Raksha Bandha 2024- ಭಾರತದ ಸಂಪ್ರದಾಯದಲ್ಲಿ ರಕ್ಷಾ ಬಂಧನ ಎಂಬುದು ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವಂತಹ ರಕ್ಷಾ ಬಂಧನ (Raksha Bandha 2024) ಹಬ್ಬ ಇನ್ನೇನು ಹತ್ತಿರವೇ ಇದೆ. ಆ.19 ರಂದು ದೇಶದಾದ್ಯಂತ ರಕ್ಷಾ ಬಂಧನ ಆಚರಿಸಲು ಸಹೋದರಿಯರು ಸಿದ್ದರಾಗಿದ್ದಾರೆ. ಇನ್ನೂ ದೂರದಲ್ಲಿರುವಂತಹ ಸಹೋದರರಿಗೆ ರಕ್ಷಾ ಬಂಧನ ಕಳುಹಿಸಲು ಅಂಚೆ ಇಲಾಖೆ ಹೊಸ ಸೇವೆಯನ್ನು ಆರಂಭಿಸಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಪ್ರೀತಿಯ ಸಹೋದರನಿಗೆ ರಾಖಿಯನ್ನು ಕಳುಹಿಸುವ ಅವಕಾಶ ಅಂಚೆ ಇಲಾಖೆ ಒದಗಿಸಿದೆ.
ರಕ್ಷಾ ಬಂಧನ ಹಬ್ಬವನ್ನು ಅಕ್ಕ-ತಂಗಿಯರು ತುಂಬಾ ಪ್ರೀತಿಯಿಂದ ಆಚರಿಸುತ್ತಾರೆ. ಆದರೆ ಕೆಲವರಿಗೆ ತಮ್ಮ ಸಹೋದರರು ತುಂಬಾ ದೂರದಲ್ಲಿರುವುದರಿಂದ ರಾಖಿ ಕಟ್ಟಲು ಆಗುವುದಿಲ್ಲ. ಆದ್ದರರಿಂದ ಅಂಚೆ ಇಲಾಖೆಯ ಇದಕ್ಕೆ ಪರಿಹಾರ ನೀಡಿದೆ. ಅಂದರೇ ದೂರದಲ್ಲಿರುವ ನಿಮ್ಮ ಸಹೋದರನಿಗೆ ರಾಖಿ ಕಳುಹಿಸುವಂತಹ ಹೊಸ ಸೇವೆಯನ್ನು ಒದಗಿಸಿದೆ. ಒಂದು ವೇಳೆ ನಿಮ್ಮ ಸಹೋದರ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿಗೂ ಸಹ ಅಂಚೆ ಇಲಾಖೆಯ ಮೂಲಕ ರಾಖಿಯನ್ನು ಕಳುಹಿಸಬಹುದಾಗಿದೆ. ನಿಮ್ಮ ಸಹೋದರರಿಗೆ ಹೇಗೆ ರಾಖಿ ಕಳುಹಿಸಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.
https://www.facebook.com/watch/?v=1135382340865949
ನಿಮ್ಮ ಸಹೋದರ ದೇಶದ ಯಾವುದೇ ಮೂಲೆಯಲ್ಲಿ ರಕ್ಷಾ ಬಂಧನವನ್ನು ಕಳುಹಿಸಬಹುದಾಗಿದೆ. ಅದಕ್ಕಾಗಿ ಅಂಚೆ ಇಲಾಖೆ ಹೊಸ ಸೇವೆ ಆರಂಭಿಸಿದೆ. https://karnatakapost.gov.in:4431/RakhiPost/ ತಾಣದ ಮೂಲಕ ರಾಖಿಯನ್ನು ತಮ್ಮ ಸಹೋದರರಿಗೆ ತಲುಪಿಸಬಹುದಾಗಿದೆ. ಈ ವೆಬ್ ಸೈಟ್ ಗ ಭೇಟಿ ನೀಡಬೇಕು. ಬಳಿಕ ಎರಡು ಮಾದರಿಯಲ್ಲಿ ರಾಖಿಗಳು ಕಾಣಿಸುತ್ತವೆ. ಅದರಲ್ಲಿ 120 ಹಾಗೂ 140 ರೂಪಾಯಿಗಳ ರಾಖಿ ಲಭ್ಯವಿರುತ್ತದೆ. ಇದರಲ್ಲಿ ಪ್ರಿಂಟೆಂಡ್ ಆಗಿರುವಂತಹ ರಾಖಿಯನ್ನು ಸಹ ಕಳುಹಿಸಬಹುದಾಗಿದೆ. ತಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿ, ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, ಬಳಿಕ ರಾಖಿ ಸ್ವೀಕರಿಸುವಂತಹ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿಬೇಕು. ಬಳಿಕ ಆನ್ ಲೈನ್ ನಲ್ಲಿ ನಿಗಧಿತ ಮೊತ್ತವನ್ನು ಪಾವತಿಸಿ ನಿಮ್ಮ ಸಹೋದರನಿಗೆ ರಾಖಿಯನ್ನು ಕಳುಹಿಸಬಹುದಾಗಿದೆ.