುವುದು ಶೋಚನೀಯವಾದ ಸಂಗತಿ ಎನ್ನಲಾಗಿದೆ
ಪೆರೇಸಂದ್ರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ ಭೇಟಿ ನೀಡಿ. ಈ ಬಗ್ಗೆ ತನಿಖೆ ಮಾಡಲಾಗುದು. ತನಿಖೆ ವರದಿ ಬಂದ ನಂತರ ತಪ್ಪು ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ ಎಂದರು.