ದೇಶದ ಚಿತ್ತ ನಾಳಿನ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಎಂದು ಹೇಳಲಾಗುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆ 2024ರ ಚುನಾವಣೆಯ ಎಕ್ಸಿಟ್ ಪೋಲ್ ಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಬಹುತೇಕ ಸರ್ವೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ರಿಯಾಕ್ಟ್ ಆಗಿದ್ದು, ಈ ಬಾರಿ ನಾವು ಕರ್ನಾಟಕದಲ್ಲಿ 15-20 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಎಕ್ಸಿಟ್ ಪೋಲ್ ಮೋದಿ ಮಾದ್ಯಮ ಮಾಡಿದಂತಹ ಸಮೀಕ್ಷೆಯಾಗಿದೆ. ಈಗಾಗಲೇ ಇದನ್ನು ರಾಹುಲ್ ಗಾಂಧಿಯವರೂ ಹೇಳಿದ್ದಾರೆ. ನಾವು ರಾಜ್ಯದಲ್ಲಿ 15-20 ಸ್ಥಾನಗಳನ್ನು ಗೆಲ್ಲುತ್ತೇವೆ. ಜೊತೆಗೆ ಇಂಡಿಯಾ ಒಕ್ಕೂಟ 295 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಲ್ಲಿಕಾರ್ಜುನ್ ರವರೂ ಸಹ ಹೇಳಿದ್ದಾರೆ. ನಾನೂ ಹೇಳಿದ್ದಿನಿ ನಾವು 15 ಸ್ಥಾನಗಳನ್ನು ಗೆಲ್ತೀವಿ ಎಂದರು. ಎಲ್ಲಾ ಎಕ್ಸಿಟ್ ಪೋಲ್ ನಂತೆ ಫಲಿತಾಂಶ ಬರೊಲ್ಲ ಎಲ್ಲವೂ ಮೋದಿ ಮಾದ್ಯಮದ ಸೃಷ್ಟಿ ಎಂದು ಹೇಳಿದರು.
ಪೋಸ್ಟ್ ನೋಡಲು ಈ ಲಿಂಕ್ ಒಪೆನ್ ಮಾಡಿ https://x.com/siddaramaiah/status/1797554861162291657
ಇನ್ನೂ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ರೈತರು ಬಿತ್ತನೆ ಮಾಡಲು ಮುಂದಾಗಿದ್ದಾರೆ. ಮಳೆ ಜಾಸ್ತಿಯಾಗಿ ಕೆಲವು ಕಡೆ ಮರಗಳು ಬಿದ್ದಿವೆ. ನಗರದಲ್ಲಿ ಗುಂಡಿಗಳನ್ನು ಮುಚ್ಚಲು ಆದೇಶ ಮಾಡಿದ್ದೇನೆ. ಜೊತೆಗೆ ಅಧಿಕಾರಗಳ ಸಭೆ ನಡೆಸಿ, ಬಳಿಕ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ನಿರ್ಧಾರ ಮಾಡುತ್ತೇನೆ. ಇನ್ನೂ ಇದೇ ಸಮಯದಲ್ಲಿ ನಾಗೇಂದ್ರ ರಾಜಿನಾಮೆ ಬಗ್ಗೆ ಸಹ ರಿಯಾಕ್ಟ್ ಆಗಿದ್ದಾರೆ. ನಾನು ನಾಗೇಂದ್ರ ರಾಜೀನಾಮೆ ಕೇಳಿಲ್ಲ. ರಿಪೋರ್ಟ್ ಬರಬೇಕು, ಎಸ್.ಐ.ಟಿ ರಚನೆಯಾಗಿ ಎರಡು ದಿನಗಳಾಗಿವೆ. ರಿಪೋರ್ಟ್ ಬಂದ ಮೇಲೆ ಈ ಕುರಿತು ನೋಡೊಣ ಎಂದು ಹೇಳಿದರು.