Pawan Kalyan – ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಆ.8 ರಂದು ಬೆಂಗಳೂರಿನ ವಿಧಾನಸೌಧಕ್ಕೆ ಬಂದಿದ್ದರು. ಎರಡೂ ರಾಜ್ಯಗಳ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಭೆಗೆ ಪವನ್ ಕಲ್ಯಾಣ್ (Pawan Kalyan) ಹಾಜರಾಗಲು ಬಂದಿದ್ದರು. ಈ ವೇಳೆ ಕರ್ನಾಟಕ ಸಿಎಂ ಸಿದ್ದರಾಮಯ್ಯನವರನ್ನು ಸಹ ಭೇಟಿಯಾಗಿದ್ದರು. ಪವನ್ ಕಲ್ಯಾಣ್ ರವರ ಬೆಂಗಾವಲು ಪಡೆಯ ವಾಹನದಲ್ಲಿ ಹೆಬ್ಬಾವು (Python) ಪತ್ತೆಯಾಗಿದೆ.
ಜನಸೇನಾ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಡಿಸಿಎಂ (Pawan Kalyan) ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ರವರನ್ನು ಭೇಟಿಯಾಗಿ ಎರಡೂ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 7 ಅಂಶಗಳ ಅಜೆಂಡಾದಡಿ ಮಾತುಕತೆ ನಡೆಸಿದರು. ಕಾಡುಪ್ರಾಣಿಗಳ ಹಾವಳಿ, ನಿಯಂತ್ರಣ, ಕಾಡುಗಳ ರಕ್ಷಣೆ ಹಾಗೂ ಆನೆಗಳನ್ನು ಪಳಗಿಸುವಂತಹ ಸಭೆಯಲ್ಲಿ ಭಾಗವಹಿಸಲು ಪವನ್ ಕಲ್ಯಾಣ್ ಬೆಂಗಳೂರಿಗೆ ಆಗಮಿಸಿದ್ದರು. ಇನ್ನೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ್ದ ಆಂಧ್ರ ಪ್ರದೇಶ ಡಿಸಿಎಂ (Pawan Kalyan) ಪವನ್ ಕಲ್ಯಾಣ್ ಸಭೆ ಮುಗಿಸಿ ವಾಪಸ್ ಹೋಗುವಾಗ ಬೆಂಗಾವಲು ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಬೆಂಗಾವಲು ಪಡೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ವಾಹನ ಪರಿಶೀಲನೆ ಮಾಡಿದ ಉರಗ ರಕ್ಷಣಾ ತಂಡದ ಸದಸ್ಯರು ಹಾವನ್ನು ರಕ್ಷಣೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸದಿಂದ ಇನ್ನೇನು ಹೊರಡಬೇಕಾದ ಸಮಯದಲ್ಲಿ (Pawan Kalyan) ಪವನ್ ಕಲ್ಯಾಣ್ ರವರ ವಾಹನದಲ್ಲಿ ಹೆಬ್ಬಾವು ಸೇರಿಕೊಂಡಿದೆ. ಬೆಂಗಾಲು ವಾಹನದ ಬಾನೆಟ್ ನಲ್ಲಿ ಹೆಬ್ಬಾವಿನ ತಲೆ ಕಂಡುಬಂದಿದೆ. ಬಳಿಕ ಉರಗ ರಕ್ಷಣಾ ತಜ್ಞರು ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಸಾಮಾನ್ಯವಾಗಿ ಹಿರಿಯರು ಹೇಳುವಂತೆ ಹೆಬ್ಬಾವು ಏನಾದರೂ ಒಂದು ವಸ್ತುವನ್ನು ಗಟ್ಟಿಯಾಗಿ ಸುತ್ತಿಕೊಂಡರೇ ಅದನ್ನು ಬಿಡಿಸಲು ತುಂಬಾನೆ ಕಷ್ಟ ಎಂದು ಹೇಳಲಾಗುತ್ತದೆ. ಅದೇ ರೀತಿ ಪವನ್ ಕಲ್ಯಾಣ್ (Pawan Kalyan) ರವರ ಬೆಂಗಾಲು ವಾಹನದಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ಹಿಡಿಯಲು ಹರಸಾಹಸವನ್ನೇ ಪಡೆಬೇಕಾಯ್ತು ಎನ್ನಲಾಗಿದೆ.