Wedding invitation card: ಮದುವೆ ಅಂದ್ರೇನೆ ದೊಡ್ಡ ಸಂಭ್ರಮ ಎಂದೇ ಹೇಳಲಾಗುತ್ತದೆ. ತಮ್ಮ ಶಕ್ತಿಗೂ ಮೀರಿ ಸಾಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಗಳನ್ನು ಮಾಡುತ್ತಿರುತ್ತಾರೆ. ಮದುವೆಯ ಆಮಂತ್ರಣ ಕಾರ್ಡ್ ಗಳನ್ನು ತುಂಬಾನೆ ಆಕರ್ಷಕವಾಗಿರಬೇಕೆಂದು ದುಬಾರಿಯಾದ ಕಾರ್ಡ್‌ಗಳನ್ನು ಹಂಚುತ್ತಿರುತ್ತಾರೆ. ರಾಜಸ್ಥಾನ ಮೂಲದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಮದುವೆಯ ವೆಡ್ಡಿಂಗ್ ಕಾರ್ಡ್ ಇಷ್ಟೊಂದು ಸದ್ದು ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸಾಮಾನ್ಯವಾಗಿ ಹಿಂದು ಸಂಪ್ರದಾಯದಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಗಣೇಶ, ವೆಂಕಟೇಶ್ವರ, ಸೀತಾ-ರಾಮ ಅಥವಾ ಕೃಷ್ಣ ಪರಮಾತ್ಮನ ಭಾವಚಿತ್ರಗಳನ್ನು ಬಳಸಲಾಗುತ್ತಿರುತ್ತದೆ. ಆದರೆ ಇಲ್ಲೊಂದು ಮದುವೆ ಕಾರ್ಡ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಮಬಾನೆ ಸದ್ದು ಮಾಡುತ್ತಿದೆ. ಮದುವೆಯ ಕಾರ್ಡ್‌ನಲ್ಲಿ ದೇವರ ಪೊಟೋ ಬದಲಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಈ ಜೋಡಿ ದೇವರ ಚಿತ್ರಗಳ ಬದಲಿಗೆ ಅಂಬೇಡ್ಕರ್ ಅವರ ಫೋಟೋ ಬಳಸುವ ಮೂಲಕ ಹೊಸ ಸಂದೇಶವನ್ನು ನೀಡಿದ್ದಾರೆ.

ಈ ವಿಶೇಷ ಮದುವೆ 2025ರ ಫೆಬ್ರವರಿ 13 ರಂದು ನಡೆಯಲಿದೆ. ಆಮಂತ್ರಣ ಪತ್ರಿಕೆಯ ಪ್ರಕಾರ, ವಧು ನಿಷಾ ಮತ್ತು ವರ ರಾಜಕುಮಾರ್ ಎಂಬ ದಂಪತಿ ಈ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಾಲೆಂಟೈನ್ಸ್ ಡೇಗೂ ಒಂದು ದಿನ ಮೊದಲು ನಡೆಯಲಿರುವ ಈ ಮದುವೆಯ ಆಮಂತ್ರಣ ಪತ್ರಿಕೆ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಮದುವೆ ಆಮಂತ್ರಣ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ನೀಡುತ್ತಿರುವ ಅದ್ಬುತವಾದ ಗೌರವ, ಅಂಬೇಡ್ಕರ್ ರವರು ಅನೇಕರಿಗೆ ದೇವರಿದ್ದಂತೆ, ನವ ಜೋಡಿಯ ಈ ಕೆಲಸಕ್ಕೆ ಸಲಾಂ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.