Sunday, June 22, 2025
HomeStateDharmastala Yojane: ಧ.ಗ್ರಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ....!

Dharmastala Yojane: ಧ.ಗ್ರಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ….!

Dharmastala Yojane – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ ತಾಲೂಕು ಇವರ ವತಿಯಿಂದ, ಗುಡಿಬಂಡೆ ತಾಲೂಕಿನ  16 ವಿದ್ಯಾರ್ಥಿಗಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ (Dharmastala Yojane) ಯೋಜನೆಯ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಪೆರೇಸಂದ್ರ ಶಂಕರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Dharamstala program at Peresandra 0

ಈ ವೇಳೆ (Dharmastala Yojane)  ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರ ಪ್ರಶಾಂತ್ ರವರು ಮಾತನಾಡಿ, ಸಂಸ್ಥೆಯ ವೀರೇಂದ್ರ ಹೆಗ್ಗಡೆಯವರು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿರುವ ನಿಟ್ಟಿನಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಪೂರಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ. ಇದುವರೆಗೂ ನೂರಾರು ಕೋಟಿಗೂ ಅಧಿಕ ಖರ್ಚು ಮಾಡುತ್ತಿದ್ದು ರಾಜ್ಯದಲ್ಲಿ  ಒಟ್ಟು ಶಾಲಾ ಕಟ್ಟಡ ನಿರ್ಮಾಣಕ್ಕೆ 958.43,  ಸ್ವಯಂ ಸೇವಕ ಶಿಕ್ಷಕರ ಗೌರವ ಧನ 2132.92, ಬೋಧನ ಸಾಮಗ್ರಿ 20.23, ಕ್ರೀಡಾ ಸಾಮಗ್ರಿ  21.10, ಪೀಠೋಪಕರಣ ಒದಗಣೆ 2579.83, ಶಾಲಾ ಶೌಚಾಲಯ 143.76, ಸಾಲ ಕಟ್ಟಡ ದುರಸ್ತಿ  77.03, ಶಾಲಾ ಆವರಣ ರಚನೆ  93.17, ಆಟದ ಮೈದಾನ ರಚನೆ  115.71, ವಿದ್ಯಾರ್ಥಿಗಳಿಗೆ. ವೃತ್ತಿಪರ ಕೋರ್ಸ್ ಗಳಿಗೆ ಸುಜ್ಞಾನಿಧಿ ಶಿಷ್ಯ ವೇತನ ವಿತರಣೆ  11450.01 ಕೋಟಿ  ಶಿಕ್ಷಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

Dharamstala program at Peresandra 1

ಕಾರ್ಯಕ್ರಮದಲ್ಲಿ (Dharmastala Yojane) ಪೇರೆಸಂದ್ರ ಶಾಲಾ ಪ್ರಾಂಶುಪಾಲರಾದ ಶಂಕರಪ್ಪ ರವರು ಮಾತನಾಡಿ ಶಿಕ್ಷಣಕ್ಕೆ ಪೂಜ್ಯರು ಎಷ್ಟು ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾಘನಿಯ ಎಂದರು. ಈ ವೇಳೆ ಮುಖ್ಯ ಅತಿಥಿಗಳಾದ ಶಿಕ್ಷಕರಾದ ಲಕ್ಷ್ಮಣ ರೆಡ್ಡಿ ಯೋಜನಾಧಿಕಾರಿಗಳಾದ ಧನಂಜಯ್, ಒಕ್ಕೂಟದ ಅಧ್ಯಕ್ಷ ಮಂಜುನಾಥ ಮೇಲ್ವಿಚಾರಕಿ ಮಂಜುಳಾ, ಸೇವಾಪ್ರತಿನಿಧಿ ಸುರೇಶ್, VLE ಅಶ್ವಿನಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular