Student Death – ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಯೋರ್ವ ಪಾಠದ ನಡುವೆಯೇ ತರಗತಿಯಿಂದ ಹೊರಬಂದು 3ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಪಕ್ಕದ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಾರಾಯಣ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿಯೊಬ್ಬ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಈ ಘಟನೆಯ ಆಘಾತಕಾರಿ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಅನಂತಪುರದ ನಾರಾಯಣ ಕಾಲೇಜಿನ ವಿದ್ಯಾರ್ಥಿ ಜ.23 ರಂದು ಬೆಳಗ್ಗೆ 10:15 ಕ್ಕೆ ತನ್ನ ಚಪ್ಪಲಿಗಳನ್ನು ತೆಗೆದು ತರಗತಿಯಿಂದ ಹೊರಬಂದ. ನೇರವಾಗಿ ಕಟ್ಟೆಯ ಬಳಿಗೆ ನಡೆದು, ಅದನ್ನು ಹತ್ತಿ ಹಠಾತ್ ಜಿಗಿದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಂತೆ ಮೃತ ವಿದ್ಯಾರ್ಥಿ ಸಹ ಪಾಠ ಕೇಳುತ್ತಾ ಕುಳಿತಿದ್ದ. ಆದರೆ ದಿಢೀರ್ ಹೊರಬಂದ ವಿದ್ಯಾರ್ಥಿ ಕಾಲೇಜಿನ 3ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಕ್ರಾಂತಿ ರಜೆ ಮುಗಿಸಿಕೊಂಡು ವಿದ್ಯಾರ್ಥಿ ಕಾಲೇಜಿನ 3 ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇದೀಗ ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತರಗತಿ ನಡೆಯುತ್ತಿರುವಾಗ ಹುಡುಗ ಕೊಠಡಿಯಿಂದ ಹೊರಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದು. ಅವನು ಜಿಗಿದ ನಂತರ, ಸಹಪಾಠಿಗಳು ಏನಾಯಿತು ಎಂದು ನೋಡಲು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಇನ್ನೂ ವಿದ್ಯಾರ್ಥಿಯ ಈ ಸಾವಿನ ಹಿಂದಿನ ಕಾರಣ ಏನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿದ್ಯಾರ್ಥಿಯ ಸಾವಿಗೆ ಕಾಲೇಜಿನ ಆಡಳಿತ ಮಂಡಳಿಯೇ ನೇರ ಹೊಣೆ ಎಂದು, ಘಟನೆಯ ಸತ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ, ವಿದ್ಯಾರ್ಥಿಯ ರಕ್ತದ ಕಲೆಗಳನ್ನು ತೊಳೆಯಲು ಸಹ ಕಾಲೇಜಿನವರು ಮುಂದಾಗಿದ್ದರು ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕರು ಆರೋಫ ಮಾಡಿದ್ದಾರೆ. ಈ ಕುರಿತು ತನಿಖೆ ಸಹ ಆರಂಭವಾಗಿದ್ದು, ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣ ಇನ್ನಷ್ಟೆ ಹೊರಬರಬೇಕಿದೆ.