Marriage – ಇತ್ತೀಚಿಗೆ ಪುರುಷರಿಬ್ಬರು ಪ್ರೀತಿಸಿ ಮದುವೆಯಾಗುವುದು, ಮಹಿಳೆಯರಿಬ್ಬರು ಪ್ರೀತಿಸಿ ಮದುವೆಯಾಗುವಂತಹ ಪ್ರಕರಣಗಳು ನಡೆಯುತ್ತಿದೆ. ಅಂತಹುದೇ ಘಟನೆಯೊಂದು ನಡೆದಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿದ ಯುವತಿಯರಿಬ್ಬರು ಮದುವೆಯಾಗಿದ್ದಾರೆ. ಮದುವೆಯಾದ ಮೂರೇ ದಿನದಲ್ಲಿ ಅವರ ಸಂಬಂಧ ಮುರಿದುಬಿದ್ದಿದೆ. ಈ ವಿಚಿತ್ರ ಘಟನೆ ರಾಜಸ್ಥಾನದ ಝಾಲಾವಡ್ (Marriage) ಜಿಲ್ಲೆಯ ಭವಾನಿ ಮಂಡಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಝಾಲಾವಡ್ ಜಿಲ್ಲೆಯ ಭವಾನಿ ಮಂಡಿಯಲ್ಲಿ ಸೋನಂ ಮಾಳಿ ಮತ್ತು ಭೈಸೋದಾಮಂಡಿಯ ರೀನಾ ಶರ್ಮಾ ಎಂಬುವವರು ನಾಲ್ಕು ವರ್ಷಗಳಿಂದ ಪ್ರೀತಿಸಿದ್ದರಂತೆ. ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡಿಕೊಂಡಿದ್ದು, ನ್ಯಾಯಾಲಯದ ಆವರಣದಲ್ಲಿ ವಕೀಲರ ಮುಂದೆ ವಿವಾಹವಾದರು. ಮದುವೆಗೂ ಮುನ್ನಾ ಇಬ್ಬರೂ ತುಂಬಾ ಅನ್ಯೋನ್ಯವಾಗಿದ್ದರು. ಇಬ್ಬರೂ ಸುಖ-ದುಃಖ ಹಂಚಿಕೊಳ್ಳುತ್ತಿದ್ದರಂತೆ. ಇಬ್ಬರೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ. ದಿನವಿಡೀ ಕೆಲಸ ಮಾಡಿದ ಬಳಿಕ ಗಂಟೆಗಳ ಕಾಲ ಪೋನ್ ಮೂಲಕ ಮಾತನಾಡಿಕೊಳ್ಳುತ್ತಿದ್ದರಂತೆ. ನಂತರ ಅವರ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ದಿನಗಳು ಕಳೆದ ಬಳಿಕ ರೀನಾಳಿಗೆ ಮದುವೆ ಮಾಡಲು ಮನೆಯವರು ಮುಂದಾಗಿದ್ದರಂತೆ. ಅದಕ್ಕೆ ಒಪ್ಪದ ರೀನಾ ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ಸೋನಂ ಮನವೊಲಿಸಿ ಮದುವೆಗೆ ಸಿದ್ದರಾದರು. ಇಬ್ಬರು ನಿರ್ಧಾರ ಮಾಡಿದಂತೆ ನ್ಯಾಯಾಲಯದ ಆವರಣದಲ್ಲಿ ವಕೀಲರ ಮುಂದೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಮದುವೆಯಾದ ಬಳಿಕ ಮೊದಲ ರಾತ್ರಿ ಶಾಸ್ತ್ರ ಸೇರಿದಂತೆ ಮತ್ತಿತರೆ ಕೆಲವು ಕಾರ್ಯಕ್ರಮಗಳನ್ನು ಮಾಡಿದ 3 ದಿನದೊಳಗೆ ತಾವಿಬ್ಬರೂ ಹುಡುಗಿಯರು ಏನೂ ಮಾಡಲು ಸಾಧ್ಯವಿಲ್ಲ. ಅದರ ಜೊತೆಗೆ ಈ ಜೋಡಿ ಬಡವರಾಗಿರುವ ಕಾರಣ ಸಲಿಂಗ ವಿವಾಹ ಮಾಡಿಕೊಂಡು ಸಮಾಜದಲ್ಲಿ ಜೀವನ ಸಾಗಿಸುವುದು ತುಂಬಾನೆ ಕಷ್ಟ ಎಂದು ಭಾವಿಸಿ, ಮದುವೆಯಾದ ಮೂರೇ ದಿನದಲ್ಲಿ ಇಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಕೆಲವೊಂದು ನಿರ್ಧಾರಗಳನ್ನು ಆತುರದಲ್ಲಿ ತೆಗೆದುಕೊಂಡಾಗ ಅಥವಾ ಕೆಲವೊಂದು ಭಾವನೆಗಳ ಪ್ರಭಾವಕ್ಕೆ ಗುರಿಯಾಗಿ ಈ ರೀತಿಯ ನಿರ್ಧಾರಗಳು ತೆಗೆದುಕೊಂಡರೇ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ.