Allu Arjun – ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ (Sandhya Theatre Stampede Case) ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್ (Allu Arjun) ರವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಾಂಪಲ್ಲಿ ಕೋರ್ಟ್ ಆದೇಶ ನೀಡಿದೆ. ಹೈದರಾಬಾದ್ ನ ಸಂಧ್ಯಾ ಥಿಯೇಟರ್ ದುರಂತ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. (Allu Arjun) ಅಲ್ಲು ಅರ್ಜುನ್ 14 ದಿನಗಳ ಜೈಲು ವಾಸದಿಂದ ತಪ್ಪಿಸಿಕೊಂಡಂತಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ‘ಪುಷ್ಪ 2’ (Allu Arjun) ಪ್ರೀಮಿಯರ್ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ನಿಧನ ಹೊಂದಿದ್ದಳು. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ (Allu Arjun) ರವರನ್ನೂ ಸಹ ಆರೋಪಿಯನ್ನಾಗಿ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಡಿ.13 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಅಲ್ಲು ಅರ್ಜುನ್ ರವರನ್ನು ಬಂಧನ ಮಾಡಲಾಗಿದೆ. ಬಳಿಕ ಅವರನ್ನು ನಾಂಪಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ. ಅದರಂತೆ (Allu Arjun)ಅಲ್ಲು ಅರ್ಜುನ್ ರವರನ್ನು ಚಂಚಲಗೂಡ ಜೈಲಿಗೆ ಕಳುಹಿಸಲಾಗಿದೆ. ಜೈಲಿಗೆ ಹೋದ ಕಡಿಮೆ ಸಮಯದಲ್ಲೇ ತೆಲಂಗಾಣ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಸಹ ದೊರೆತಿದೆ.
ಪುಷ್ಪಾ-2 ಸಿನೆಮಾದ ಪ್ರೀಮಿಯರ್ ಶೋ ಅನ್ನು ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಥಿಯೇಟರ್ ಗೆ (Allu Arjun) ಅಲ್ಲು ಅರ್ಜುನ್ ಬರುತ್ತಾರೆ ಎಂದು ತಿಳಿದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೆಚ್ಚು ಜನರು ಬಂದ ಕಾರಣದ ಅಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ವೇಲೆ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಈ ಘಟನೆಗೆ ಅಲ್ಲು ಅರ್ಜುನ್ (Allu Arjun) ರವರೂ ಸಹ ಕಾರಣ ಎಂಬ ಆರೋಪ ಇರುವ ಕಾರಣ ಅವರ ವಿರುದ್ದ ಎಫ್.ಐ.ಆರ್ ಸಹ ದಾಖಲಾಗಿತ್ತು.

ಇನ್ನೂ ಇಂದು ಮುಂಜಾನೆ ಅಲ್ಲು ಅರ್ಜುನ್ (Allu Arjun)ರವರ ಬಂಧನಕ್ಕಾಗಿ ಪೊಲೀಸರು ಅವರ ಮನೆಗೆ ಹೋಗಿದ್ದು, ಬೆಡ್ ರೂಂ ನಲ್ಲಿರುವಾಗಲೇ ಬಂಧನ ಮಾಡಲಾಗಿತ್ತು. ಈ ಕುರಿತು ಅಲ್ಲು ಅರ್ಜುನ್ ಅಸಮಧಾನ ಹೊರಹಾಕಿದ್ದಾರೆ. ನಾನು ಪೊಲೀಸರಿಗೆ ಸಹಕಾರ ನೀಡಲು ಸಿದ್ದವಾಗಿದ್ದೆ. ಆದರೆ ಬೆಡ್ ರೂಂ ಗೆ ನುಗ್ಗುವ ಅವಶ್ಯಕತೆಯಾದರೂ ಏನಿತ್ತು. ನಾನು ಬೆಡ್ ರೂಂ ನಲ್ಲಿ ಬಟ್ಟೆ ಬದಲಿಸಿಕೊಳ್ಳುತ್ತಿದ್ದೆ. ಹೊರಗೆ ಬಂದು ಕರೆದಿದ್ದರೇ ನಾನೇ ಬರುತ್ತಿದೆ. (Allu Arjun)ನೀವು ಬಂದು ನನ್ನ ಕರೆದುಕೊಂಡು ಹೋಗಿದ್ದು ತಪ್ಪಲ್ಲ, ಆದರೆ ಬೆಡ್ ರೂಂ ಹತ್ರ ಬಂದಿದ್ದು ತಪ್ಪು ಇದು ಒಳ್ಳೆಯದಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.