ಎಂ.ಎಲ್.ಸಿ ಸೂರಜ್ ರೇಔಣ್ಣ ರವರ ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಸೂರಜ್ ರನ್ನು ಬಂಧನ ಮಾಡಿದ್ದು, ಆತನನ್ನು ನ್ಯಾಯಾಲಯ ಇದೀಗ 8 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ನಿನ್ನೆ ಅಂದರೇ ಭಾನುವಾರ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಸೂರಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಂದು ಸೂರಜ್ ರೇವಣ್ಣವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ಸಮಯದಲ್ಲಿ ವಕೀಲರು ಸೂರಜ್ ರೇವಣ್ಣರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ಆಲಿಸಿದ ಬಳಿಕ ನ್ಯಾಯಾಧೀಶರು 8 ದಿನಗಳ ಕಾಲ ಸೂರಜ್ ರವರನ್ನು ಪೊಲೀಸ್ ಕಸ್ಟಡಿಗೆ ನೀಡಿದರು. ಜು.1 ಸಂಜೆ 4 ಗಂಟೆಗೆ ಸೂರಜ್ ರೇವಣ್ಣ ರನ್ನು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಾಧೀಶರು ಸಿಐಡಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸೂರಜ್ ರೇವಣ್ಣ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಶನಿವಾರ ಸಂಝೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರನ್ನು ವಶಕ್ಕೆ ಪಡೆದು ಮುಂಜಾನೆವರೆಗೂ ಪೊಲೀಸರು ಸುದೀರ್ಘ ವಿಚಾರಣೆಗೆ ಒಪಡಿಸಿದ್ದರು. ಭಾನುವಾರ ಸೂರಜ್ ರವರನ್ನುಅಧಿಕೃತವಾಗಿ ಬಂಧಿಸಿದ್ದರು.
ಇನ್ನೂ ಸೂರಜ್ ರೇವಣ್ಣ ಪ್ರಕರಣ ಅವರ ಆಪ್ತನಿಂದಲೇ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಅಸಲಿಗೆ ದೂರು ಕೊಟ್ಟ ಶಿವಕುಮಾರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸೂರಜ್ ಜೊತೆಗೆ ಇದ್ದು, ಖೆದ್ದಾ ತೋಡಿದ್ನಾ ಎಂಬ ಪ್ರಶ್ನೆ ಉದ್ಬವಿಸಿದೆ. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಸೂರಜ್ ರವರನ್ನು ಖೆದ್ದಾ ಕೆಡವಲಾಗಿದೆಯೇ ಎಂಬ ಶಂಖೆ ಸಹ ವ್ಯಕ್ತವಾಗಿದೆ. ಈ ನಡುವೆ ದೂರು ಕೊಟ್ಟಿದ್ದ ಶಿವಕುಮಾರ್ ವಿರುದ್ದ ಸಹ ಸಂತ್ರಸ್ತ ದೂರು ಕೊಟ್ಟಿದ್ದಾನೆ. ನನಗಾಗ ಲೈಂಗಿಕ ದೌರ್ಜನ್ಯದ ಬಗ್ಗೆ ಶಿವಕುಮಾರ್ ಗೆ ಹೇಳಿದ್ದೆ. ದೈಹಿಕ ಹಿಂಸೆ ಆಗಿದ್ರೂ ಆತ ಆಸ್ಪತ್ರೆಗೆ ಹೋಗೋಕೆ ಬಿಟ್ಟಿರಲಿಲ್ಲ, ಶಿವಕುಮಾರ್ ನನನ್ನು ಲಾಡ್ಜ್ ನಲ್ಲಿ ಕೂಡಿ ಹಾಕಿದ್ದ ಎಂದು ಸಂತ್ರಸ್ತ ಆರೋಪಿಸಿದ್ದಾನೆ. ಸಾವಿರ ಹಣ ಪಡೆದು ನನಗೆ ಊಟದ ವ್ಯವಸ್ಥೆ ಮಾಡಿದ್ದ. ಸೂರಜ್ ರೇವಣ್ಣ ಜೊತೆ ನನಗೆ ಪೋನ್ ನಲ್ಲಿ ಮಾತನಾಡಿಸಿದ್ದ, 2 ಕೋಟಿ ಹಣ, ಕೆಲಸ ಕೊಡಿಸುವುದಾಗಿ ಹೇಳಿದ್ದರು. ನಾನು ಒಪ್ಪದೇ ಇದ್ದಾಗ ನೀನು ಯಾರ ಬಳಿಯಾದ್ರು ಬಾಯಿ ಬಿಟ್ಟರೇ ನಿನ್ನನ್ನು ಮುಗಿಸಿಬಿಡುವುದಾಗಿ ಶಿವಕುಮಾರ್ ಕೊಲೆ ಬೆದರಿಕೆ ಹಾಕಿದ್ದ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋದೆ ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ
ಇನ್ನೂ ಸಂತ್ರಸ್ತ ಹಾಗೂ ಸೂರಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಡಿಯೋದಲ್ಲಿ ಸಂತ್ರಸ್ತನಿಗೆ ಸೂರಜ್ ರೇವಣ್ಣ ಹಣ, ಕೆಲಸದ ಆಮಿಷ ಒಡ್ಡಿರುವುದು ಬಯಲಾಗಿದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ರವರ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇದೆ. ಸೂರಜ್ ಪ್ರಕರಣ ಎಲ್ಲಿಯವರೆಗೂ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.