Monday, June 30, 2025
HomeNationalSainik School: ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ, 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳು...

Sainik School: ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ, 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು….!

Sainik School – ದೇಶದಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ಆಹ್ವಾನಿಸಿದ್ದು, ಜ.13ರೊಳಗೆ ಅಧಿಕೃತ ವೆಬ್ ಸೈಟ್ aissee2025.ntaonline.in ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.  ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

Sainik School Entrance Exam 2025 1

ಸೈನಿಕ ಶಾಲೆಗಳ 2025-26ನೇ ಸಾಲಿನ ಪ್ರವೇಶಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷಾ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. 6ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಶಾಲೆಗಳಲ್ಲಿ ವಸತಿ ಶಾಲಾ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಜನವರಿ 13ರೊಳಗೆ ಅಧಿಕೃತ ವೆಬ್‌ಸೈಟ್ aissee2025.ntaonline.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇನ್ನೂ ಸೈನಿಕ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ 10-12 ವರ್ಷದೊಳಗಿನ ಅಂದರೇ 1-4-2013 ರಿಂದ 31-3-2015 ರ ನಡುವೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. 9ನೇ ತರಗತಿ ಪ್ರವೇಶಕ್ಕೆ 13-15 ವರ್ಷದೊಳಗಿನ ಅಂದರೇ 1-4-2010 ರಿಂದ 31-3-2012 ರ ನಡುವೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶದ ಸಮಯದಲ್ಲಿ 8ನೇ ತರಗತಿ ಮುಗಿಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಭಾಗಕ್ಕೆ 650 ರೂ ಹಾಗೂ ಸಾಮಾನ್ಯ, ಒಬಿಸಿ (ಎನ್‌ಸಿಎಲ್), ರಕ್ಷಣಾ, ಮಾಜಿ ಸೈನಿಕ ವಿಭಾಗಕ್ಕೆ 800 ರೂ ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜ.13 ಕೊನೆಯ ದಿನಾಂಕವಾಗಿದೆ.

Sainik School Entrance Exam 2025 2

Apply Online for Sainik School Admission 2025

  • Go to the Website : Visit the official site: aissee.nta.nic.in
  • Register Yourself: Click on “New Registration” and fill in basic details like your name, date of birth, and contact info.
  • Fill Out the Form: Log in to your account and complete the form with all the necessary details. Make sure everything is correct.
  • Upload Documents : Scan and upload the required documents. Check the size and format to ensure they’re accepted.
  • Pay the Fee : Pay the application fee online using UPI, Debit Card, or Net Banking.
  • Submit the Form : Review everything to avoid mistakes, then hit “Submit.” Don’t forget to save or print a copy for future use!
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular