ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹಿಳೆಯೊಬ್ಬರು ಹಿರಿಯ ವ್ಯಕ್ತಿಯ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತ್ಯೆಜಿಸಿದ್ದಾಳೆ. 69 ವರ್ಷದ ಹಿರಿಯ ವ್ಯಕ್ತಿಯ ಜೀವ ಉಳಿಸಲು ಹೋಗಿ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮನೆಯ ಬೆಳಕಾಗಿದ್ದ ಮಹಿಳೆಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದುರ್ದೈವಿಯನ್ನು ಅರ್ಚನಾ ಕಾಮತ್ ಎಂದು ಗುರ್ತಿಸಲಾಗಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವಾಸಿಯಾಗಿದ್ದ ಅರ್ಚನಾ ಕಾಮತ್, ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಅರ್ಚನಾ ರವರಿಗೆ ಸೇವಾ ಮನೋಭಾವ ಕೊಂಚ ಹೆಚ್ಚಾಗಿಯೇ ಇತ್ತು ಎನ್ನಲಾಗಿತ್ತು. ಯಾರು ಏನೆ ಸಮಸ್ಯೆ ಅಂತಾ ಬಂದ್ರೂ ಮುಂದೆ ನಿಂತು ಸಮಸ್ಯೆ ಬಗೆಹರಿಸುವಂತಹ ಕೆಲಸ ಮಾಡುತ್ತಿದ್ದರು, ಜೊತೆಗೆ ತನ್ನಿಂದಾಗುವಂತಹ ಸಹಾಯ ಮಾಡುತ್ತಿದ್ದರು. ಈ ರೀತಿಯ ಸೇವಾ ಮನೋಭಾವ ಹೊಂದಿದ್ದ ಅರ್ಚನಾ ಇದೀಗ ಮತ್ತೊಂದು ಜೀವ ಉಳಿಸಲು ಹೋಗಿ ಇಹ ಲೋಕ ತ್ಯೆಜಿಸಿದ್ದಾರೆ.
ಮೃತ ಅರ್ಚನಾ ಕಾಮತ್ ರವರ ಪತಿಯ ಹಿರಿಯ ಸಂಬಂಧಿಕರೊಬ್ಬರಿಗೆ ಆರೋಗ್ಯ ಸಮಸ್ಯೆಯಾಗಿತ್ತು. 69 ವರ್ಷದ ಮಹಿಳೆಗೆ ಯಕೃತ್ತಿನ ಸಮಸ್ಯೆ ಕಾಣಿಸಿಕೊಂಡಿತ್ತು. ಯಕೃತ್ ಕಸಿ ಮಾಡಿಸಲು ಅವರ ಕುಟುಂಬಸ್ಥರು ಮುಂದಾಗಿದ್ದರು. ಆದರೆ ಕುಟುಂಬದ ಇತರ ಸದಸ್ಯರ ರಕ್ತದ ಮಾದರಿ ರೋಗಿಯ ಮಾದರಿಗೆ ಹೊಂದಾಣಿಕೆಯಾಗಿಲ್ಲ. ಈ ವೇಳೆ ಅರ್ಚನಾ ರವರ ರಕ್ತದ ಮಾದರಿ ಹಿರಿಯರ ರಕ್ತದ ಮಾದರಿಗೆ ಹೊಂದಾಣಿಕೆಯಾಗಿತ್ತು. ಈ ಕಾರಣದಿಂದ ಅವರು ತಮ್ಮ ಯಕೃತ್ತಿನ ಭಾಗ ದಾನ ಮಾಡಲು ಒಪ್ಪಿಕೊಂಡಿದ್ದರಂತೆ. ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ 12 ದಿನಗಳ ಹಿಂದೆ ಯಕೃತ್ ಕಸಿಯ ಆಪರೇಷನ್ ನಡೆದಿದೆ. ಅರ್ಚನಾ ರವರ ಯಕೃತ್ತಿನ ಒಂದು ಭಾಗವನ್ನು 69 ವರ್ಷದ ಮಹಿಳೆಗೆ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.
ಬಳಿಕ ಚಿಕಿತ್ಸೆ ಪಡೆದುಕೊಂಡ ಅರ್ಚನಾ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕೆಲವು ದಿನಗಳ ಬಳಿಕ ಅರ್ಚನಾಗೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅರ್ಚನಾಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಸೋಂಕಿನ ಕಾರಣದಿಂದಾಗಿ ಅರ್ಚನಾಗೆ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇನ್ನೂ ಅರ್ಚನಾ ಕಾಮತ್ ರವರಿಗೆ 4 ವರ್ಷದ ಮಗು ಸಹ ಇದೆ. ಅರ್ಚನಾ ರವರ ಅಕಾಲಿಕ ಮರಣ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.