ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಮುಡಾ ಹಗರಣದ (MUDA Scam) ಸಂಬಂಧ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈಗಾಗಲೇ ಹಲವು ನಾಯಕರು ತಾವು ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ರಾಜ್ಯದಲ್ಲಿ ದೀಪಾವಳಿ ಹಬ್ಬದೊಳಗೆ ಕಾಂಗ್ರೇಸ್ ಸರ್ಕಾರ ಢಮಾರ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದೆ. ಮುಡಾ ಸೈಟು ಹಂಚಿಕೆಯಲ್ಲಿ ಹಗರಣ ನಡೆದಿದೆ, ಸಿಎಂ ಸಿದ್ದರಾಮಯ್ಯನವರ ವಿರುದ್ದ ತನಿಖೆ ನಡೆಯಬೇಕೆಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಕೆಯಾಗಿತ್ತು. ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಈ ಸಂಬಂಧ ಸಿದ್ದರಾಮಯ್ಯಪರ ಕೋರ್ಟ್‌ನಲ್ಲಿ ಪ್ರಕರಣ ಸಹ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಸೆ.12ಕ್ಕೆ ಸದ್ಯ ಮುಂಡೂಡಲಾಗಿದೆ. ಇದೀಗ ಮಾದ್ಯಮಗಳೊಂದಿಗೆ ಮಾತನಾಡಿದ (C T Ravi) ಸಿ.ಟಿ. ರವಿ ದೀಪಾವಳಿ ಹಬ್ಬದೊಳಗೆ ಕಾಂಗ್ರೇಸ್ ಸರ್ಕಾರ ಢಮಾರ್ ಎಂದು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಸಿ.ಟಿ.ರವಿ (C T Ravi) ಮಾತನಾಡಿ, ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ಈಗ ಟೈಂ ಬಾಂಬ್ ಫಿಕ್ಸ್ ಮಾಡಿದೆ. ಸಿದ್ದರಾಮಯ್ಯ ಜೊತೆಗೆ ಬಂಡೆಯಂತೆ ಇರುತ್ತೇನೆ ಎನ್ನುತ್ತಿರುವವರೇ ಡೇಂಜರ್. ಡಿ.ಕೆ.ಶಿವಕುಮಾರ್ (D K Shivakumar) ಒಂದು ಬಾಂಬ್, ಪ್ರಿಯಾಂಕಾ ಖರ್ಗೆ (Priyanka Kharge), ಎಂ.ಬಿ.ಪಾಟೀಲ್ (M B Patil) ಯಾವ ಯಾವ ಬಾಂಬ್ ಇಟ್ಟಿದ್ದಾರೆ ಎಂಬುದನ್ನು ಅವರಿಗೆ ಕೇಳಬೇಕು. ಕಾಂಗ್ರೇಸ್ ಪಕ್ಷದ ಶಾಸಕರು, ಸಚಿವರು ಹಾಗೂ ಮುಖಂಡರು ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ದತೆಗಳನ್ನು ನಡೆಸಿದ್ದಾರೆ. (C T Ravi)ಅದಕ್ಕಾಗಿ ಸಮಯವನ್ನೂ ನಿಗದಿಪಡಿಸಿದ್ದಾರೆ. ಆದ್ದರಿಂದಲೇ ತಾವೂ ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹಲವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸರ್ಕಾರ 100% ಭ್ರಷ್ಟಾಚಾರ ಸರ್ಕಾರ ಎಂದು ಗುಡುಗಿದರು.