ಉನ್ನತ ವ್ಯಾಸಂಗಕ್ಕಾಗಿ ತಮಿಳುನಾಡಿನಿಂದ ಪೋಲೆಂಡ್ ಗೆ ಹೋಗಿದ್ದ ಯುವಕ ಅಲ್ಲಿನ ಯುವತಿಯೊಂದಿಗೆ ಪ್ರೇಮ ಪಯಣ ಸಾಗಿಸಿದ್ದಾನೆ. ಸುಮಾರು ಮೂರು ವರ್ಷಗಳಿಂದ ಪೋಲೆಂಡ್ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಹಿಂದೂ ಸಂಪ್ರದಾಯದಂತೆ ಆಕೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಈ ಜೋಡಿಯ ವಿವಾಹ ಹಿಂದೂ ಸಂಪ್ರದಾಯದಂತೆ ತಮಿಳುನಾಡಿನಲ್ಲಿ ನಡೆದಿದ್ದು, ಈ ವಿವಾಹ ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುರಿಯಾನಪಲ್ಲಿ ಎಂಬ ಗ್ರಾಮದ ರಮಶಾನ್ (33) ಎಂಬ ಯುವಕ ಉನ್ನತ್ತ ವ್ಯಾಸಂಗಕ್ಕಾಗಿ ಕೆಲವು ವರ್ಷಗಳ ಹಿಂದೆ ಪೋಲೆಂಡ್ ದೇಶಕ್ಕೆ ಹೋಗಿದ್ದರು. ತನ್ನ ಶಿಕ್ಷಣ ಪೂರ್ಣಗೊಳಿಸಿ ಬಳಿಕ ವಿಲ್ಲನೋವಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದರು. ರಮಶಾನ್ ಓದುತ್ತಿರುವಾಗಲೇ ಪೋಲೆಂಡ್ ಯುವತಿ ಇವಲಿನಾ ಮೆತ್ರಾ (30) ಎಂಬಾಕೆಯನ್ನು ಪ್ರೀತಿಸಲು ಶುರುಮಾಡಿದ್ದ. ಇನ್ನೂ ತಮ್ಮ ಪ್ರೀತಿಯ ಬಗ್ಗೆ ರಮಶಾನ್ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಮೊದಲಿಗೆ ಈ ವಿಚಾರ ತಿಳಿದ ರಮಶಾನ್ ಕುಟುಂಬಸ್ಥರು ಶಾಕ್ ಆಗಿ ಮದುವೆಗೆ ನಿರಾಕರಿಸಿದ್ದಾರೆ. ಬಳಿಕ ಮಗನ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅತ್ತ ಇವಲಿನಾ ಮನೆಯಲ್ಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇಬ್ಬರೂ ಪೋಷಕರು ಒಪ್ಪಿಗೆ ಮೇರೆಗೆ ಕಳೆದ ತಿಂಗಳು ಅವರು ಭಾರತಕ್ಕೆ ಬಂದು ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಕಳೆದ ಶನಿವಾರ ವೆಪ್ಪನಪಲ್ಲಿಯ ಫಂಕ್ಷನ್ ಹಾಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮಿಳಿನ ಸಂಪ್ರದಾಯದಂತೆ ಭಾನುವಾರ (ಮೇ.5)ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ವೀಕ್ಷಣೆ ಮಾಡಲು ಸುತ್ತಮುತ್ತಲ ಗ್ರಾಮಗಳ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇನ್ನೂ ಇಂತಹುದೇ ಘಟನೆಯೊಂದು ಕೆಲವು ತಿಂಗಳುಗಳ ಹಿಂದೆ ಜಾರ್ಕಂಡ್ ನಲ್ಲಿ ನಡೆದಿತ್ತು. ಪೋಲೆಂಡ್ ಮೂಲದ ಪೋಲಾಕ್ ಬಾರ್ಬರಾ ಎಂಬಾಕೆ ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾಗಿದ್ದ ಜಾರ್ಖಂಡ್ ನ ಹಜಾರಿಬಾಗ್ ನ ಮೊಹಮದ್ ಶಾದಾಬ್ ನನ್ನು ಹುಡುಕಿಕೊಂಡು ಬಂದು ಮದುವೆಯಾದರು. ಬಾರ್ಬರಾ ಈಗಾಗಲೇ ವಿಚ್ಚೇದನ ಪಡೆದುಕೊಂಡಿದ್ದರು. ಆಕೆಯ ಓರ್ವ ಮಗಳು ಸಹ ಇದ್ದರು. ಆದರೂ ಮೊಹಮದ್ ಶಾದಾಬ್ ಬಾರ್ಬರಾಳನ್ನು ಮದುವೆಯಾಗಿದ್ದ.