Social Media Love: ಇಂದಿನ ತಂತ್ರಜ್ಞಾನದ ಯುಗದಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಪಾತ್ರ ವಹಿಸುತ್ತದೆ. ಸ್ಮಾರ್ಟ್ ಪೋನ್ ಹೊಂದಿರುವ ಶೇ.99 ರಷ್ಟು ಮಂದಿ ಸೋಷಿಯಲ್ ಮಿಡಿಯಾ ಖಾತೆಗಳನ್ನು ಬಳಸುತ್ತಾರೆ. ಅದರಲ್ಲಿ ಇನ್ಸ್ಟಾಗ್ರಾಂ ತುಂಬಾನೆ ಪಾಪ್ಯುಲರ್ ಎಂದೇ ಹೇಳಬಹುದು. ಇದೀಗ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿದ (Social Media Love) ಯುವತಿಯೊಬ್ಬಳು, ಆತನಿಗೆ ಮದುವೆಯಾಗಿದೆ ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಇಂದಿನ ಜನರು ಸೋಷಿಯಲ್ ಮಿಡಿಯಾಗೆ ತುಂಬಾನೆ ಸಮಯ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾದ ಅನೇಕರು ಮದುವೆ ಮಾಡಿಕೊಂಡಿದ್ದಾರೆ, ಕೆಲವರು ಮೋಸ ಹೋಗಿದ್ದಾರೆ. ಈ ಕುರಿತು ಅನೇಕರು ಎಚ್ಚರಿಕೆಗಳನ್ನು ಸಹ ನೀಡುತ್ತಿದ್ದಾರೆ. ಆದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಕೆಲವರನ್ನು ಪ್ರೀತಿಸಿ ಮೋಸ ಹೋಗುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ನಡೆದಿದೆ. ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನಿಗೆ ಮದುವೆಯಾಗಿದ್ದು, ಅದನ್ನು ಇನ್ಸ್ಟಾಗ್ರಾಂ ನಲ್ಲಿ ನೋಡಿದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಋಎ. ತಮಿಳುನಾಡು ತೇನಾಂಪೇಟದ ಎಂಜಿಆರ್ ನಗರದ 22 ವಯಸ್ಸಿನ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಸೋಮವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತ ದುರ್ದೈವಿಯನ್ನು ಎಸ್.ಅನಿತಾ ಎಂದು ಗುರ್ತಿಸಲಾಗಿದೆ. ಆಕೆ ಕೆ.ಕೆ. ನಗರದಲ್ಲಿರುವ ಆಯಿಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಕಳೆದ ಸೋಮವಾರ ಮೃತ ಅನಿತಾ ಸಹೋದರ ಊಟಕ್ಕೆ ಬಂದಿದ್ದಾನೆ. ಅವರ ತಾಯಿ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದರಂತೆ. ಅನಿತಾ ಊಟ ಇಡು ಬಾ ಎಂದು ಅನೇಕ ಬಾರಿ ಕರೆದನಂತೆ, ಎಷ್ಟು ಬಾರಿ ಕರೆದರೂ ಅನಿತಾ ಪ್ರತಿಕ್ರಿಯೆ ನೀಡದ ಕಾರಣ ಕಿಟಕಿಯಲ್ಲಿ ನೋಡಿದ್ದಾನೆ. ಈ ವೇಳೆ ಶವವಾಗಿ ಪತ್ತೆಯಾಗಿದ್ದಾಳೆ. ಬಳಿಕ ಅಕ್ಕಪಕ್ಕದವರ ಸಹಾಯದೊಂದಿಗೆ ಬಾಗಿಲು ಮುರಿದು ಒಳಗೆ ಹೋಗಿ ಅನಿತ ಮೃತದೇಹವನ್ನು ಹೊರತಂದಿದ್ದಾರೆ. ಮೃತ ಅನಿತಾ ಸೈದಾ ಪೇಟ ವ್ಯಾಪ್ತಿಯ ಆಕಾಶ್ ಎಂಬಾತನೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸ್ನೇಹ ಬೆಳೆಸಿಕೊಂಡಿದ್ದು, ಬಳಿಕ ಪ್ರೀತಿಸಲು ಶುರು ಮಾಡಿದ್ದಾಳಂತೆ. ಇನ್ನೂ ಆಕಾಶ್ ಗೆ ಮದುವೆಯಾಗಿದೆ ಎಂದು ತಿಳಿದ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಈ ಸಂಬಂಧ ಮೃತಳ ತಾಯಿ ಪಾರ್ವತಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.