Local News -ಜ. 11 ರಂದು ನೆಲಮಂಗಲದಲ್ಲಿ ನಡೆಯಲಿರುವ ಗಾಣಿಗರ ಹಬ್ಬದ ಬೃಹತ್ ಸಮಾವೇಶಕ್ಕೆ ಬಾಗೇಪಲ್ಲಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಕುಲ ಬಾಂಧವರು ಭಾಗವಹಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್ ಕೋರಿದರು. ಪಟ್ಟಣದ ಪ್ರವಾಸ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಗಾಣಿಗರ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರಿನ ನೆಲಮಂಗಲ ಸಮೀಪದಲ್ಲಿರುವ ಶ್ರೀ ಕ್ಷೇತ್ರ ತೈಲೆಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಅದ್ದೂರಿ ಗಾಣಿಗರ ಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ರಾಜ್ಯದ ಸುಮಾರು 25 ಸಾವಿರ ಗಾಣಿಕ ಸಮುದಾಯದ ಬಂಧುಗಳು ಭಾಗವಹಿಸಲಿದ್ದಾರೆ. ಮಹಾಸ್ವಾಮೀಜಿಗಳ 2ನೇ ವರ್ಷದ ಪೀಠಾರೋಹಣ, ಪ್ರವಚನಾಲಯ,ಶಾಲಾ ಕಟ್ಟಡ ಮತ್ತು ಪ್ರಸಾದ ಮನೆಯ ಉದ್ಘಾಟನೆಯನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರವರು ಮಾಡಲಿದ್ದು ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಬಾಗೇಪಲ್ಲಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ವಿಶೇಷ ಕಾಳಜಿಯಿಂದ ಗಾಣಿಕ ಸಮುದಾಯಕ್ಕೆ 20 ಗುಂಟೆ ಜಮೀನು ಮಂಜೂರು ಮಾಡಿಸಿದ್ದು ಸಮಯದಾಯ ಅವರಿಗೆ ಸದಾ ಚಿರಋಣಿಯಾಗಿರುತ್ತದೆ ಮತ್ತು ಕೃತಜ್ಞತಾಪೂರ್ವಕವಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರನ್ನು ಗಾಣಿಗರ ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ನಂತರ ಸಮುದಾಯದ ಮುಖಂಡರು ಪಟ್ಟಣಕ್ಕೆ ಸಮೀಪದಲ್ಲಿ ಸಮುದಾಯಕ್ಕೆ ಮಂಜೂರಾಗಿರುವ ಜಮೀನನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಸಂಚಾಲಕ ವಿಜಯಕುಮಾರ್, ದೇವಗಾಣಿಗರ ಸಂಘದ ಅಧ್ಯಕ್ಷ ರಮೇಶ್, ಬಾಗೇಪಲ್ಲಿ ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ.ರಾಮಕೃಷ್ಣಪ್ಪ, ಉಪಾಧ್ಯಕ್ಷ ಶಂಕರ, ರಾಮಯ್ಯ, ಮುನಿರಾಜು ಮತ್ತಿತರರು ಇದ್ದರು.