Sunday, October 26, 2025
HomeStateಅದು ರೇವ್ ಪಾರ್ಟಿಯಲ್ಲ, ಬರ್ತ್ಡೇ ಪಾರ್ಟಿ, ನಾನು ಹೋಗಿದ್ದೆ ಎಂದ ತೆಲುಗು ನಟಿ ಆಶಿ ರಾಯ್…..!

ಅದು ರೇವ್ ಪಾರ್ಟಿಯಲ್ಲ, ಬರ್ತ್ಡೇ ಪಾರ್ಟಿ, ನಾನು ಹೋಗಿದ್ದೆ ಎಂದ ತೆಲುಗು ನಟಿ ಆಶಿ ರಾಯ್…..!

ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿ ಭಾಗಿಯಾದವರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳನ್ನು ಬಳಸಿ ಮೋಜು ಮಸ್ತಿ ಮಾಡಿದವರು ಮುಖ ಮುಚ್ಚಿಕೊಂಡು ಕ್ಯಾಮೆರಾ ಕಣ್ಣುಗಳಿಗೆ ಬೀಳದಂತೆ ಓಡಿದ್ದಾರೆ. ಜೊತೆಗೆ ಪಾರ್ಟಿಯಲ್ಲಿ ನಟ-ನಟಿಯರು, ಮಾಡೆಲ್ ಗಳು, ಆರ್‍.ಜೆಗಳು ಸೇರಿದಂತೆ ಹಲವು ಗಣ್ಯರು ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಪಾರ್ಟಿಯಲ್ಲಿ ಭಾಗಿಯಾದವರು ಹೆಸರುಗಳು ಒಂದೊಂದಾಗಿ ಹೊರಬರುತ್ತಿದೆ. ಈ ಸಾಲಿಗೆ ಇದೀಗ ಮತ್ತೋರ್ವ ತೆಲುಗು ನಟಿ ಆಶಿರಾಯ್ ಹೆಸರು ಕೇಳಿಬರುತ್ತಿದೆ. ಅದಕ್ಕೆ ಆಕೆ ಸ್ಪಷ್ಟನೆ ಸಹ ನೀಡಿದ್ದಾರೆ.

Aashi roy comments about rave party

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ನಡೆದಂತಹ ರೇವ್ ಪಾರ್ಟಿಯಲ್ಲಿ ಸಿನಿರಂಗದ ನಟ-ನಟಿಯರು ಸೇರಿದಂತೆ  ಮಾಡಲ್ ಗಳು, ರಾಜಕಾರಣಿಗಳು ಸಹ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಪಾರ್ಟಿಯ ಮೇಲೆ ಧಾಳಿ ಮಾಡಿದ ಪೊಲೀಸರು ಮಾದಕ ವಸ್ತುಗಳನ್ನು ಸಹ ವಶಪಡಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಹೆಸರುಗಳು ಒಂದೊಂದಾಗಿ ಹೊರಬರುತ್ತಿದೆ. ಮೊದಲಿಗೆ ತೆಲುಗು ನಟಿ ಹೇಮಾ ರವರ ಹೆಸರು ಕೇಳಿಬಂತು. ಬಳಿಕ ಆಕೆ ನಾನು ಹೈದರಾಬಾದ್ ನಲ್ಲಿ ಇದ್ದೀನಿ ಅಂತಾ ಸುಳ್ಳು ವಿಡಿಯೋ ಪೋಸ್ಟ್ ಮಾಡಿದ್ದು, ಬಳಿಕ ಪೊಲೀಸರು ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರೋದು ನಿಜ ಎಂದು ಹೇಳಿದ್ದು ಆಯ್ತು. ಇದೀಗ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ.

Aashi roy comments about rave party 2

ಇನ್ನೂ ಈ ಪಾರ್ಟಿಗೆ ಸನ್ ಸೆಟ್ ಟು ಸನ್ ರೈಸ್ ಎಂದು ಹೆಸರಿಡಲಾಗಿತ್ತು. ಹುಟ್ಟುಹಬ್ಬದ ಹೆಸರಿನಲ್ಲಿ ಈ ರೇವ್ ಪಾರ್ಟಿ ನಡೆದಿದೆ ಎನ್ನಲಾಗಿದ್ದು, ಈ ಪಾರ್ಟಿಯಲ್ಲಿ ತೆಲುಗು ನಟಿಯರೂ ಸಹ ಭಾಗಿಯಾಗಿದ್ದರು ಎನ್ನಲಾಗಿದೆ. ತೆಲುಗು ಸಿನಿರಂಗದ ಪೋಷಕ ನಟಿ ಹೇಮಾ ಸಹ ರೇವ್ ಪಾರ್ಟಿಯಲ್ಲಿ ಇದ್ದಿದ್ದಾಗಿ ಪೊಲೀಸ್ ಕಮಿಷನರ್‍ ದೃಢಪಡಿಸಿದ್ದರು. ಇದೀಗ ಮತ್ತೋರ್ವ ತೆಲುಗು ನಟಿ ಆಶಿ ರಾಯ್ (Aashi Roy) ಹೆಸರು ಸಹ ಕೇಳಿಬಂದಿದ್ದು, ಈ ಕುರಿತು ನಟಿ ಆಶಿರಾಯ್ ಸ್ಪಷ್ಟನೆ ನೀಡಿದ್ದಾರೆ. ನಾನು ಸಹ ರೇವ್ ಪಾರ್ಟಿಯಲ್ಲಿದ್ದೆ. ಆದರೆ ಅದು ರೇವ್ ಪಾರ್ಟಿಯಲ್ಲ, ಒಂದು ಬರ್ತ್ ಡೇ ಪಾರ್ಟಿಯಾಗಿತ್ತು. ಅದು ಬರ್ತ್ ಡೇ ಪಾರ್ಟಿ ಅಂತಾನೆ ನಾನು ಹೋಗಿದ್ದೆ. ಒಳಗೆ ಏನೇನು ನಡೆಯುತ್ತಿತ್ತು ಅಂತಾ ನನಗೂ ಗೊತ್ತಿರಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ದಯವಿಟ್ಟು ಎಲ್ಲರೂ ನನ್ನನ್ನು ನಂಬಿ, ನಾನು ಸಿನೆಮಾ ರಂಗದಲ್ಲಿ ತುಂಬಾ ಕಷ್ಟಪಟ್ಟು ಬೆಳೆದಿದ್ದೇನೆ. ದಯವಿಟ್ಟು ನನ್ನನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular