ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಗೆ ಮದುವೆಯ ಬಗ್ಗೆ ಪ್ರಶ್ನೆ, ನಗುತ್ತಾ ಉತ್ತರಿಸಿದ ರಾಗಾ…..!

ಕಾಂಗ್ರೇಸ್ ಯುವ ನಾಯಕ ರಾಹುಲ್ ಗಾಂಧಿಯವರು ಮದುವೆಯ ವಯಸ್ಸು ದಾಟಿ ವರ್ಷಗಳು ಕಳೆಯುತ್ತಿದ್ದರೂ ಮದುವೆಯಾಗಿಲ್ಲ. ಅವರ ಮದುವೆಯ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಕೇಳಿಬಂದಿದೆ. ಇದೀಗ ಲೋಕಸಭಾ ಚುನಾವಣೆಯ ಬ್ಯುಸಿಯ ನಡುವೆ ರಾಹುಲ್ ಗಾಂಧಿಗೆ ಮದುವೆಯ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ನಗುತ್ತಲೇ ಉತ್ತರಿಸಿದ್ದಾರೆ ರಾಹುಲ್ ಗಾಂಧಿ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Rahul gandhi reaction about marriage question 2

ಲೋಕಸಭಾ ಚುನಾವಣೆ 2024 ನಿಮಿತ್ತ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಅವರು ಈ ಬಾರಿ ರಾಯ್ ಬರೇಲಿಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಈ ಸಂಬಂಧ ಆಯೋಜಿಸಿದ್ದ ರಾಲಿಯಲ್ಲಿ ಭಾವೋಗ್ವೇದಿಂದ ಕೂಡಿದ ಭಾಷಣ ಮಾಡಿದ್ದಾರೆ. ಈ ಭಾವೋಗ್ವೇದ ಭಾಷಣದ ನಡುವೆ ರಾಹುಲ್ ಗಾಂಧಿಯ ಮದುವೆಯ ಪ್ರಶ್ನೆ ಸಹ ಎದುರಾಗಿದೆ. ರಾಹುಲ್ ಗಾಂಧಿ ನೀವು ಯಾವಾಗ ಮದುವೆಯಾಗುತ್ತೀರಾ ಎಂದು ಪ್ರಚಾರದ ರಾಲಿಯಲ್ಲಿ ಕೇಳಿದ್ದು, ಅದಕ್ಕೆ ನಗುತ್ತಲೇ ಉತ್ತರಿಸಿದ್ದಾರೆ ರಾಹುಲ್ ಗಾಂಧಿ. ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Rahul gandhi reaction about marriage question 1

ಕಳೆದ ಮೇ.3 ರಂದು ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಹಾಗೂ ಕೆ.ಎಲ್.ಶರ್ಮಾ ಅಮೇಥಿಯಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ರಾಯ್ ಬರೇಲಿ (rae bareli) ಯಲ್ಲಿ ನಡೆದ ರಾಲಿಯಲ್ಲಿ ರಾಹುಲ್ ಗಾಂಧಿ ವಿರೋಧಿಗಳ ಬಗ್ಗೆ ಭಾಷಣ ಮಾಡಿದ್ದಾರೆ. ಇದೇ ಸಮಯದಲ್ಲಿ ಅಲ್ಲಿ ನೆರೆದಿದ್ದ ಜನರು ರಾಹುಲ್ ಗಾಂಧಿಯವರೇ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಅಬ್ ಜಲ್ದಿ ಹೈ ಕರ್ನಿ ಪಡೆಗಿ ಎಂದಿದ್ದಾರೆ. ಅಂದರೇ ನೀವು ಕೇಳಿದ ಮೇಲೆ ಆದಷ್ಟು ಶೀಘ್ರವಾಗಿ ಮದುವೆಯಾಗುತ್ತೇನೆ ಎಂಬರ್ಥದಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಸಹ ಜೊತೆಯಲ್ಲೇ ಇದ್ದು, ಮುಗುಳು ನಗೆ ಬೀರಿದ್ದಾರೆ.

ಇನ್ನೂ ರಾಯ್ ಬರೇಲಿಯಲ್ಲಿ ಅಭ್ಯರ್ಥಿ ರಾಹುಲ್ ಗಾಂಧಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ನಮ್ಮದು ರಾಯ್ ಬರೇಲಿಯೊಂದಿಗೆ ನೂರು ವರ್ಷಗಳ ಹಳೇಯ ಸಂಬಂಧ. ಕೆಲವು ದಿನಗಳಿಂದೆ ನನ್ನ ತಾಯಿಯೊಂದಿಗೆ ಕುಳಿತಿದ್ದಾಗ, ನನಗೆ ಇಬ್ಬರು ತಾಯಂದಿರು. ಒಬ್ಬರು ಸೋನಿಯಾಗಾಂಧಿ ಮತ್ತೊಬ್ಬರು ಇಂದಿರಾಗಾಂಧಿ ಎಂದು ಹೇಳಿದ್ದೆ. ಆದರೆ ಇದು ನನ್ನ ತಾಯಿಗೆ ಇಷ್ಟವಾಗಿರಲಿಲ್ಲ. ಮಗುವಿಗೆ ದಾರಿ ತೋರಿಸುವವಳು ಹಾಗೂ ರಕ್ಷಣೆ ಮಾಡುವವಳು ತಾಯಿ ಎಂದು ನಾನು ಅವರಿಗೆ ವಿವರವಾಗಿ ಹೇಳಿದೆ. ಇದು ನನ್ನ ತಾಯಿಯರಿಬ್ಬರ ಕರ್ಮಭೂಮಿ. ಈ ಕಾರಣದಿಂದಲೇ ನಾನು ರಾಯ್ ಬರೇಲಿಯಲ್ಲಿ ಸ್ಪರ್ಧೆ ಮಾಡಲು ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Leave a Comment

Your email address will not be published. Required fields are marked *

Scroll to Top