Shocking News- ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿರುವ ವಸ್ತುಗಳನ್ನು ನೋಡಿ ವೈದ್ಯರೇ ಶಾಕ್ ಆಗಿದ್ದರು. ಹೊಟ್ಟೆಯಲ್ಲಿ ಬ್ಯಾಟರಿಗಳು, ರೇಜರ್ ಬ್ಲೇಡ್ ಗಳು ಸೇರಿದಂತೆ ಹಲವು ವಸ್ತುಗಳು ಕಂಡುಬಂದಿದೆ. ಕೂಡಲೇ ಬಾಲಕನಿಗೆ ಸರ್ಜರಿ ಮಾಡಿಸಲು ತಿಳಿಸಿದ್ದು, ಅದರಂತೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಪರೇಷನ್ ಏನೋ ಸಕ್ಸಸ್ ಆಗಿದೆ ಆದರೆ ಬಾಲಕ ಮೃತಪಟ್ಟಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಎನ್ನಲಾಗಿದೆ.
ಉತ್ತರ ಪ್ರದೇಶದ ಹತ್ರಾಸ್ ನ ಆದಿತ್ಯ ಶರ್ಮಾ (14) ಎಂಬ ಬಾಲಕ ತೀವ್ರತರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಅವರ ತಂದೆ ತಾಯಿಯವರು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಈ ವೇಳೆ ಅಲ್ಲಿನ ವೈದ್ಯರು ಬಾಲಕನ ಹೊಟ್ಟೆ ನೋವಿಗೆ ಕಾರಣವಾದರೂ ಏನು ಎಂಬುದನ್ನು ತಿಳಿಯಲು ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಆತನ ಹೊಟ್ಟೆಯಲ್ಲಿ ವಿವಿಧ ರೀತಿಯ ವಸ್ತುಗಳು ಕಾಣಿಸಿದೆ. ಚೈನ್ ಗಳು, ಬ್ಯಾಟರಿಗಳು, ರೇಜರ್ ಬ್ಲೇಡ್ ಗಳು, ಮೊಳೆಗಳು ಆತನ ಹೊಟ್ಟೆಯಲ್ಲಿವೆ. ಈ ಕಾರಣದಿಂದ ಅಲ್ಲಿನ ವೈದ್ಯರು ನೋಯ್ಡಾದಲ್ಲಿನ ಒಂದು ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.
ಇನ್ನೂ ಬಾಲಕನ ಪರಿಸ್ಥಿತಿ ಮತಷ್ಟು ಕಠಿಣವಾಗಿ ಬದಲಾಗಿದ್ದು, ಸರ್ಜರಿ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದೇ ದಿನ ನೋಯ್ಡಾದ ವೈದ್ಯರು ಬಾಲಕನಿಗೆ ಆಪರೇಷನ್ ಮಾಡಿದ್ದಾರೆ. ಸುಮಾರು 6 ಗಂಟೆಗಳ ಕಾಲ ಆಪರೇಷನ್ ಮಾಡಿ, ಬಾಲಕನ ಹೊಟ್ಟೆಯಲ್ಲಿದ್ದ ಬ್ಯಾಟರಿಗಳು, ಬ್ಲೇಡುಗಳು, ಸ್ಕ್ರೂಗಳಂತಹ 65 ವಸ್ತುಗಳನ್ನು ಹೊರ ತೆಗೆದಿದ್ದಾರೆ. ತುಂಬಾ ಕಠಿಣವಾದ ಶಸ್ತ್ರ ಚಿಕಿತ್ಸೆ ನಡೆದರೂ ಸಹ ಬಾಲಕ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಕಳೆದ ತಿಂಗಳ 28 ರಂದು ಈ ಘಟನೆ ನಡೆದಿದ್ದು, ಹೊಟ್ಟೆಯಲ್ಲಿನ ವಸ್ತುಗಳ ಕಾರಣದಿಂದ ಇನ್ಫೆಕ್ಷನ್ ಆಗಿ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.