ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಕೋಟ್ಯಂತರ ಗ್ರಾಹಕರಿಗೆ ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ನೀವೇನಾದರೂ ಎಸ್ಬಿಐನಲ್ಲಿ ‘ಬೇಸಿಕ್ ಸೇವಿಂಗ್ಸ್ ಅಕೌಂಟ್’ (SBI New Rules 2026) ಹೊಂದಿದ್ದರೆ, ಅಕ್ಟೋಬರ್ 1, 2026 ರಿಂದ ಜಾರಿಗೆ ಬರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಬ್ಯಾಂಕ್ನಿಂದ ಹಣ ಹಿಂಪಡೆಯುವುದು (Cash Withdrawal) ಹಾಗೂ ಯುಪಿಐನಂತಹ ಡಿಜಿಟಲ್ ಪೇಮೆಂಟ್ ನಿಯಮಗಳಲ್ಲಿ ಬ್ಯಾಂಕ್ ಮಹತ್ವದ ಬದಲಾವಣೆ ಮಾಡಿದೆ. ಈ ಹೊಸ ರೂಲ್ಸ್ ನಿಮ್ಮ ಜೇಬಿಗೆ ಹೇಗೆ ಹೊರೆಯಾಗಬಹುದು ಮತ್ತು ಇದರಿಂದ ಪಾರಾಗುವುದು ಹೇಗೆ ಅನ್ನೋದನ್ನ ನಾವಿಲ್ಲಿ ಸರಳವಾಗಿ ವಿವರಿಸಿದ್ದೇವೆ, ಮುಂದೆ ಓದಿ.
SBI New Rules 2026: ಗ್ರಾಹಕರಿಗೆ ಏನು ಬದಲಾವಣೆ?
ಉಚಿತ ಮಿತಿ ಮೀರಿದರೆ ಬೀಳಲಿದೆ ಚಾರ್ಜ್!
ಹೊಸ ನಿಯಮದ ಪ್ರಕಾರ, ಬಿಎಸ್ಬಿಡಿ (BSBD) ಖಾತೆದಾರರು ತಿಂಗಳಿಗೆ ಕೇವಲ 4 ಬಾರಿ ಮಾತ್ರ ಉಚಿತವಾಗಿ ಹಣವನ್ನು ಹಿಂಪಡೆಯಬಹುದು (Cash Withdrawal). ಈ ಉಚಿತ ಮಿತಿಯನ್ನು ದಾಟಿದ ನಂತರ ನೀವು ಮಾಡುವ ಪ್ರತಿಯೊಂದು ವಿತ್ಡ್ರಾವಲ್ ಮೇಲೂ 15 ರೂ. ಜೊತೆಗೆ ಜಿಎಸ್ಟಿ (GST) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಡಿಜಿಟಲ್ ವಹಿವಾಟುಗಳಿಗೂ ಶುಲ್ಕದ ಬಿಸಿ
ಹಿಂದೆ, ಯುಪಿಐ (UPI) ಅಥವಾ ಆನ್ಲೈನ್ ಪಾವತಿಗಳಂತಹ ಡಿಜಿಟಲ್ ವಹಿವಾಟುಗಳನ್ನು ಈ 4 ಉಚಿತ ಮಿತಿಯಲ್ಲಿ ಲೆಕ್ಕ ಹಾಕುತ್ತಿರಲಿಲ್ಲ. ಅವು ಪ್ರತ್ಯೇಕವಾಗಿ ಉಚಿತವಾಗಿದ್ದವು. ಆದರೆ ಈಗ ಎಸ್ಬಿಐ ಆ ವಿನಾಯಿತಿಯನ್ನು ತೆಗೆದುಹಾಕಿದೆ! ಅಂದರೆ, ನೀವು ಎಟಿಎಂ, ಬ್ಯಾಂಕ್ ಬ್ರಾಂಚ್ ಅಥವಾ ಡಿಜಿಟಲ್ ಮೂಲಕ ಮಾಡುವ ಎಲ್ಲಾ ವಹಿವಾಟುಗಳನ್ನು ಸೇರಿಸಿ ಕೇವಲ 4 ಬಾರಿ ಮಾತ್ರ ಉಚಿತ ಸೇವೆ ಸಿಗಲಿದೆ.

ಏನಿದು ಬಿಎಸ್ಬಿಡಿ (BSBD) ಖಾತೆ?
BSBD ಅಂದರೆ ‘ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್’ (Basic Savings Bank Deposit). ಇದು ಸಮಾಜದ ಬಡ ಮತ್ತು ಕಡಿಮೆ ಆದಾಯ ಹೊಂದಿರುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಕೌಂಟ್. ಯಾವುದೇ ಶುಲ್ಕದ ಹೊರೆಯಿಲ್ಲದೆ ಹಣ ಉಳಿತಾಯ ಮಾಡಲು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ.
ಬಿಎಸ್ಬಿಡಿ ಅಕೌಂಟ್ನ ಪ್ರಮುಖ ಪ್ರಯೋಜನಗಳು
- ಮಿನಿಮಮ್ ಬ್ಯಾಲೆನ್ಸ್ ಬೇಕಿಲ್ಲ: ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳುವ ಯಾವುದೇ ಟೆನ್ಶನ್ ಇಲ್ಲ. ಜೀರೋ ಬ್ಯಾಲೆನ್ಸ್ ಇದ್ದರೂ ದಂಡ ಬೀಳುವುದಿಲ್ಲ.
- ಉಚಿತ ಎಟಿಎಂ ಕಾರ್ಡ್: ಖಾತೆದಾರರಿಗೆ ಬೇಸಿಕ್ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.
- ಹಣ ವಿತ್ಡ್ರಾ ಹೇಗೆ?: ಬ್ಯಾಂಕ್ ಬ್ರಾಂಚ್ಗೆ ಹೋಗಿ ಫಾರ್ಮ್ ತುಂಬಿ ಅಥವಾ ಎಟಿಎಂ ಮೂಲಕ ಸುಲಭವಾಗಿ ಹಣ ಪಡೆಯಬಹುದು.
- ಯಾವುದಕ್ಕೆ ಶುಲ್ಕವಿಲ್ಲ?: NEFT ಅಥವಾ RTGS ನಂತಹ ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಹಣ ಜಮೆಯಾದರೆ ಎಸ್ಬಿಐ ಯಾವುದೇ ಶುಲ್ಕ ಕಡಿತ ಮಾಡುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಚೆಕ್ಗಳನ್ನು ಡೆಪಾಸಿಟ್ ಮಾಡಿದರೂ ಸಂಪೂರ್ಣ ಉಚಿತ.
- ಆಕ್ಟಿವೇಶನ್ ಫ್ರೀ: ಒಂದು ವೇಳೆ ಖಾತೆ ನಿಷ್ಕ್ರಿಯ (Inactive) ಆದರೂ, ಅದನ್ನು ಮತ್ತೆ ಚಾಲು ಮಾಡಲು ದುಡ್ಡು ಕೊಡಬೇಕಿಲ್ಲ.
- ಗಮನಿಸಿ: ಈ ಅಕೌಂಟ್ ಹೊಂದಿರುವವರಿಗೆ ಬ್ಯಾಂಕ್ನಿಂದ ಚೆಕ್ ಬುಕ್ ಸೌಲಭ್ಯ ಸಿಗುವುದಿಲ್ಲ.

ಈ ಎಸ್ಬಿಐ ಅಕೌಂಟ್ ಓಪನ್ ಮಾಡಲು ಕಂಡೀಷನ್ ಏನು?
ನಿಯಮ ಬಹಳ ಸರಳ: ಎಸ್ಬಿಐನಲ್ಲಿ ಬಿಎಸ್ಬಿಡಿ ಖಾತೆ ತೆರೆಯಬೇಕಾದರೆ, ಗ್ರಾಹಕರಿಗೆ ಅದೇ ಬ್ಯಾಂಕ್ನಲ್ಲಿ ಬೇರೆ ಯಾವುದೇ ಸೇವಿಂಗ್ಸ್ ಅಕೌಂಟ್ (ಸಾಮಾನ್ಯ ಉಳಿತಾಯ ಖಾತೆ) ಇರಬಾರದು. ಒಂದು ವೇಳೆ ನಿಮಗೆ ಮೊದಲೇ ಬೇರೆ ಖಾತೆ ಇದ್ದು, ಹೊಸದಾಗಿ BSBD ಖಾತೆ ತೆರೆದರೆ, ಮುಂದಿನ 30 ದಿನಗಳೊಳಗೆ ಆ ಹಳೆಯ ಖಾತೆಯನ್ನು ಮುಚ್ಚುವುದು ಕಡ್ಡಾಯವಾಗಿದೆ. Read this also : ಸಾಲಗಾರ ಮರಣಹೊಂದಿದರೆ ಬ್ಯಾಂಕ್ ಲೋನ್ ಮನ್ನಾ ಆಗುತ್ತಾ? ಉಳಿದ EMI ಕಟ್ಟುವವರು ಯಾರು? ಈ ಸುದ್ದಿ ಓದಿ…!
4 ಉಚಿತ ವಹಿವಾಟುಗಳಲ್ಲಿ ಏನೆಲ್ಲಾ ಕೌಂಟ್ ಆಗುತ್ತವೆ?
ನೆನಪಿರಲಿ, ತಿಂಗಳ 4 ಉಚಿತ ಲಿಮಿಟ್ನಲ್ಲಿ ಈ ಕೆಳಗಿನ ಎಲ್ಲವೂ ಸೇರಿಕೊಳ್ಳುತ್ತವೆ:
- ನಿಮ್ಮ ಎಸ್ಬಿಐ ಎಟಿಎಂ ಅಥವಾ ಬೇರೆ ಬ್ಯಾಂಕಿನ ಎಟಿಎಂಗಳಿಂದ ಹಣ ತೆಗೆಯುವುದು.
- ನೇರವಾಗಿ ಎಸ್ಬಿಐ ಬ್ರಾಂಚ್ಗೆ ಹೋಗಿ ಹಣ ಡ್ರಾ ಮಾಡುವುದು.
- ಎಇಪಿಎಸ್ (AEPS – ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ಮೂಲಕ ಮಾಡುವ ವಹಿವಾಟುಗಳು.
